
ಸಂಜೆವಾಣಿ ವಾರ್ತೆ
ನರಸೀಪುರ ಏ.16- ಮಹಾನ್ ಮಾನವತಾವಾದಿ ಡಾ.ಬಿ ಆರ್.ಅಂಬೇಡ್ಕರ್ ರವರು ಬಡ ಕುಟುಂಬದಲ್ಲಿ ಜನಿಸಿ ಅಂತರಾಷ್ಟ್ರೀಯ ವಿಶ್ವವಿದ್ಯಾಲಯಗಳಲ್ಲಿ ವ್ಯಾಸಂಗ ಮಾಡಿ 32 ಪದವಿಯನ್ನು ಪಡೆದು ವಿಶ್ವಜ್ಞಾನಿಯಾದರು ಎಂದು ಸಾರ್ವಜನಿಕ ಆಸ್ಪತ್ರೆಯ ಮೂಳೆ ತಜ್ಞ ವೈದ್ಯ ಡಾ. ದಯಾನಂದ ಬಾಬು ಹೇಳಿದರು.
ಪಟ್ಟಣದ ಸಾರ್ವಜನಿಕ ಆಸ್ಪತ್ರೆಯಲ್ಲಿ ಆಯೋಜಿಸಿದ್ದ ಸಂವಿಧಾನ ಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್ ರವರ 135ನೇ ಜಯಂತಿಯಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಜಗತ್ತಿನಲ್ಲಿ ನಾನು ಇಷ್ಟಪಡುವ ವ್ಯಕ್ತಿ ಡಾ. ಬಿ ಆರ್ ಅಂಬೇಡ್ಕರ್ ಅವರಾಗಿದ್ದಾರೆ. ವಿಶ್ವಜ್ಞಾನಿ ಅಲ್ಲದೆ ಮಹಾ ಮಾನವತವಾದಿ ಜಗತ್ತಿನಲ್ಲಿ ಅತ್ಯಂತ ಹೆಚ್ಚು ಪದವಿಗಳನ್ನು ಪಡೆದ ಮಹಾ ಮೇಧಾವಿ ಬಾಬಾ ಸಾಹೇಬರು ಎಂದರು.
ಆಡಳಿತ ವೈದ್ಯಾಧಿಕಾರಿ ಡಾ.ಎಸ್.ಬಿ.ಅಭಿಲಾಷ್ ಮಾತನಾಡಿ, ಭಾರತೀಯರಾದ ನಾವು ಸಂತೋಷ ಪಡುವ ಸುದಿನವೇ ಅಂಬೇಡ್ಕರ್ ಜಯಂತಿ ಯಾಗಿದೆ. ನಾವು ವಿಶ್ವದ ಹಲವು ರಾಷ್ಟ್ರಗಳಲ್ಲಿ ಬಾಬಾ ಸಾಹೇಬರ ಜಯಂತಿಯನ್ನು ಅದ್ದೂರಿಯಾಗಿ ಆಚರಿಸಲಾಗುತ್ತಿದೆ. ವಿಶ್ವಸಂಸ್ಥೆ ಈ ದಿನವನ್ನು ವಿಶ್ವದ ಜ್ಞಾನದ ದಿನವನ್ನಾಗಿ ಘೋಷಿಸಿದ್ದಾರೆ. ಬಾಬಾ ಸಾಹೇಬರು ತಮ್ಮ ಜೀವನದ ಉದ್ದಕ್ಕೂ ನೋವನ್ನು ಅನುಭವಿಸಿ ದೇಶ ವಿದೇಶಗಳಲ್ಲಿ ವ್ಯಾಸಂಗ ಮಾಡಿ ಉನ್ನತ ಶಿಕ್ಷಣ ಪಡೆದು. ಭಾರತ ದೇಶದಲ್ಲಿ ನಡೆಯುತ್ತಿದ್ದ ಅಸ್ಪೃಶ್ಯತೆ ಅಸಮಾನತೆ. ಲಿಂಗ ತಾರತಮ್ಯ ಇವುಗಳ ಬಗ್ಗೆ ಚಿಂತಿಸಿ ಜಗತ್ತಿನ ಎಲ್ಲಾ ಸಂವಿಧಾನಕ್ಕಿಂತಲೂ ಸರ್ವ ಶ್ರೇಷ್ಠ ಸಂವಿಧಾನವನ್ನು ನಮ್ಮ ದೇಶಕ್ಕೆ ನೀಡಿದ್ದಾರೆ . ಆದರಿಂದಲೇ ಅಂತರಾಷ್ಟ್ರಮಟ್ಟದಲ್ಲಿ ಅಂಬೇಡ್ಕರ್ ರನ್ನು ಅರ್ಥ ಮಾಡಿಕೊಂಡು ಅವರ ಆದರ್ಶ ತತ್ವಗಳನ್ನು ಪಾಲಿಸುತ್ತಿದ್ದಾರೆ ಎಂದರು.
ವಿಶೇಷವಾಗಿ ಅಲಂಕರಿಸಲಾಗಿದ್ದ ಡಾ.ಬಿ.ಆರ್. ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ವೈದ್ಯರು ಮತ್ತು ಸಿಬ್ಬಂದಿಗಳೊಡನೆ ಪುಷ್ಪಾರ್ಚನೆ ನೆರವೇರಿಸಿದರು. ಆಸ್ಪತ್ರೆಯಲ್ಲಿ ಉತ್ತಮ ಸೇವೆ ಸಲ್ಲಿಸುತ್ತಿರುವ ವೈದ್ಯರು ಸಿಬ್ಬಂದಿಗಳನ್ನು ಗೌರವಿಸಿ ಸನ್ಮಾನಿಸಿ ನೆನಪಿನ ಕಾಣಿಕೆ ನೀಡಲಾಯಿತು. ಅಲ್ಲದೆ ಆಸ್ಪತ್ರೆಯ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಅರ್ಥಪೂರ್ಣವಾಗಿ ಜಯಂತಿಯನ್ನು ಆಚರಿಸಲಾಯಿತು.
ಕಾರ್ಯಕ್ರಮದಲ್ಲಿ ವೈದ್ಯರುಗಳಾದ ಕಮಲಮ್ಮ, ನೀಲವೇಣಿ, ಪಲ್ಲವಿ, ರವಿಕುಮಾರ್, ವೆಂಕಟೇಶ್, ಮಾನಸ, ತೇಜಾಮಣಿ. ಕಿಶೋರ್, ಸುಮಾ, ಲ್ಯಾಬ್ ಟೆಕ್ನಿಶನ್ ನಾರಾಯಣ ಮೂರ್ತಿ, ಆರ್.ಉಮೇಶ್ ಕುಮಾರ್, ಪ್ರಸನ್ನ, ಚಿದಾನಂದ, ಚಾಲಕ ಮಹೇಂದ್ರ ಕುಮಾರ್, ಮಧು, ಶ್ರೀನಿವಾಸ್, ರಾಜು,, ನಿಂಗರಾಜು, ಸಮಾಜ ಸೇವಕ ನೀಲಸೋಗೆ ಉಮೇಶ್, ಗ್ರಾ.ಪಂ ಮಾಜಿ ಸದಸ್ಯ ಕೆ.ಮಹೇಶ, ಮೂಗೂರು ಶ್ರೀನಿವಾಸ್, ದುಂಡಪ್ಪ ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಹಾಜರಿದ್ದರು.

























