Home ಜಿಲ್ಲೆ ಕಲಬುರಗಿ ಜನಪದ ನೃತ್ಯೋತ್ಸವ : ವಿವಿಧ ಕಲಾತಂಡಗಳ ಮನಮೋಹಕ ಪ್ರದರ್ಶನ ಕಾರ್ಯಕ್ರಮ ಯಶಸ್ವಿ

ಜನಪದ ನೃತ್ಯೋತ್ಸವ : ವಿವಿಧ ಕಲಾತಂಡಗಳ ಮನಮೋಹಕ ಪ್ರದರ್ಶನ ಕಾರ್ಯಕ್ರಮ ಯಶಸ್ವಿ

ಕಲಬುರಗಿ:ಜೂ.4: ಮನಸ್ವಿ ಸಾಂಸ್ಕೃತಿಕ ಹಾಗೂ ನಾಟ್ಯ ಕಲಾವಿದರ ಸಂಘ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಂಯುಕ್ತಾಶ್ರಯದಲ್ಲಿ ಕಲಾ ಮಂಡಳ, ಅನ್ನಪೂರ್ಣ ಕ್ರಾಸ್‍ನಲ್ಲಿ ಭವ್ಯ ಜನಪದ ನೃತ್ಯೋತ್ಸವ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಖ್ಯಾತ ನೃತ್ಯಕಲಾವಿದ ಚಾಂದ ಜಾಕ್ಸನ್ ಉದ್ಘಾಟಿಸಿ ಮಾತನಾಡಿ, ಜನಪದ ಕಲೆ ಮತ್ತು ಸಂಸ್ಕೃತಿಯನ್ನು ಉಳಿಸಿ ಬೆಳೆಸುವಲ್ಲಿ ಇಂತಹ ಕಾರ್ಯಕ್ರಮಗಳ ಪಾತ್ರ ಮಹತ್ವದ್ದಾಗಿದೆ ಎಂದು ಹೇಳಿದರು.
ಕಲ್ಯಾಣ ಕರ್ನಾಟಕ ರಕ್ಷಣಾ ವೇದಿಕೆಯ ಅಧ್ಯಕ್ಷ ಅಭಿಷೇಕ ಬಾಲಾಜಿ, ಕರ್ನಾಟಕ ಸಂಘಟನಾ ವೇದಿಕೆಯ ಸಂಸ್ಥಾಪಕ ರಾಜ್ಯಾಧ್ಯಕ್ಷ ಹಾಗೂ ಚಲನಚಿತ್ರ ನಿರ್ಮಾಪಕ ಗುರು ಬಂಡಿ, ನೃತ್ಯ ಕಲಾವಿದ ದಿನೇಶ ನಾಯಕ್, ಕಲಾವಿದರಾದ ಸೂರ್ಯಕಾಂತ ನಂದೂರ, ಜಗದೀಶ ಅಂಬಲಗಿ, ಜ್ಯೋತಿ ಅಕ್ಷಯ್, ಕವಿತಾ ಕಟ್ಟೆ ಸೇರಿದಂತೆ ಅನೇಕ ಗಣ್ಯರು ಉಪಸ್ಥಿತರಿದ್ದರು.
ಮನಸ್ವಿ ಸಾಂಸ್ಕೃತಿಕ ಹಾಗೂ ನಾಟ್ಯ ಕಲಾವಿದರ ಸಂಘದ ಅಧ್ಯಕ್ಷ ವಿಕ್ರಮ ಗೋಕುಲಕರ ಅಧ್ಯಕ್ಷತೆ ವಹಿಸಿದ್ದರು.
ಕಾರ್ಯಕ್ರಮದಲ್ಲಿ ಪಂಚಾಕ್ಷರಿ ಸಂಗೀತ ಕಲಾತಂಡ, ಪ್ರಿಯಾ ನೃತ್ಯಾಲಯ ಕಲಾತಂಡ, ವಿ.ವಿ.ಎಸ್. ನೃತ್ಯ ಕಲಾತಂಡ, ಸುರಜ್ ಲೋನಾರ್ಸ್ ಕಲಾ ತಂಡ, ದಿನೇಶ ಕಲಾತಂಡ, ಶಾಂತಲೇ ಸಾಂಸ್ಕೃತಿಕ ನೃತ್ಯ ಕಲಾತಂಡ, ಜ್ಯೋತಿ ಜನಪದ ಕಲಾತಂಡ ಹಾಗೂ ಜ್ಞಾನ ಸುರಭಿ ತಂಡಗಳು ವೈವಿಧ್ಯಮಯ ಜನಪದ ನೃತ್ಯ ಪ್ರದರ್ಶಿಸಿ ಪ್ರೇಕ್ಷಕರ ಮನಗೆದ್ದವು.
ಸಂಘದ ಅಧ್ಯಕ್ಷರು, ಕಾರ್ಯದರ್ಶಿಗಳು ಹಾಗೂ ಸದಸ್ಯ ಮಂಡಳಿಯವರು ಕಾರ್ಯಕ್ರಮದ ಯಶಸ್ಸಿಗೆ ಶ್ರಮಿಸಿ, ಭಾಗವಹಿಸಿದ ಎಲ್ಲಾ ಕಲಾವಿದರು ಮತ್ತು ಅತಿಥಿಗಳಿಗೆ ಕೃತಜ್ಞತೆ ಸಲ್ಲಿಸಿದರು. ಜನಪದ ಕಲೆಗಳ ಸಂರಕ್ಷಣೆ ಮತ್ತು ಪೆÇ್ರೀತ್ಸಾಹಕ್ಕೆ ಇಂತಹ ಉತ್ಸವಗಳು ಮತ್ತಷ್ಟು ಉತ್ತೇಜನ ನೀಡಲಿವೆ ಎಂದು ಅಭಿಪ್ರಾಯಪಟ್ಟರು.