Home ಜಿಲ್ಲೆ ಬೀದರ ಜಿಲ್ಲೆಯು ಮಲೇರಿಯಾ ಮುಕ್ತದೆಡೆಗೆ ಸಾಗಿದೆ:ಡಾ.ರಾಜಶೇಖರ ಪಾಟೀಲ

ಬೀದರ ಜಿಲ್ಲೆಯು ಮಲೇರಿಯಾ ಮುಕ್ತದೆಡೆಗೆ ಸಾಗಿದೆ:ಡಾ.ರಾಜಶೇಖರ ಪಾಟೀಲ

ಬೀದರ, ಏ.೨೯: ಬೀದರ ಜಿಲ್ಲೆಯು ಮಲೇರಿಯಾ ಮುಕ್ತದೆಡೆಗೆ ಸಾಗಿದೆ ಎಂದು ಬೀದರ ಜಿಲ್ಲಾ ರೋಗವಹಾಕ ಆಸ್ರೀತ ರೋಗಗಳ ನಿಯಂತ್ರಣಾಧಿಕಾರಿ ಡಾ.ರಾಜಶೇಖರ ಪಾಟೀಲ್ ತಿಳಿಸಿದರು.
ಅವರು ಮಂಗಳವಾರ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿ ಆವರಣದಿಂದ ಶಾಲಾ-ಕಾಲೇಜು ವಿದ್ಯಾರ್ಥಿಗಳಿಂದ ಹಮ್ಮಿಕೊಂಡಿದ್ದ ಬೃಹತ್ ಜನಜಾಗೃತಿ ರ‍್ಯಾಲಿಗೆ ರಿಬ್ಬಿನ ಕತ್ತರಿಸುವ ಮೂಲಕ ಉದ್ಘಾಟಿಸಿ ಮಾತನಾಡಿದರು.
ಜಲ್ಲೆಯಲ್ಲಿ ಮಲೇರಿಯಾ ರೋಗವು ಇಳಿಮುಖವಾಗಿದ್ದು, ಕಳೆದ ೨೦೨೫ನೇ ಸಾಲಿನಲ್ಲಿ ಕೇವಲ ೦೫ ಮಲೇರಿಯಾ ಪ್ರಕರಣಗಳು ಪತ್ತೆಯಾಗಿದ್ದು, ಅವು ಹೊರರಾಜ್ಯಗಳಿಂದ ೦೫ ಜನ ವಲಸಿಗರಿಗೆ ಮಲೇರಿಯಾ ಧೃಡಪಟ್ಟಿದ್ದು, ಎಲ್ಲಾ ಮಲೇರಿಯಾ ಪ್ರಕರಣಗಳಿಗೆ ತೀವ್ರಚಿಕಿತ್ಸೆ ನೀಡುವುದರ ಮೂಲಕ ಗುಣಪಡಿಸಲಾಗಿದೆ. ಜಿಲ್ಲೆಯಲ್ಲಿ ಮಲೇರಿಯಾದಿಂದ ಇಲ್ಲಿಯವರೆಗೆ ಯಾವುದೇ ಸಾವು ಸಂಭವಿಸಿರುವುದಿಲ್ಲ ಎಂದು ತಿಳಿಸಿದರು.
ಜಿಲ್ಲಾ ಸರ್ವೇಕ್ಷಣಾಧಿಕಾರಿ ಡಾ. ಶಂಕ್ರೆಪ್ಪ್ಪಾ ಬೋಮಾ ಮಾತನಾಡಿ, ಜಿಲ್ಲೆಯಲ್ಲಿ ಅಲ್ಲಲ್ಲಿ ಮಳೆಯಾಗುತ್ತಿರುವ್ಯದರಿಂದ ಹಾಗೂ ನಿಂತ ನೀರಿನಲ್ಲಿ ಸೊಳ್ಳೆಗಳ ಉತ್ಪತ್ತಿ ಹೆಚ್ಚಾಗಿರುತ್ತದೆ ನಾಗರಿಕರು ಮಲೇರಿಯ ರೋಗವನ್ನು ನಿಯಂತ್ರಿಸಲು ಆರೋಗ್ಯ ಇಲಾಖೆಯೊಂದಿಗೆ ಸಹಕರಿಸಿ ಸೊಳ್ಳೆ ಉತ್ಪತ್ತಿ ತಾಣಗಳ ನಿರ್ಮೂಲನೆ ಮತ್ತು ಸೊಳ್ಳೆ ಕಡಿತದಿಂದ ರಕ್ಷಣೆ ಮಾಡಿಕೊಳ್ಳುವದು, ಸೊಳ್ಳೆ ನಿಯಂತ್ರಣ ವಿಧಾನಗಳನ್ನು ಅಳವಡಿಸಿಕೊಂಡು ಸೊಳ್ಳೆಗಳಿಂದ ಹರಡುವ ರೋಗಗಳನ್ನು ತಡೆಗಟ್ಟಲು ಸಾರ್ವಜನಿಕರಲ್ಲಿ ಮನವಿ ಮಾಡುತ್ತಾ ಮಲೇರಿಯಾರೋಗ ಲಕ್ಷಣಗಳು ಕಂಡುಬAದಲ್ಲಿ ತಮ್ಮ ಸಮಿಪದ ಸರಕಾರಿ ಆಸ್ಪತ್ರೆಯಲ್ಲಿ ಪರೀಕ್ಷಿಸಿಕೊಂಡು ಸೂಕ್ತ ಚಿಕಿತ್ಸೆ ಪಡೆಯಬೇಕು, ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದರು.
ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹ್ಮದ ಮಹೆಬೂಬ ಮಾತನಾಡಿ, ಜಿಲ್ಲೆಯಲ್ಲಿ ೨೦೨೬ನೇ ವರ್ಷದಲ್ಲಿ ಇಲ್ಲಿಯವರೆಗೆ ೦೧ ಮಲೇರಿಯಾ ಪಿ ವಿ ಪ್ರಕರಣ ವಲಸಿಗರಿಗೆ ಪತ್ತೆಯಾಗಿದ್ದು, ತೀವ್ರಚಿಕಿತ್ಸೆ ನೀಡುವುದರ ಮೂಲ ಗುಣಪಡಿಸಲಾಗಿದೆ. ಮಲೇರಿಯಾ ರೋಗ ಹರಡದಂತೆ ಎಲ್ಲಾ ಸೂಕ್ತ ಮುಂಜಾಗ್ರತಾ ಕ್ರಮಗಳಾದ ಜ್ವರ ಪೀಡುತರ ಸಮೀಕ್ಷೆ, ಸೊಳ್ಳೆಗಳ ಉತ್ಪತ್ತಿ ತಾನಗಳ ನಿರ್ಮೂಲನೆ ಕಾರ್ಯ ಕೈಕೊಳ್ಳಲಾಗಿದೆ ಸೊಳ್ಳೆಗಳ ಉತ್ಪತಿಯ ಬಗ್ಗೆ ಹಾಗೂ ಸೊಳ್ಳೆಗಳ ಜೀವನಚಕ್ರದ ಬಗ್ಗೆ ವ್ಶೆಜ್ಞಾನಿಕ ಸ್ವರೂಪ ಮತ್ತು ಆಂಕಿ ಅಂಶ ತಿಳಿಸಿದರು.
ಈ ಸಂದರ್ಭದಲ್ಲಿ ಬೀದರನ ಡಿ.ಎಲ್.ಓ ಡಾ. ಕಿರಣ ಪಾಟಿಲ, ಎಫ್.ಡಬ್ಲೂ.ಓ ಡಾ. ದಿಲಿಪ ಡೊಂಗ್ರೆ, ಜಿಲ್ಲಾ ಆರೋಗ್ಯ ಶೀಕ್ಷಣಾಧಿಕಾರಿ ಸಂಗಪ್ಪಾ ಕಾಂಬ್ಳೆ, ಆರೋಗ್ಯ ಶೀಕ್ಷಣಾಧಿಕಾರಿ ಓಂಕಾರ ಮಲಿಗೆ, ಯೆಸುದಾಸ ಥೊರೆ, ಆರೋಗ್ಯ ನಿರೀಕ್ಷಣಾಧಿಕಾರಿಗಳಾದ ಹಾದಿ ತಬರೆಜ್, ದೆವಿದಾಸ, ಜೇತುಲಾಲ ಪವಾರ್, ಮಹ್ಮದ ಸಮಿಯೋದಿನ್ ಅನೀಲಕುಮಾರ ಜಾದವ ಕ್ರಿಸ್ತದಾಸ್ ಮೊಹನದಾಸ ಆರೋಗ್ಯ ಶೀಕ್ಷಣಾಧಿಕಾರಿಗಳು ಹಾಗೂ ಕಾಶಿನಾಥ ಸತಿಷ ಪಾಂಡೆ ಅಮರ್ ಗಂದೆಗುಡಿಬಸಲಿAಗಪ್ಪಾ ಮೋದಿ ಶೇಶಿಕಾಂತ ಕರಣ ಪ್ರದೀಪಆನಂದ ಮಾಲಾಶ್ರೀ ರವಿ ನರ್ಸಿಂಗ ಕಾಲೇಜು ವೀದ್ಯಾರ್ಥಿಗಳು ಸೇರಿದಂತೆ ಇತರರು ಉಪಸ್ಥಿತರಿದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ವೀರಶೆಟ್ಟಿ ಚನ್ನಶೆಟ್ಟಿ ಅವರು ಸಂಚಾಲನೆ ನಡೆಸಿಕೋಟ್ಟರು. ಆರೋಗ್ಯ ನಿರೀಕ್ಷಣಾಧಿಕಾರಿ ಮಹ್ಮದ ಅಬುಬಕರ್ ಅವರು ಸ್ವಾಗತ ಕೋರಿದರು.