Home ಜಿಲ್ಲೆ ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಳ್ಳಿ

ಬಸವಣ್ಣನವರ ಕಾಯಕ ತತ್ವ ಅಳವಡಿಸಿಕೊಳ್ಳಿ

ಬೀದರ : ಏ.29: ಬಸವಣ್ಣನವರು ಕಾಯಕ ಮಾಡುವುದರ ಮೂಲಕ ಸ್ವಾವಲಂಬಿ ಜೀವನ ನಡೆಸಬೇಕೆಂದು ಹೇಳಿದರು ಎಂದು ಜಹೀರಾಬಾದ್ ತಾಲ್ಲೂಕಿನ ಮಲ್ಲಯ್ಯಗಿರಿ ಹಾಗೂ ಬಸವಕಲ್ಯಾಣ ಆಶ್ರಮದ ಪೀಠಾಧಿಪತಿ ಡಾ. ಬಸವಲಿಂಗ ಅವಧೂತರು ಹೇಳಿದರು.
ನಗರದ ಅಲ್ಲಮಪ್ರಭು ಬಡವಾಣೆಯಲ್ಲಿ ಇಚ್ಚಿಗೆ ಹಮ್ಮೀಕೊಂಡ ಬಸವ ಜಯಂತಿ ಹಾಗೂ ಪ್ರವಚನ ಕಾರ್ಯಕ್ರಮದ ಸಾನಿಧ್ಯ ವಹಿಸಿ ಅವರು ಮಾತನಾಡಿದರು.
12ನೇ ಶತಮಾನದಲ್ಲಿ ಬಸವಾದಿ ಶರಣರು ಸಮಸಮಾಜ ನಿರ್ಮಿಸಿದರು. ವಚನಗಳ ಮೂಲಕ ಸಮಾಜದಲ್ಲಿನ ಅಂಕು ಡೊಂಕು ತಿದ್ದಿದರು ಎಂದು ಹೇಳಿದರು.
ಬಸವಣ್ಣ ಅಕ್ಕಮಹಾದೇವಿ ಸೇರಿದಂತೆ ಶರಣರ ಜೀನವ ಸಾಧನೆ ಪುಸ್ತಕಗಳನ್ನು ಓದಿ ಪ್ರೇರಣೆ ಪಡೆದು ಅವರು ಹಾಕಿ ಕೊಟ್ಟ ಮಾರ್ಗದಲ್ಲಿ ನಡೆಯಬೇಕು ಎಂದು ತಿಳಿಸಿದರು.
ದಿನಾಲು ಬೆಳಗಿನ ಜಾವ ಬೇಗ ಎದ್ದು ದೇವರ ಧ್ಯಾನಿಸಿ ಪೂಜಿಸಬೇಕು ಅಲ್ಲದೇ ಜನ್ಮಕೊಟ್ಟ ತಂದೆ-ತಾಯಿಯ ಸೇವೆ ಮಾಡಬೇಕು. ಇತರರೊಂದಿಗೆ ವೈಷಮ್ಯ ಬೆಳೆಸಿಕೊಳ್ಳಬಾರದು. ಪರಸ್ಪರ ಪ್ರೀತಿಯಿಂದ ಬಾಳಬೇಕು ಎಂದು ನುಡಿದರು.
ನಾಮಗಳು ಬೇರೆ ಬೇರೆ ಇದ್ದರೂ, ದೇವರು ಒಬ್ಬನೇ ಇದ್ದಾನೆ. ದೇವರ ಕೃಪೆಗೆ ಪಾತ್ರರಾಗಲು ಪೂಜೆ, ಧ್ಯಾನ ಮಾಡಬೇಕು. ಸತ್ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು ಎಂದು ಕಿವಿಮಾತು ಹೇಳಿದರು
ಮಟ್ಕಾ, ಜೂಜು, ಸಾರಾಯಿ, ತಂಬಾಕು ಸೇವನೆ ಕುಟುಂಬಗಳು ಹಾಳಾಗುತ್ತಿವೆ. ಎಚ್ಚರದಿಂದ ಜೀವನ ಸಾಗಿಸಬೇಕು ಎಂದು ಹೇಳಿದರು.?.
ದಾನ, ಧರ್ಮ ಮಾಡಬೇಕು. ಗುರುವಿನ ವಾಣಿ ಆಲಿಸಲು ಧಾರ್ಮಿಕ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳಬೇಕು ಎಂದು ತಿಳಿಸಿದರು.
ತಂದೆ ತಾಯಿ ವೃದ್ಧಾಪ್ಯದಲ್ಲಿಇದ್ದಾಗ ಅವರ ಸೇವೆ ಮಾಡಬೇಕು. ಯಾವ ಕಾರಣಕ್ಕೂ ಅವರ ಮನಸ್ಸು ನೋಯಿಸಬಾರದು ಎಂದು ತಿಳಿಸಿದರು.
ಬಡವಾಣೆಯಲ್ಲಿ ಎಲ್ಲರೂ ಸೌಹಾರ್ದದಿಂದ ಬಾಳಬೇಕು. ಪರಿಸ್ಪರರ ಕಷ್ಟ- ಸುಖದಲ್ಲಿ ಭಾಗಿಯಾಗಬೇಕು ಎಂದು ಹೇಳಿದರು.
ಬಡಾವಣೆಯ ಪ್ರಮುಖರಾದ ಸಮಿತಿಯ ಅಧ್ಯಕ್ಷ ವೀರಶೆಟ್ಟಿ ಗಣಾಪುರ, ಕಾರ್ಯದರ್ಶಿ ವಿಜಯಕುಮಾರ ಬಿರಾದರ ಗಣಪತಿ ಗುಡ್ರೆ, ಮಲ್ಲಯ್ಯ ಸ್ವಾಮಿ, ಶಿವಕುಮಾರ ಕೊತ್ತಮೂರೆ, ವೀರಣ್ಣ ತಲಾಟಿ, ಶಶಿ ಹೊಸದೊಡ್ಡಿ, ನಿವೃತ್ತ ಶಿಕ್ಷಣಾಧಿಕಾರಿ ಶಿವಕುಮಾರ ಸ್ವಾಮಿ, ನಿವೃತ್ತ ಶಿಕಕ್ಷ ಶಂಕರಾವ ಸಜ್ಜನಶೆಟ್ಟಿ, ಮಲ್ಲೇಶ ಗಣಾಪುರ ಮೊದಲಾದವರು ಇದ್ದರು.