
ಬಸವನ ಬಾಗೇವಾಡಿ :ಪಟ್ಟಣದ ಪಿ ಎಲ್ ಡಿ ಬ್ಯಾಂಕಿನ ಅಧ್ಯಕ್ಷರಾದ ಈರಣ್ಣ ಪಟ್ಟಣಶೆಟ್ಟಿ ಅವರ ಮನೆಯಲ್ಲಿ ಎಸ್ಐಆರ್ ಗೆ ಚಾಲನೆಯನ್ನು ತಾಲೂಕಿನ ದಂಡಾಧಿಕಾರಿಗಳಾದ ಶ್ರೀ ವೈ ಎಸ್ ಸೋಮನಕಟ್ಟಿ ಚಾಲನೆ ನೀಡಿ ಮಾತನಾಡಿ ಬಿ ಎಲ್ ಓ ಅಲ್ಲಾಭಕ್ಷ ವಾಲಿಕಾರ್ ಅವರಿಗೆ ಫಾರ್ಮಗಳನ್ನು ತುಂಬವ ಮಾಹಿತಿ ನೀಡಿದರ ಜೊತೆಗೆ ಯಾವುದೇ ಮನೆ ಅಥವಾ ಯಾವುದೇ ವ್ಯಕ್ತಿ ಈ ಪರಿಷ್ಕರಣೆ ಮತದಾರ ಪಟ್ಟಿಯಿಂದ ಹೊರಗ್ ಉಳಿಯದಂತೆ ಎಚ್ಚರಿಕೆಯಿಂದ ಕಾರ್ಯ ಮಾಡಲು ಸೂಚಿಸಿದರು ಈ ಸಂದರ್ಭದಲ್ಲಿ ಕಂದಾಯ ನಿರೀಕ್ಷಕರಾದ ಶ್ರೀ ಎಸ್ ಎಸ್ ದೇಸಾಯಿ ಬಿ ಎಲ್ ಓ ಸೂಪರ್ವೈಸರ್ ಶ್ರೀ ಸಿದ್ದರಾಮ ಶಿರಶ್ಯಾಡ ತಾಲೂಕ ಲಿಂಗಾಯಿತ ಮಹಾಸಭಾದ ಅಧ್ಯಕ್ಷರಾದ ಶ್ರೀ ಎಂ ಜಿ ಆದಿಗೊಂಡ ನ್ಯಾಯವಾದಿಗಳಾದ ಶ್ರೀ ರವಿ ರಾಠೋಡ್ ವಿಶೇಷ ಸಮಗ್ರ ಮತದಾರ ಪಟ್ಟಿ ಪರಿಷ್ಕರಣೆ ಚಾಲನಾ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು ಮನೆಯ ಯಜಮಾನರಾದ ಈರಣ್ಣ ಪಟ್ಟಣಶೆಟ್ಟಿ ಅವರು ಬಿ ಎಲ್ ಓ ಅವರಿಗೆ ಸಮಗ್ರ ಮಾಹಿತಿ ನೀಡಿ ಸಹಕರಿಸಿದರು
























