
ಬೆಂಗಳೂರು, ಮೇ. ೨೩– ದೇಶದ ಎರಡನೇ ಅತಿ ದೊಡ್ಡ ಕ್ರಿಕೆಟ್ ಸ್ಟೇಡಿಯಂಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಇಂದು ಶಂಕು ಸ್ಥಾಪನೆ ನೆರವೇರಿಸಿದರು.
ನಗರದ ಹೃದಯಭಾಗದಲ್ಲಿರುವ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರ್ ಸಿಬಿ ಕಳೆದ ಬಾರಿ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದ ಹಿನ್ನೆಲೆಯಲ್ಲಿ ನಡೆದ ವಿಜಯೋತ್ಸವದ ವೇಳೆ ಕಾಲ್ತುಳಿತ ಸಂಭವಿಸಿತ್ತು. ಈ ಹಿನ್ನೆಲೆಯಲ್ಲಿ ಬೆಂಗಳೂರಿನ ಹೊರವಲಯದ ಆನೇಕಲ್ ತಾಲ್ಲೂಕಿನ ಸೂರ್ಯನಗರದ ೪ನೇ ಹಂತದಲ್ಲಿ ಈ ಕ್ರೀಡಾಂಗಣ ನಿರ್ಮಾಣಕ್ಕೆ ಶಂಕುಸ್ಥಾಪನೆ ಗೆ ಚಾಲನೆ ನೀಡಲಾಗಿದೆ.
ಗುಜರಾತ್ ನ ಅಹ್ಮದಾಬಾದ್ ನಲ್ಲಿರುವ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ೧.೩೨ ಲಕ್ಷ ಸೀಟು ಸಾಮರ್ಥ್ಯ ಹೊಂದಿದೆ. ಆನೇಕಲ್ ಬಳಿ ತಲೆಯೆತ್ತ್ತಲಿರುವ ಈ ಸ್ಟೇಡಿಯಂ ಸಾಮರ್ಥ್ಯ ೮೦ ಸಾವಿರ ಆಸನಗಳನ್ನು ನಿರ್ಮಾಣ ಮಾಡುವ ಗುರಿ ಹೊಂದಲಾಗಿದೆ.
ಮೊದಲ ಹಂತದಲ್ಲಿ ಕ್ರಿಕೆಟ್ ಸ್ಟೇಡಿಯಂ ಕ್ರೀಡಾಂಗಣದ ಮುಂಭಾಗ ರಾಜ್ಯದ ಕಲೆ ಸಾಂಸ್ಕೃತಿಕ ಬಿಂಬಿಸುವ ಪರಂಪರೆ, ಕ್ರಿಕೆಟ್‌ನ ಇತಿಹಾಸ ವಿನ್ಯಾಸ, ೨ನೇ ಹಂತದಲ್ಲಿ ಒಳಾಂಗನ ಕ್ರೀಡಾಂಗಣ ಈಜುಕೊಳ ಹಾಗೂ ಬೃಹತ್ ಸಮಾವೇಶ ಸಭಾಂಗಣ ನಿರ್ಮಿಸಲಾಗಿತ್ತು. ಇದಕ್ಕೆ ಕೆಹೆಚ್ ಬಿ ಸೂರ್ಯ ಕ್ರೀಡಾ ಗ್ರಾಮ ಎಂದು ನಾಮಕರಣ ಮಾಡಲಾಗಿದೆ.
ಈ ಕ್ರೀಡಾಂಗಣ ವೆಚ್ಚ ೯,೪೩.೪೬ ಕೋಟಿ ವೆಚ್ಚವಾಗಲಿದೆ. ಈ ಕ್ರೀಡಾಂಗಣ ನಿರ್ಮಾಣಕ್ಕಾಗಿ ಟೆಂಡರ್ ಆಹ್ವಾನಿಸಲಾಗಿದೆ.
ಚಿನ್ನಸ್ವಾಮಿ ಕ್ರೀಡಾಂಗಣದ ಮೇಲಿನ ಒತ್ತಡ ಕಡಿಮೆ ಮಾಡಲು ಹಾಗೂ ವರ್ಷಪೂರ್ತಿ ಜಾಗತಿಕ ಮಟ್ಟದ ಕ್ರೀಡಾ ಪಂದ್ಯಗಳನ್ನು ಆಯೋಜಿಸಲು ನಗರದ ಹೊರವಲಯದಲ್ಲಿ ಈ ಬೃಹತ್ ಕ್ರೀಡಾಂಗಣ ತಲೆಯೆತ್ತಲಿದೆ.

























