
ಮಾಲೂರು.ಜೂ.30:ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ಜುಲೈ 1 ರಂದು ಕೋಲಾರ ನಗರದ ಪತಕರ್ತರ ಭವನದಲ್ಲಿ ನಡೆಯಲಿರುವ ಪತ್ರಿಕಾ ದಿನಾಚರಣೆ ಕಾರ್ಯಕ್ರಮದಲ್ಲಿ ಕೋಲಾರ ಪತ್ರಿಕೆ ಸಂಪಾದಕ ದಿ.ಪ್ರಹ್ಲಾದ್ ರಾವ್ ವಿನೆನಪಿನಲ್ಲಿ ಪ್ರಶಸ್ತಿ ಪುರಸ್ಕೃತರಾದ ಸಂಜೆವಾಣಿ ಕೋಲಾರ ಪತ್ರಿಕೆ ವಾಸ್ತವ ಕರ್ನಾಟಕ ತಾಲ್ಲೂಕು ವರದಿಗಾರ ಎಸ್.ನಾರಾಯಣಸ್ವಾಮಿ ಅವರನ್ನು ಕಾರ್ಯಕ್ರಮಕ್ಕೆ ಆಹ್ವಾನಿಸಲಾಯಿತು.
ಸದ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ತಾ. ಅಧ್ಯಕ್ಷ ಡಿ ಎಂ ವಿಜಯ ಕುಮಾರ್ ಸಂಘದ ಪದಾಧಿಕಾರಿಗಳೊಂದಿಗೆ ಆಹ್ವಾನ ಪತ್ರಿಕೆ ನೀಡಿ ಅಭಿನಂದಿಸಿ ಎಸ್.ನಾರಾಯಣಸ್ವಾಮಿರನ್ನು ಸ್ವಾಗತಿಸಲಾಯಿತು
ಈ ಸಂದರ್ಭದಲ್ಲಿ ಮಾತನಾಡಿದ ತಾಲೂಕು ಕಾರ್ಯನಿರತ ಪತ್ರಕರ್ತ ಸಂಘದ ಅಧ್ಯಕ್ಷ ಡಿಎಂ ವಿಜಯ ಕುಮಾರ್ ಮಾತನಾಡಿ,ಪ್ರತಿ ವರ್ಷ ಜಿಲ್ಲಾ ಕೇಂದ್ರದಲ್ಲಿ ಜಿಲ್ಲಾ ಕಾರ್ಯನಿರ್ವತ ಪತ್ರಕರ್ತರ ಸಂಘದ ವತಿಯಿಂದ ಅರ್ಥಪೂರ್ಣವಾಗಿ ಪತ್ರಿಕಾ ದಿನಾಚರಣೆಯನ್ನು ಆಚರಿಸುತ್ತಾ ಬರಲಾಗಿದೆ ಎಂದರು.
ಇನ್ನು ಪತ್ರಿಕಾ ದಿನಾಚರಣೆಯಲ್ಲಿ ತಾಲೂಕಿನ ಪತ್ರಿಕೋದ್ಯಮದಲ್ಲಿ ಉತ್ತಮ ರೀತಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಒಬ್ಬರು ಪತ್ರಕರ್ತರನ್ನು ಗುರುತಿಸಿ ಹಿರಿಯರ ಸವಿನೆನಪಿನಲ್ಲಿ ಪ್ರಶಸ್ತಿ ನೀಡಿ ಪೆÇ್ರೀತ್ಸಾಹಿಸುತ್ತಾ ಬಂದಿದ್ದು,ಅದೇ ರೀತಿ ಪ್ರಸಕ್ತ ವರ್ಷ ತಾಲೂಕಿನ ಸಂಜೆವಾಣಿ ಕೋಲಾರ ಪತ್ರಿಕೆ ವಾಸ್ತವ ಕರ್ನಾಟಕ ದಿನಪತ್ರಿಕೆಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಎಸ್ ನಾರಾಯಣಸ್ವಾಮಿ ಕಾರ್ಯವೈಖರಿ ಹಾಗೂ ಪರಿಶ್ರಮವನ್ನು ಗುರುತಿಸಿ ಜಿಲ್ಲಾ ಸಂಘಕ್ಕೆ ಅವರ ಹೆಸರನ್ನು ರವಾನಿಸಲಾಗಿತ್ತು.
ಹೀಗಾಗಿ ಜಿಲ್ಲಾ ಸಂಘವು ಪ್ರಶಸ್ತಿಗೆ ಆಯ್ಕೆ ಮಾಡಿದ್ದು,ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘಕ್ಕೆ ಹೆಮ್ಮೆ ಎನಿಸಿದೆ.ಎಸ್ ನಾರಾಯಣ್ ಸ್ವಾಮಿ ಚಳಿ ಗಾಳಿ ಬಿಸಿಲು ಎನ್ನದೆ ಪತ್ರಿಕಾ ವಿತರಕರಾಗಿ ಪತ್ರಿಕ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದು,ಅವರ ಶ್ರಮವನ್ನು ಗುರುತಿಸಿದಂತಾಗಿದೆ ಎಂದರು.
ಈ ಸಂದರ್ಭದಲ್ಲಿ ಜಿಲ್ಲಾ ಸಂಘದ ಕಾರ್ಯದರ್ಶಿ ರಾಜೇಂದ್ರ ವೈದ್ಯ,ತಾಲೂಕು ಸಂಘದ ಪ್ರಧಾನ ಕಾರ್ಯದರ್ಶಿ ಸಿ.ಎಂ.ನಾರಾಯಣಸ್ವಾಮಿ,ಖಜಾಂಚಿ ಟಿ.ಕೆ ನಾಗರಾಜ್,ಉಪಾಧ್ಯಕ್ಷ ನಂಜುಂಡಪ್ಪ, ಇನ್ನಿತರರು ಹಾಜರಿದ್ದರು.
























