
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಜೂ.03: ಮಳೆ ಬಂದರೆ. ಮಗ ಉಂಡರೆ ಕೇಡಲ್ಲ ಎಂಬ ಗಾದೆ ಇದೆ ಆದರೆ ಬಳ್ಳಾರಿ ನಗರಕ್ಕೆ ಮಾತ್ರ ಮಳೆ ಬಂದರೆ ಕೇಡು. ಪ್ರಕೃತಿ ತನ್ನ ಕೆಲಸ ತಾನುಮಾಡುತ್ತೆ. ಆದರೆ ಮಾನವ ಪ್ರಕೃತಿಗೆ ಹೊಂದಿಕೊಂಡು ಹೋಗದಿರುವುದೇ ಈ ಕೇಡಿಗೆ ಕಾರಣ ಎನ್ನಬಹುದು.
ಮಳೆ ಗಾಳಿ ಬೀಸಿದಾಗ ಗಿಡ ಮರಗಳು ಉರುಳುತ್ತವೆ. ಅದನ್ನು ಕಂಡು ಕೊಂಡು ವಿದ್ಯುತ್ ಇಲಾಖೆ ಮಳೆಗಾಲದ ಮುನ್ನವೇ ವಿದ್ಯುತ್ ಕಂಬ ಪರಿವರ್ತಕಗಳ ಬಳಿ ಮರ ಗಿಡಗಳು ಇರುವುದನ್ನು ನೋಡಿ ಅವುಗಳಿಂದ ಹಾನಿಯಾಗದಂತೆ ಸೂಕ್ತ ಕ್ರಮ ತೆಗೆದುಕೊಳ್ಳಬೇಕು ಹಲವಡೆ ಬೇಸಿಗೆ ಅವಧಿಯಲ್ಲಿ ರೆಂಬೆ ಕೊಂಬೆಗಳನ್ನು ಕಡಿದರೂ, ನಿನ್ನೆ ಸಂಜೆ ಸುರಿದ ಮಳೆಗೆ ಹತ್ತಾರು ಮರಗಳು ಉರುಳಿ, 35 ಕ್ಕೂ ಹೆಚ್ಚು ವಿದ್ಯುತ್ ಕಬಗಳು ಉರುಳಿ ಹಾನಿಗೀಡಾಗಿವೆ.
ಇದರಿಂದಾಗಿ ನಿನ್ನೆ ಸಂಜೆ ಹೋದ ಕರೆಂಟ ಇಂದು ಮಧ್ಯಾಹ್ನದ ವರೆಗೆ ಅನೇಕ ಪ್ರದೇಶಗಳಲ್ಲಿ ಕರೆಂಟ್ ಇಲ್ಲದೆ ನಾಗರೀಕರು ಮಾತ್ರ ಕಂಗಾಲಾಗಿದ್ದು ನಿಜ.
ಹಾಗಂತ ವಿದ್ಯುತ್ ಇಲಾಖೆ ಸುಮ್ಮನೆ ಇದೆ ಎಂದಲ್ಲ. ನಿನ್ನೆ ರಾತ್ರಿಯಿಂದಲೇ ತನಗೆ ಸಾಧ್ಯವಾದಷ್ಟು ಕೆಲಸ ಆರಂಭಿಸಿ. ಇಂದು ಬೆಳಿಗ್ಗೆ ವಿದ್ಯುತ್ ಪರಿವರ್ತಕಗಳು, ಉರುಳಿ ಬಿದ್ದ ಕಂಬಗಳನ್ನು ಸರಿಪಡಿಸುವ ಕಾರಗಯ ನಿರತಂರಬಾಗಿ ನಡೆಸಿದೆ. ಆದರೆ ಇದರ ವೇಗ ಇಂದಿನ ಮುಂದುವರೆದ ದಿನಗಳಲ್ಲಿ ಕಡಿಮೆ ಎನ್ನುವುದಾಗಿದೆ.
ವಿದ್ಯುತ್ ನಿರ್ವಹಣೆಗಾಗಿ ಪ್ರತಿ ಕಿ.ವ್ಯಾ ವಿದ್ಯತ್ ಗೆ ಮಾಸಿಕ ಹಣ ಸಂಗ್ರಹಿಸುವ ಇಲಾಖೆ ಹಂತ ಹಂತವಾಗಿ ಅಂಡರ್ ಗ್ರೌಂಡ್ ಕೇಬಲ್ ಅಳವಡಿಸುವ ಕೆಲಸ ಮಾಡಿದರೆ ಇಂತಹುದಕ್ಕೆ ಕಡಿವಾಣ ಹಾಕಬಹುದು. ಒಟ್ಟಾರೆ ನಿನ್ನೆ ಮಳೆಗೆ ಮನೆಯಲ್ಲಿದ್ದ ಜನ ಮಾತ್ರ ವಿದ್ಯುತ್ ಇಲ್ಲದೆ ವಿಲವಿಲ ವದ್ದಾಡುವಂತಾಗಿತ್ತು.G5
























