Home ಜಿಲ್ಲೆ ವೈದ್ಯಕೀಯ ಸೇವೆ: ಡಾ. ಸಚಿನ್ ಪಾಟೀಲ್‍ಗೆ ಪ್ರೈಡ್ ಆಫ್ ಕರ್ನಾಟಕ

ವೈದ್ಯಕೀಯ ಸೇವೆ: ಡಾ. ಸಚಿನ್ ಪಾಟೀಲ್‍ಗೆ ಪ್ರೈಡ್ ಆಫ್ ಕರ್ನಾಟಕ

ಬೀದರ: ಕರ್ನಾಟಕ ಮಿಡಿಯಾ ಕ್ಲಬ್‍ವತಿಯಿಂದ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಆಯೋಜಿಸಿದ ಕಾರ್ಯಕ್ರಮದಲ್ಲಿ ಯುವ ವೈದ್ಯರಾದ ಡಾ. ಸಚಿನ್ ಪಾಟೀಲ್ ಅವರಿಗೆ ಪ್ರೈಡ್ ಆಪ್ ಕರ್ನಾಟಕ ಪ್ರಶಸ್ತಿ ನೀಡಿ ಸನ್ಮಾನಿಸಲಾಯಿತು.
ಎಂಬಿಬಿಎಸ್ ಮುಗಿಸಿ ಇಂಟರ್ನಲ್ ಮೆಡಿಸಿನ್‍ನಲ್ಲಿ ಎಂಡಿ ವ್ಯಾಸಂಗ ಪೂರ್ಣಗೊಳಿಸಿದ ನಂತರ ವಿಜಯಶ್ರೀ ಆಸ್ಪತ್ರೆ ಪ್ರಾರಂಭಿಸಿ ಸೇವೆ ಸಲ್ಲಿಸುತ್ತಿದ್ದುದ್ದಲ್ಲದೇ, ಅನೇಕ ಹಳ್ಳಿಗಳಲ್ಲಿ ಉಚಿತ ವೈದ್ಯಕೀಯ ಶಿಬಿರ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಜನರಿಗೆ ಆರೋಗ್ಯದ ಬಗ್ಗೆ ಅರಿವು ಮೂಡಿಸಿ ವೈದ್ಯಕೀಯ ವೃತ್ತಿಯಲ್ಲಿ ತಮ್ಮದೇ ಛಾಪು ಮೂಡಿಸಿ ಅತೀವ ಸೇವೆ ಸಲ್ಲಿಸಿದ ಡಾ. ಸಚ್ಚಿನ್ ಪಾಟೀಲ್ ಅವರಿಗೆ ಪೂಜ್ಯ ಶ್ರೀ ರುದ್ರಮುನಿ ಶಿವಾಚಾರ್ಯ ಸ್ವಾಮೀಜಿ, ಪರಮ ಪೂಜ್ಯ ಸಿದ್ದರಾಯ ಸ್ವಾಮೀಜಿಯ ನೇತೃತ್ವದಲ್ಲಿ ಮತ್ತು ಕರ್ನಾಟಕ ಮೀಡಿಯಾ ಕ್ಲಬ್‍ನ ಅಧ್ಯಕ್ಷರಾದ ರಮೇಶ್ ಎಸ್‍ಜಿ ಹಾಗೂ ನಟ ಚೇತನ ಅವರ ಸಮ್ಮುಖದಲ್ಲಿ ವೈದ್ಯಕೀಯ ಸೇವೆ ಪರಿಗಣಿಸಿ ಡಾ. ಸಚ್ಚಿನ್ ಪಾಟೀಲ್ ಅವರಿಗೆ ಪ್ರೈಡ್ ಆಫ್ ಕರ್ನಾಟಕ ಪ್ರಶಸ್ತಿ ನೀಡಿ ಸತ್ಕರಿಸಿ ಆಶಿರ್ವದಿಸಲಾಯಿತು.
ಈ ಸಂಧರ್ಭದಲ್ಲಿ ಬೆಂಗಳೂರು ವಿಶ್ವವಿದ್ಯಾಲಯದ ಪ್ರಾಚಾರ್ಯರರು, ವಿದ್ಯಾರ್ಥಿಗಳು ಸೇರಿದಂತೆ ಗಣ್ಯರು, ಪ್ರಮುಖರು ಉಪಸ್ಥಿತರಿದ್ದರು.