Home Uncategorized ಜಿಂದಾಲ್ ಸಂಸ್ಥೆಯೊಂದಿಗೆ ಕೆಐಎಡಿ  ಶಾಮೀಲು ವಿರೋಧಿಸಿ ಕುಡತಿನಿಯಿಂದ ಸಂಡೂರು ಶಾಸಕರ ಕಛೇರಿಗೆ  ಭೂ ಸಂತ್ರಸ್ತರಿಂದ ಪಾದಯಾತ್ರೆ...

ಜಿಂದಾಲ್ ಸಂಸ್ಥೆಯೊಂದಿಗೆ ಕೆಐಎಡಿ  ಶಾಮೀಲು ವಿರೋಧಿಸಿ ಕುಡತಿನಿಯಿಂದ ಸಂಡೂರು ಶಾಸಕರ ಕಛೇರಿಗೆ  ಭೂ ಸಂತ್ರಸ್ತರಿಂದ ಪಾದಯಾತ್ರೆ ರೈತರ ಬಂಧನ

 (ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಏ.29: ತಾಲೂಕಿನ ಕುಡುತಿನಿ ಬಳಿ  ಕೈಗಾರಿಕೆಗಳಿಗೆಂದು ಕೆಐಡಿಬಿ ವಶ ಪಡಿಸಿಕೊಂಡ ನಮ್ಮ ಜಮೀನಿಗೆ ನ್ಯಾಯವಾದ ಭೂ ಬೆಲೆ ನೀಡಬೇಕು, ಉದ್ದೇಶಿತ ಕೈಗಾರಿಕೆಗಳನ್ನು ಪ್ರಾರಂಭ ಮಾಡಬೇಕು, ಭೂ ಸಂತಸ್ತರ ಕುಟುಂಬಗಳಿಗೆ ಉದ್ಯೊಗ ನೀಡಬೇಕು, ಇಲ್ಲವಾದರೆ ನಮ್ಮ ಭೂಮಿ ನಮಗೆ ವಾಪಸು ನೀಡಬೇಕು ಎಂದು ಭೂ ಸಂತ್ರಸ್ಥ ರೈತರು ಇಂದು ಸಂಡೂರು ಶಾಸಕರ ಕಛೇರಿಗೆ ಪಾದಯಾತ್ರೆ ಆರಂಭಿಸಿದ್ದರು. ತೋರಣಗಲ್ಲು ಬಳಿ ತೆರಳಿದಾಗ ಪೊಲೀಸರು ರೈತರನ್ನು ಬಂಧಿಸಿದ್ದಾರೆ.

ಆರ್ಸಲ್ ಮಿತ್ತಲ್ ಗಾಗಿ ವಶಪಡಿಸಿಕೊಂಡ ಭೂಮಿಯಲ್ಲಿ ಈಗ ಜಿಂದಾಲ್ ಕಂಪನಿಯ ಜೆ.ಎಫ್. ಇ. ಎಲೆಕ್ಟ್ರಿಕಲ್ ಗಾಗಿ 204 ಎಕರೆಗಳು ಒಳಗೊಂಡು ಒಟ್ಟು  900 ಎಕರೆಗಳ ಭೂಮಿಯನ್ನು ಜಿಂದಾಲ್ ಕಂಪನಿಗೆ ಪರಬಾರೆ ಮಾಡಲು ಮುಂದಾಗಿರುವ ಕೆಐಡಿಬಿ ಯು ಕೋರ್ಟ್ ಗೆ ಸುಳ್ಳು ಹೇಳಿಕೆ ಗಳನ್ನು ನೀಡಿದೆ. ಶಾಂತ ರೀತಿಯಿಂದ, ಕಾನೂನು ಬದ್ಧವಾಗಿ  ಹೋರಾಟ ಮಾಡುತ್ತಾ ಧರಣಿ ಕುಳಿತಿರುವ ರೈತರು ರಸ್ತೆ ತಡೆ ಮಾಡುತ್ತಾರೆ, ಅಲ್ಲಿಯೆ ಧರಣಿ ಮಾಡುತ್ತಾರೆ. ಸಾರ್ವಜನಿಕರಿಗೆ ತೊಂದರೆ ಉಂಟು ಮಾಡುವ ಹೋರಾಟವನ್ನು  ಸಮಿತಿಯು ಮಾಡಲಿದೆ ಎಂದು ಸುಳ್ಳು ಹೇಳಿಕೆಯನ್ನು  ನ್ಯಾಯಾಲಯಕ್ಕೆ ನೀಡಿ ರೈತರ ಮೇಲೆ ಇಂಜಕ್ಸನ್  ಆರ್ಡರ್ ತಂದಿದ್ದಾರೆ. ಜೊತೆಗೆ  ಜೂನ್ 7 ರ ವರೆಗೆ 144 ಸೆಕ್ಸನ್ ಸಹ  ಜಾರಿಮಾಡಲಾಗಿದೆ. ಈ ಧೋರಣೆಯನ್ನು ಖಂಡಿಸಿ  ಹೋರಾಟ ಮಾಡಿದ ರೈತರನ್ನು ಬಂಧಿಸಿ ಕೇಸು ಮಾಡಿದೆ

ಕುಡಿತಿನಿ ಭಾಗದಲ್ಲಿ ಭೂ ಸಂತ್ರಸ್ತರ ಹೊರಾಟ ಸಮಿತಿ ಯ  ನೇತ್ರತ್ವದಲ್ಲಿ ಕಳೆದ 1230 ದಿನಗಳಿಂದ ರೈತರು ಹಲವು ರೀತಿಯ ಹೋರಾಟಗಳನ್ನು ನಡೆಸುತ್ತ ಬಂದಿದ್ದರು. ಈ ಬಗ್ಗೆ  ಸರ್ಕಾರ ಸ್ಪಂದಿಸಿಲ್ಲ ಎಂದು.

ಇಂದು ಕುಡುತಿನಿಯಿಂದ ಸಂಡೂರಿನಲ್ಲಿರುವ   ಶಾಸಕರ ಕಚೇರಿಗೆ ಪಾದಯಾತ್ರಯನ್ನು ನೂರಾರು ರೈತರು ಕೈಗೊಂಡಿದ್ದು ನಾಳೆ ಶಾಸಕರ ಕಚೇರಿಗೆ ತೆರಳಿ ಪ್ರತಿಭಟನೆ ನಡೆಸಲಿದ್ದರು. ಈ ಹಿನ್ನಲೆಯಲ್ಲಿ ರೈತರನ್ನು ತೋರಣಗಲ್ಲು ಬಳಿ ಬಂಧಿಸಿ ಶಾಲೆಯ ಆವರಣದಲ್ಲಿ ಇಡಲಾಗಿತ್ತು.