
ಭಾಲ್ಕಿ:ಏ.೨೯:ತಾಲ್ಲೂಕಿನ ಕರಡ್ಯಾಳದ ಚನ್ನಬಸವೇಶ್ವರ ಗುರುಕುಲ ಪ್ರೌಢ ಶಾಲೆಯಲ್ಲಿ
ಸಾವಿತ್ರಿ ಎಸ್. ನುಚ್ಚಾ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಕನ್ನಡ ವಿಷಯದಲ್ಲಿ ೧೨೫ಕ್ಕೆ ೧೨೫ ಅಂಕ ಪಡೆದ ವಿದ್ಯಾರ್ಥಿಗಳಿಗೆ ನಗದು ಬಹುಮಾನ, ಪುಸ್ತಕ ನೀಡಲಾಯಿತು.
ವಿದ್ಯಾರ್ಥಿಗಳಾದ ಆನಂದ ಪಾಂಡುರAಗ, ಅಜಯಕುಮಾರ ಸಂತೋಷ, ಶಿವಂ ಸತೀಶ, ಮಂದಾರ ಮಲ್ಲಿಕಾರ್ಜುನ, ನಾಗೇಶ ರಾಜಶೇಖರ, ಮೋಹನ ಸಂತೋಷ, ವೈಷ್ಣವಿ ಸಂಜುಕುಮಾರ, ಉದಯ್ ಸಂತೋಷ, ವಿಶ್ವಲಕ್ಷ್ಮಿ ಪ್ರಭು, ಚನ್ನಬಸವ ರಾಚಪ್ಪ ನಗದು ಬಹುಮಾನ ಸ್ವೀಕರಿಸಿದರು.
ಸಾವಿತ್ರಿ ಎಸ್. ನುಚ್ಚಾ ಚಾರಿಟೇಬಲ್ ಟ್ರಸ್ಟ್ ನ ಸೋಮನಾಥ್ ನುಚ್ಚಾ, ಕಾರ್ಯದರ್ಶಿ ಗಿರಿಜಾನಂದ ನುಚ್ಚಾ, ಮುಖ್ಯಶಿಕ್ಷಕ ಮಹೇಶ ಮಹಾರಾಜ, ಸಂಯೋಜಕ ಪ್ರವೀಣ ಖಂಡಾಳೆ, ಕನ್ನಡ ಶಿಕ್ಷಕರಾದ ಲಕ್ಷ್ಮಣ ಮೇತ್ರೆ, ಹುಲೇಪ್ಪಾ ಕುಪ್ಪೆ ಸೇರಿದಂತೆ ಇತರರು ಇದ್ದರು.























