
ಕಲಬುರಗಿ,ಜೂ.9-ತಾಲೂಕಿನ ಮಿಣಜಗಿ ಗ್ರಾಮದಲ್ಲಿ ಶ್ರೀ ದತ್ತಾ ಟುಟೋರಿಯಲ್ ಸಂಸ್ಥೆಯಿಂದ ಬೇಸಿಗೆ ಶಿಬಿರ ಮುಕ್ತಾಯ ಸಮಾರಂಭ ಹಾಗೂ 2025 -26 ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಉತ್ತೀರ್ಣರಾದ ವಿದ್ಯಾರ್ಥಿಗಳಿಗೆ ಸನ್ಮಾನಿಸಲಾಯಿತು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕøತಿಕ ಕಾರ್ಯಕ್ರಮ ನಡೆಸಲಾಯಿತು.
ಶಿಬಿರದ ಮುಕ್ತಾಯ ಸಮಾರಂಭದಲ್ಲಿ 10ನೇ ತರಗತಿಯಲ್ಲಿ ಅತಿ ಹೆಚ್ಚು ಅಂಕಗಳಿಸಿದ ಶಿಬಿರದ ಪ್ರಥಮ ಸ್ಥಾನ ಪಡೆದ ಶ್ವೇತಾ ರಮೇಶ್ ಕಡಣಿ ದ್ವಿತೀಯ ಸ್ಥಾನ ಪಡೆದ ಪ್ರಕೃತಿ ಸೈಬಣ್ಣ ಮಿಣಜಗಿ ತೃತೀಯ ಸ್ಥಾನ ಪಡೆದ ಭವಾನಿ ಕಡಣಿ ವಿದ್ಯಾರ್ಥಿಗಳಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
ಈ ಕಾರ್ಯಕ್ರಮದಲ್ಲಿ ಶಿಬಿರದ ಎಲ್ಲಾ ಸಿಬ್ಬಂದಿ ವರ್ಗಕ್ಕೆ ವೇದಿಕೆಯಲ್ಲಿ ಎಲ್ಲ ಭಾಗಿಯಾದ ಪೂಜ್ಯರು, ಗಣ್ಯಮಾನ್ಯರು, ಮತ್ತು ಶಿಕ್ಷಕರು ಸಂಸ್ಥೆಯ ಸಿಬ್ಬಂದಿ ವರ್ಗಕ್ಕೆ ಸನ್ಮಾನಿಸಿದರು.
ಈ ಶಿಬಿರದ ಮುಕ್ತಾಯ ಸಮಾರಂಭದಲ್ಲಿ ಪೂಜ್ಯರು, ಗಣ್ಯಮಾನ್ಯರು, ಶಿಕ್ಷಕರು, ನೆರೆ ಗ್ರಾಮದ ಪಾಲಕರು, ಮತ್ತು ವಿದ್ಯಾರ್ಥಿಗಳು ಭಾಗಿಯಾಗಿದ್ದರು. ಶ್ರೀ ಶಿವಕುಮಾರ್ ನಾಟಿಕರ್ ರಾಜ್ಯಾಧ್ಯಕ್ಷರು ಹಿಂದುಳಿದ ವರ್ಗಗಳ ವಿಭಾಗ ಜೆಡಿಎಸ್ ಇವರು ಶಿಕ್ಷಣದ ಮಹತ್ವದ ಹಾಗೂ ಸಂಸ್ಥೆಯ ಕುರಿತು ಮಾತನಾಡಿದರು. ಅದೇ ರೀತಿಯಾಗಿ ಸಂಸ್ಥೆಯ ಕಾರ್ಯದರ್ಶಿಗಳಾಗಿರುವಂತ ಸಂಗಮನಾಥ ನಾಟಿಕರ್ ಅವರು ಸರಕಾರಿ ನೌಕರಿ ಪಡೆದರೆ ಒಂದೇ ಶಾಲೆಗೆ ಸೀಮಿತವಾಗಿರುತ್ತೇನೆ ಆದರೆ ಟ್ಯುಟೋರಿಯಲ್ ನಿಂದ ಎಲ್ಲಾ ಗ್ರಾಮದ ಮಕ್ಕಳ ಶಿಕ್ಷಕನಾಗಲು ಸಾಧ್ಯ ಎಂದು ಹರ್ಷ ವ್ಯಕ್ತಪಡಿಸಿದರು.
ಈ ಶಿಬಿರವು ನಾಲ್ಕನೇ ವರ್ಷಕ್ಕೆ ಪಾದರ್ಪಣೆಯಾಗಿದ್ದು ಈ ಶಿಬಿರದಲ್ಲಿ 14 ಗ್ರಾಮದ ವಿದ್ಯಾರ್ಥಿಗಳು ತರಬೇತಿ ಪಡೆಯುತ್ತಿದ್ದಾರೆ. ಈ ಶಿಬಿರದಲ್ಲಿ ತರಬೇತಿ ಪಡೆದ ಶ್ವೇತಾ ರಮೇಶ್ ಕಡಣಿ ವಿದ್ಯಾರ್ಥಿನಿ 2025 26 ನೇ ಸಾಲಿನ ಎಸ್‍ಎಸ್‍ಎಲ್‍ಸಿಯಲ್ಲಿ ಸರ್ಕಾರಿ ಪ್ರೌಢಶಾಲೆ ಕಡಣಿ ಪ್ರಥಮ ಸ್ಥಾನ ಪಡೆದು ನಮ್ಮ ಸಂಸ್ಥೆಗೆ ಕೀರ್ತಿ ತಂದಿದ್ದಾಳೆ.
ಶ್ರೀ ದತ್ತಾ ಟುಟೋರಿಯಲ್ಸ್ ವ್ಯವಸ್ಥಾಪಕರಾದ ಅನಿಲ ಆರ್. ನೈಕೋಡಿಯವರು ಕಾರ್ಯಕ್ರಮವನ್ನು ನಿರೂಪಿಸಿದರು.




























