ಗಾಂಧಿನಗರ ವಿಧಾನಸಭಾ ಕ್ಷೇತ್ರದ ಕಾಟನ್‌ಪೇಟೆ ವಾರ್ಡ್‌ನ ಅಕ್ಕಿಪೇಟೆ ಮುಖ್ಯರಸ್ತೆಯಲ್ಲಿ ನೂತನವಾಗಿ ಅಭಿವೃದ್ಧಿಪಡಿಸಿರುವ ಸೀಮೆಂಟ್ ಕಾಂಕ್ರೀಟ್ ರಸ್ತೆ, ಎಲ್‌ಇಡಿ ಬೀದಿ ದೀಪಗಳ ಕಾಮಗಾರಿಯನ್ನು ಮಾಜಿ ಸಚಿವ, ಶಾಸಕ ದಿನೇಶ್ ಗುಂಡೂರಾವ್‌ರವರು ಉದ್ಘಾಟಿಸಿದರು. ಕಾಟನ್‌ಪೇಟೆ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಎಸ್. ಶ್ರೀನಿವಾಸಮೂರ್ತಿ, ಗುತ್ತಿಗೆದಾರ ಚಂದ್ರಮೋಹನ್, ಕಾಂಗ್ರೆಸ್ ಮುಖಂಡರು, ಪಕ್ಷದ ಕಾರ್ಯಕರ್ತರು ಉಪಸ್ಥಿತರಿದ್ದರು.