
ಸಂಜೆವಾಣಿ ವಾರ್ತೆ
ಕೆ.ಆರ್.ನಗರ.ಜೂ.08:- ಹುಣಸೂರು ರಸ್ತೆಯಲ್ಲಿ ನೂತನವಾಗಿ ಪ್ರಾರಂಭವಾದ ಆರ್.ಜೆ.ಎಸ್ ಕಾರ್ ವಲ್ರ್ಡ್‍ಅನ್ನು ಪಟ್ಟಣದ ಖ್ಯಾತ ಮೂಳೆ ತಜ್ಞ ಡಾಕ್ಟರ್ ಮೆಹಬೂಬ್ ಖಾನ್ ಉದ್ಘಾಟನೆ ಮಾಡುವ ಮೂಲಕ ಯಶಸ್ಸುಗೊಳ್ಳಲಿ ಎಂದು ಶುಭ ಹಾರಿಸಿದರು.
ಪಟ್ಟಣದ ಜನತೆಗೆ ಇದು ಒಂದು ಶುಭಸುದ್ದಿ ಇಂದು ಎಲ್ಲಾರ ಆಸೆಯಂತೆ ತಮ್ಮ ತಮ್ಮ ಕನಸಿನ ಕಾರು ವಾಹನ ಕೊಂಡುಕೊಳ್ಳುಲು ಆಸಕ್ತರಾಗುತ್ತಾರೆ ಆದರೆ ಸಂಪೂರ್ಣ ಹಣ ಕಟ್ಟಿಕೊಂಡು ಪಡೆದುಕೊಳ್ಳುಲ್ಲು ಆಗುವುದಿಲ್ಲ ಹಾಗಾಗಿ ಇದನ್ನು ಮನಗಂಡು ಇಲ್ಯಾಸ್ ಮತ್ತು ಫರೋಕ್ ರವರ ಸಾರಥ್ಯದಲ್ಲಿ ಹೊಸದಾಗಿ ಪ್ರಾರಂಭಗೊಂಡಿರುವ ಆರ್.ಜೆ.ಎಸ್ ಕಾರ್ ವಲ್ರ್ಡ್ ಸೆಕೆಂಡ್ಸ್ ಕಾರ್ ಶೋರೂಮ್ ಅನ್ನು ತಾಲ್ಲೂಕಿನ ಜನತೆಗೆ ಪ್ರಸ್ತುತ ಪಡಿಸಲಾಗಿದೆ ಎಂದರು.
ಉತ್ತಮವಾದ ಸೇವೆಯನ್ನು ನೀಡುತ್ತಿದ್ದು ಹಾಗಾಗಿ ಮೈಸೂರಿನ ಅಕ್ಕ-ಪಕ್ಕದ ತಾಲ್ಲೂಕಿನ ಜನತೆ ಬಂದು ತಮ್ಮಗೆ ಇಷ್ಟವಾದ ಕಾರನ್ನು ಪಡೆಯಿರಿ ಜೊತೆಗೆ ಸಾಲ(ಲೋನ್)ಗಳಂತಹ ಸೌಲಭ್ಯಗಳನ್ನು ಒದಗಿಸಲು ಮುಂದಾಗಿದ್ದಾರೆ ಆದ್ದರಿಂದ ಈ ಒಂದು ಅವಕಾಶವನ್ನು ಪಡೆದುಕೊಳ್ಳಬೇಕು ಎಂದು ತಿಳಿಸಿದರು.
ಈ ಸಂದರ್ಭದಲ್ಲಿ ಆರ್.ಜೆ.ಎಸ್ ಮಾಲಿಕ ಇಲ್ಯಾಸ್, ಫರೋಕ, ಪ್ರವೀಣ್, ಗೌಸ್ ಷರೀಫ್, ಅನೂಷ್, ಸೈಯದ್ ಅಸ್ಲಾಂ, ಪ್ರಕಾಶ್ ಮಾಸ್ಟರ್, ವಿನಾಯಕ ಆಂಬುಲೆನ್ಸ್ ಸರ್ವಿಸ್ ನ ಅಪ್ಪು ಸೇರಿದಂತೆ ಇನ್ನಿತರರು ಹಾಜರಿದ್ದರು.



























