
ಚನ್ನಮ್ಮನ ಕಿತ್ತೂರು,ಜೂ.೩: ಗೋಹತ್ಯೆ ಹಾಗೂ ಅಕ್ರಮವಾಗಿ ಸಾಗಾಟ ಖಂಡಿಸಿಸAಘಟನೆಗಳ ಜನಾಕ್ರೋಶವು ಮುಗಿಲು ಮುಟ್ಟಿದ್ದು ಬಂದ್ ಆಚರಿಸಿ
ಭಜರಂಗದಳದ ನೇತೃತ್ವದಲ್ಲಿ ಕೋಟೆ ಆವರಣ ಮುಂಭಾಗ ಬೃಹತ್ ಪ್ರತಿಭಟನಾ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯನ್ನುದ್ದೇಶಿಸಿ ಮಾತನಾಡಿದ ರಾಷ್ಟç ಗೋ ರಕ್ಷಣಾ ಪಡೆ ಸಂಸ್ಥಾಪಕ ಪುನೀತ್ ಕೇರಿಹಳ್ಳಿ ಸರ್ಕಾರಕ್ಕೆ ಹಾಗೂ ಪೋಲಿಸ್ ಇಲಾಖೆಗೆ ಎಚ್ಚರಿಕೆ ನೀಡಿದರು. ಈ ಕೂಡಲೇ ಕಸಾಯಿ ಖಾನೆಗಳನ್ನು ಮುಚ್ಚಬೇಕು ಹಿಂದೂಪರ ಸಂಘಟನೆಗಳ ಯುವಕರ ಮೇಲೆ ಪ್ರಕರಣ ದಾಖಲಿಸಿದ್ದನ್ನು ಹಿಂಪಡೆಯಬೇಕು. ಇಲ್ಲದಿದ್ದರೆ ಸುಮ್ಮನಿರುವುದಿಲ್ಲ ಎಂದರು.
ಮಾಜಿ ಶಾಸಕ ಮಹಾಂತೇಶ ದೊಡ್ಡಗೌಡರ ಮಾತನಾಡಿದರು. ನಂತರ ತಹಶೀಲ್ದಾರವರಿಗೆ ಗೋಹತ್ಯೆ ತಡೆಯುವಂತೆ ಮನವಿ ಸಲ್ಲಿಸಲಾಯಿತು.
ಸಾನಿಧ್ಯವಹಿಸಿ ರಾಜಗುರು ಸಂಸ್ಥಾನ ಕಲ್ಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮಿಜಿ ಮಾತನಾಡಿದರು.
ಗೋಹತ್ಯೆ ಖಂಡಿಸಿ ಕಿತ್ತೂರಿನಲ್ಲಿ ಅಂಗಡಿ ಮುಂಗಟ್ಟು ಮುಚ್ಚಿ ಪ್ರತಿಭಟನೆಗೆ ಬೆಂಬಲ ವ್ಯಕ್ತಪಡಿಸಲಯಿತು. ಪ್ರತಿಭಟನೆಯಲ್ಲಿ ನಿಚ್ಚಣಕಿ ಪಂಚಾಕ್ಷರಿ ಸ್ವಾಮಿಜಿ, ದೇಗುಲಹಳ್ಳಿ ಮಡಿವಾಳೇಶ್ವರ ಮಠದ ವೀರೇಶ್ವರ ಸ್ವಾಮಿಜಿ, ಕೃಷ್ಣ ಭಟ್, ಪ್ರಮೋದ ವಕ್ಕುಂದಮಠ, ಪುಂಡಲೀಕ ದಳವಾಯಿ, ಪಾಲ್ಗೊಂಡು ಮತ್ತಿರರು ಮಾತನಾಡಿ ಗೋಹತ್ಯೆ ಪ್ರಕರಣದಲ್ಲಿ ಕಠಿಣ ಕ್ರಮಕ್ಕೆ ಒತ್ತಾಯಿಸಿದರು.
ಮಂಡಳ ಅಧ್ಯಕ್ಷ ಶ್ರೀಕರ ಕುಲಕರ್ಣಿ, ಮುಖಂಡೆ ಲಕ್ಷಿ÷್ಮÃ ಇನಾಮದಾರ, ಉಮಾದೇವಿ ಬಿಕ್ಕಣ್ಣವರ, ಡಾ. ಬಸವರಾಜ ಪರವಣ್ಣವರ, ಉಳವಪ್ಪ ಉಳ್ಳಾಗಡ್ಡಿ, ಸಂದೀಪ ದೇಶಪಾಡೆ, ಅಪ್ಪಣ್ಣಾ ಪಾಗಾದ, ಬಸವರಾಜ ಮಾತನವರ, ರಾಜು ಹೊಸೆಟ್ಟಿ, ಬಸವರಾಜ ಗಡೆನ್ನವರ, ಬಿಜೆಪಿ ಕಾರ್ಯಕರ್ತರು, ಮುಖಂಡರು, ಹಿಂದೂಪರ ಸಂಘಟನೆಗಳು, ವಿವಿಧ ಜಿಲ್ಲೆ- ತಾಲೂಕು, ಕಿತ್ತೂರು, ಎಂಕೆಹುಬ್ಬಳ್ಳಿ, ಬೈಲಹೊಂಗಲ, ಗೋಕಾಕ, ಬೆಳಗಾವಿ, ಚಿಕ್ಕೋಡಿ ನೂರಾರು ಹಳ್ಳಿಗಳಿಂದ ಸಾವಿರಾರು ಹಿಂದೂ ಕಾರ್ಯಕರ್ತರಿದ್ದರು.























