
ಲಕ್ಷೆ÷್ಮÃಶ್ವರ,ಜೂ೩: ತಾಲೂಕಿನ ಶಿಗ್ಲಿ ಗ್ರಾಮಕ್ಕೆ ಕೊಟ್ಟೂರಿನ ಹಿರೇಮಠದ ಶ್ರೀ ಶಿವಪ್ರಕಾಶ ಮಹಾಸ್ವಾಮಿಗಳು ಆಗಮಿಸಿದ್ದರು.
ಈ ಸಂದರ್ಭದಲ್ಲಿ ಅವರು ಧರ್ಮ ಚಿಂತಕ ಸಾಮಾಜಿಕ ಕಾರ್ಯಕರ್ತ ಈರಣ್ಣ ಪವಾಡದವರ ನಿವಾಸದಲ್ಲಿ ಅಧಿಕಮಾಸದ ಅಂಗವಾಗಿ ಆಗಮಿಸಿ ಪೂಜೆ ಪುನಸ್ಕಾರಗಳನ್ನು ಕೈಗೊಂಡರು.
ಅವರು ಆಶೀರ್ವಚನ ನೀಡಿ ಬೆಳ್ಳಿ ಬಂಗಾರ ಚಿನ್ನ ವಜ್ರ ವೈಡೂರ್ಯಗಳೆಲ್ಲವೂ ಹೊರಗಿನ ಅಲಂಕಾರಗಳು ಆದರೆ ದಾನ ದಯೆ ಧರ್ಮ ಕರುಣೆ ವಾತ್ಸಲ್ಯ ಮೊದಲಾದ ಅಂತರAಗದ ಗುಣಗಳು ಮನುಷ್ಯನ ಬದುಕಿಗೆ ನೆಮ್ಮದಿ ನೀಡುತ್ತವೆ.
ಪ್ರತಿಯೊಬ್ಬರೂ ಮಾನವತೆಯಿಂದ ದೈವತ್ವದ ಕಡೆಗೆ ಹೋಗಬೇಕು ಈ ನಿಟ್ಟಿನಲ್ಲಿ ಆದಿ ಅನಾದಿ ಕಾಲದಿಂದಲೂ ಆಚರಿಸಿಕೊಂಡು ಬಂದಿರುವ ಧರ್ಮ ಸಂಸ್ಕöÈತಿ ಸಂಸ್ಕಾರ ಇವುಗಳನ್ನು ರೂಡಿಸಿಕೊಂಡು ಉತ್ತಮ ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಗದೀಶ ಹಿರೇಮಠ ರಾಮು ಗೋಕರ್ ಈರಣ್ಣ ಪವಾಡದ ನಿರ್ಮಲಾದೇವಿ ಲಾವಣ್ಯ ಲಕ್ಷಿ÷್ಮ ಸೇರಿದಂತೆ ಅನೇಕರಿದ್ದರು.























