Home ಮುಖಪುಟ ಸುದ್ದಿ ಗೃಹ ಬಳಕೆ ಎಲ್‌ಪಿಜಿ ದರ ಏರಿಕೆಗೆ ಕಿಡಿ

ಗೃಹ ಬಳಕೆ ಎಲ್‌ಪಿಜಿ ದರ ಏರಿಕೆಗೆ ಕಿಡಿ

ಬೆಂಗಳೂರು, ಜೂ,೭- ದೇಶದಲ್ಲಿ ಗೃಹ ಬಳಕೆಯ ೧೪.೨ ಕೆ.ಜಿ. ತೂಕದ ಎಲ್‌ಪಿಜಿ ಸಿಲಿಂಡರ್ ದರವನ್ನು ೨೯ರಷ್ಟು ಏರಿಕೆ ಮಾಡಿರುವ ಬೆನ್ನಲ್ಲೇ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಧಾನಿ ಮೋದಿ ದೇಶದ ಜನತೆಗೆ ’ಕಡಿಮೆ ಊಟ ಮಾಡಿ’ ಎಂಬ ಆತ್ಮನಿರ್ಭರತೆಯ ಉಚಿತ ಸಲಹೆ ನೀಡಬಹುದೇನೋ ಎಂದು ವ್ಯಂಗ್ಯವಾಡಿದ್ದಾರೆ

ಸಾಮಾಜಿಕ ಮಾಧ್ಯಮದಲ್ಲಿ ಮಾಹಿತಿ ಹಂಚಿಕೊಂಡಿರುವ ಅವರು, ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ೩ ತಿಂಗಳ ಅವಧಿಯಲ್ಲಿ ಎರಡನೇ ಬಾರಿ ೨೯ರಷ್ಟು ಏರಿಕೆಯಾಗಿದೆ. ಹೀಗಾಗಿ ರಾತ್ರಿ ೮ ಗಂಟೆಗೆ ಟಿವಿಯಲ್ಲಿ ಕುಳಿತು ದೇಶದ ಜನತೆಗೆ ’ಕಡಿಮೆ ಊಟ ಮಾಡಿ’ ಎಂಬ ಆತ್ಮನಿರ್ಭರತೆಯ ಉಚಿತ ಸಲಹೆ ನೀಡಬಹುದೇನೋ ಎಂದು ತಿಳಿಸಿದ್ದಾರೆ

ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ನಿಮ್ಮ ಮಾಂಗಲ್ಯ ಕಸಿಯುತ್ತದೆ ಎಂಬ ಅತ್ಯಂತ ಕನಿಷ್ಠ ಮಟ್ಟದ ಹೇಳಿಕೆ ನೀಡಿದ್ದ ಪ್ರಧಾನಿ ನರೇಂದ್ರ ಮೋದಿ ಈಗ ಜನರ ಅನ್ನದ ತಟ್ಟೆಯನ್ನು ಕಸಿಯುತ್ತಿದ್ದಾರೆ. ಈ ಬೆಲೆ ಏರಿಕೆಯ ಅಚ್ಚೇ ದಿನಗಳ ಬಗ್ಗೆ ಕರ್ನಾಟಕ ಬಿಜೆಪಿ ನಾಯಕರ ಗಾಢಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ ಎಂದೂ ಕುಟುಕಿದ್ದಾರೆ

ವಾಣಿಜ್ಯ ಬಳಕೆಯ ಸಿಲಿಂಡರ್ ಬೆಲೆ ದಾಖಲೆ ಮಟ್ಟದಲ್ಲಿ ಏರಿಕೆಯಾದ ಬೆನ್ನಲ್ಲೇ ಗೃಹಬಳಕೆಯ ಸಿಲಿಂಡರ್ ಬೆಲೆ ೩ ತಿಂಗಳ ಅವಧಿಯಲ್ಲಿ ಎರಡನೇ ಬಾರಿ ೨೯ರಷ್ಟು ಏರಿಕೆಯಾಗಿದೆ. ಈ ಬೆಲೆ ಏರಿಕೆಯ ಅಚ್ಚೆ ದಿನಗಳ ಪ್ರಧಾನಿ ನರೇಂದ್ರ ಮೋದಿ ಹೇಳಬೇಕು ಜೊತೆಗೆ ಬಿಜೆಪಿ ನಾಐಕರ ನಾಯಕರ ಗಾಢಮೌನವು ಜನಸಾಮಾನ್ಯರೆಡೆಗೆ ಅವರಿಗಿರುವ ಮಾನಸಿಕ ಕ್ರೌರ್ಯವನ್ನು ತೋರಿಸುತ್ತದೆ ಎಂದು ಹೇಳಿದ್ದಾರೆ