
ಮುಂಗಾರು ಮಳೆ ಉತ್ತಮವಾದುದ್ದರಿಂದ ಬಿತ್ತನೆಯ ಕರ್ಯ ಜೋರಾಗಿದ್ದು ಈ ಹಿನ್ನೆಲೆಯಲ್ಲಿ ಜಿಪಂ ಬೆಳಗಾವಿ ಕೃಷಿ ಇಲಾಖೆ ಚ. ಕಿತ್ತೂರು ರಾಷ್ಟಿçÃಯ ಹೆದ್ದಾರಿ ೪ರ ಪಕ್ಕದ ಜಾನುವಾರು ಪೇಟೆ ಪಕ್ಕದಲ್ಲಿಯ ರೈತ ಸಂರ್ಕ ಕೇಂದ್ರದಲ್ಲಿ ಕೃಷಿ ಅಧಿಕಾರಿಗಳು ರೈತರಿಗೆ ಗೊಬ್ಬರ, ಕೀಟ ನಾಶಕ, ಮೆಕ್ಕೆ ಜೋಳ, ಸೋಯಾಬಿನ್ ಬೀಜಗಳನ್ನು ವಿತರಿಸಿದರು. ರೈತರೆಲ್ಲರೂ ಆಧಾರ ಕರ್ಡದೊಂದಿಗೆ ಸರತಿ ಸಾಲಿನಲ್ಲಿ ನಿಂತು ಬೀಜ ಪಡೆದುಕೊಂಡರು. ಈ ವೇಳೆ ಕೃಷಿ ಅಧಿಕಾರಿ, ಕೃಷಿ ಇಲಾಖೆ ಸಿಬ್ಬಂದಿ, ರೈತರಿದ್ದರು.


























