
ಸುಳ್ಯ:ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆ ಜಾರಿಯಾಗದಂತೆ ಕಾಂಗ್ರೆಸ್ ಮತ್ತು ಇತರ ವಿರೋಧ ಪಕ್ಷಗಳು ತಡೆದಿದೆ ಎಂದು ಆರೋಪಿಸಿ ಬಿಜೆಪಿ ಮಹಿಳಾ ಮೋರ್ಚಾ ಮಂಡಲ ಸಮಿತಿ ವತಿಯಿಂದ ಸುಳ್ಯದಲ್ಲಿ ಪ್ರತಿಭಟನಾ ಸಭೆ ನಡೆಯಿತು.
ಪ್ರತಿಭಟನೆಯನ್ನು ಉದ್ದೇಶಿಸಿ ಶಾಸಕಿ ಭಾಗೀರಥಿ ಮುರುಳ್ಯ ಮತನಾಡಿ “ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರಕಾರ ಜಾರಿಗೊಳಿಸುವ ಸಂದರ್ಭ ಅದನ್ನು ಸರ್ವರೂ ಸ್ವಾಗತಿಸಬೇಕಿತ್ತು. ಮಹಿಳೆಯರಿಗೂ ಒಂದು ಅವಕಾಶ ಕಲ್ಪಿಸುವ ಮಸೂದೆಗೆ ಬೆಂಬಲ ನೀಡಬೇಕಿತ್ತು. ಆದರೆ ಕಾಂಗ್ರೆಸ್ ಹಾಗೂ ಅವರ ಮಿತ್ರ ಪಕ್ಷಗಳು ವಿರೋಧಿಸುವುದರ ಮೂಲಕ ನಾವು ಮಹಿಳೆಯರಿಗೆ ವಿರುದ್ಧ ಎಂದು ಹೇಳುವುದರ ಮೂಲಕ ಕಾಂಗ್ರೆಸ್ ನರಿಬುದ್ಧಿಯನ್ನು ತೋರಿಸಿದೆ. ಮುಂದೊಂದು ದಿನ ಕಾಂಗ್ರೆಸ್‌ನವರ ಸಹಕಾರ ಇಲ್ಲದೇ ಈ ಮಸೂದೆ ಮಂಡನೆಯಾಗೋದು ಶತಸಿದ್ಧ ಎಂದು ಹೇಳಿದರು.
ಬಿಜೆಪಿ ಮಂಡಲ ಸಮಿತಿ ಅಧ್ಯಕ್ಷ ವೆಂಕಟ್ ವಳಲಂಬೆ, ಮಹಿಳಾ ಮೋರ್ಚಾ ಮಂಡಲ ಅಧ್ಯಕ್ಷೆ ಇಂದಿರಾ ಬಿ.ಕೆ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ರಾಕೇಶ್ ರೈ ಕೆಡೆಂಜಿ, ಮಂಡಲ ಪ್ರಧಾನ ಕಾರ್ಯದರ್ಶಿ ವಿನಯಕುಮಾರ್ ಕಂದಡ್ಕ, ಕೋಶಾಧಿಕಾರಿ ಸುಬೋದ್ ಶೆಟ್ಟಿ ಮೇನಾಲ, ಬಿಜೆಪಿ ಸುಳ್ಯ ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕುಸುಮಾಧರ ಎ.ಟಿ, ಪ್ರಮುಖರಾದ ಆಶಾ ತಿಮ್ಮಪ್ಪ, ಗುಣವತಿ ಕೊಲ್ಲಂತ್ತಡ್ಕ, ಶ್ರೀಕಾಂತ್ ಮಾವಿನಕಟ್ಟೆ, ಸುನಿಲ್ ಕೇರ್ಪಳ, ಎಸ್.ಎಂ. ನಾರಾಯಣ ಶಾಂತಿನಗರ, ಪ್ರದೀಪ್ ಕೊಲ್ಲರಮೂಲೆ, ಶಶಿಕಲಾ ನೀರಬಿದಿರೆ, ಪುಷ್ಪಾ ಮೇದಪ್ಪ, ಭಾರತಿ ಉಳುವಾರು, ಮಮತಾ ಬೊಳುಗಲ್ಲು, ಪ್ರಸಾದ್ ಕಾಟೂರು, ಬುದ್ಧ ನಾಯ್ಕ್, ಜಿನ್ನಪ್ಪ ಪೂಜಾರಿ, ಅವಿನಾಶ್ ಕುರುಂಜಿ, ಶಾಂತಾರಾಮ ಕಣಿಲೆಗುಂಡಿ, ಜಗನ್ನಾಥ ಜಯನಗರ, ಅಶೋಕ್ ಅಡ್ಕಾರ್, ವಿಜಯ ಆಲಡ್ಕ, ಸತ್ಯವತಿ ಬಸವನಪಾದೆ, ಜಯಂತಿ ಜನಾರ್ಧನ, ಶಾರದಾ ಶೆಟ್ಟಿ, ಆಶಾ ರೈ, ಚಂದ್ರಾವತಿ, ಲೋಲಾಕ್ಷಿ ದಾಸನಕಜೆ, ಸೀತಾ ಸದಾನಂದ, ವೀಣಾ ಮೋಂಟಡ್ಕ, ಕಿಶೋರಿ ಶೇಟ್, ಶೀಲಾ ಅರುಣ ಕುರುಂಜಿ, ರಂಜಿತ್ ಎನ್.ಆರ್, ಪುರುಷೋತ್ತಮ ಬೊಡ್ಡನಕೊಚ್ಚಿ, ಧನಂಜಯ ಕುಂಚಡ್ಕ, ಶಿವರಾಮ ಕೇರ್ಪಳ ಮತ್ತಿತರರು ಉಪಸ್ಥಿತರಿದ್ದರು.

























