Home ಜಿಲ್ಲೆ ಮೈಸೂರು ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯನ್ನು ಪ್ರತಿಯೊಬ್ಬರು ನೆನೆಯಲೆಬೇಕು: ಮಂಜುನಾಥ್

ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯನ್ನು ಪ್ರತಿಯೊಬ್ಬರು ನೆನೆಯಲೆಬೇಕು: ಮಂಜುನಾಥ್

ಸಂಜೆವಾಣಿ ವಾರ್ತೆ
ಚಾಮರಾಜನಗರ ಏ.16-
ಡಾ.ಬಿ.ಆರ್.ಅಂಬೇಡ್ಕರ್ ಅವರ ಸಾಧನೆಯನ್ನು ಪ್ರತಿಯೊಬ್ಬರು ನೆನೆಯಲೆಬೇಕು. ಶಿಕ್ಷಣದಲ್ಲಿ ಮಹಾತ್ವವನ್ನು ಪಡೆದು ಎತ್ತರಕ್ಕೆ ಬೆಳೆದರು. ಅವರು ಹೆಚ್ಚು ಪಿ.ಹೆಚ್.ಡಿ ಗಳನ್ನು ಪಡೆದಿದ್ದಾರೆ.ಅವರು ಶಿಕ್ಷಣದ ಶಕ್ತಿ ಎಂದು ಚಾಮರಾಜನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ ಡೀನ್ ಹಾಗೂ ನಿರ್ದೆಶಕ ಡಾ.ಹೆಚ್.ಜಿ.ಮಂಜುನಾಥ್ ತಿಳಿಸಿದರು.


ನಗರದ ಸಮೀಪದ ಯಡಪುರದ ಸಿಮ್ಸ್ ಬೋಧನಾ ಆಸ್ಪತ್ರೆಯ ಆವರಣದಲ್ಲಿ ಭಾರತ ರತ್ನ ಸಂವಿಧಾನ ಶಿಲ್ಪಿ ಡಾ.ಬಿ.ಆರ್ ಅಂಬೇಡ್ಕರ್ ಅವರ 135ನೇ ಜನ್ಮ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಹಾಗೂ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು. ಡಾ.ಬಿ.ಆರ್.ಅಂಬೇಡ್ಕರ್ ಅವರು ಎಲ್ಲಾ ವರ್ಗದವರಿಗೂ ಸಮಾನತೆಯ ಜ್ಞಾನವನ್ನು ತುಂಬುದವರು. ಅವರು ನೀಡಿರುವ ಸಂವಿಧಾನ ಜನಸಾಮಾನ್ಯರಿಗೆ ದಾರಿ ದೀಪವಾಗಿದೆ ಎಂದು ಹೇಳಿದರು.


ಪ್ರತಿಯೊಬ್ಬ ವಿದ್ಯಾರ್ಥಿಗಳು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಬೇಕು. ಡಾ.ಬಿ.ಆರ್.ಅಂಬೇಡ್ಕರ್ ಅವರ ಮನೆಯೇ ಪುಸ್ತಕದ ಭಂಡಾರವಾಗಿತ್ತು. ಭೀಮ ಎಂದರೆ ಶಕ್ತಿ ಅಂಬೇಡ್ಕರ್ ಅವರನ್ನು ಭೀಮರಾವ್ ಅಂದು ಕರೆಯುತ್ತಾರೆ. ಅ ಶಕ್ತಿ ಪುರುಷನನ್ನು ಪಡೆದ ನಾವುಗಳೆ ಪುಣ್ಯವಂತರು. ಅವರ ದಿನಾಚರಣೆಯನ್ನು ಮಾಡಿದರೆ ಸಾಲದು ಅವರು ನಮಗೆ ನೀಡಿರುವ ದಾರಿಯಲ್ಲಿ ನಡೆದು ಅವರಿಗೆ ಅರ್ಪಿಸಬೇಕು. ಎಂದು ತಿಳಿಸಿದರು.


ಚಾ.ವೈ.ವಿ ಸಂಸ್ಥೆಯ ವೈದ್ಯಕೀಯ ಅಧಿಕ್ಷಕ ಡಾ.ಸಿ.ವಿ.ಮಾರುತಿ ಅವರು ಮಾತನಾಡಿ. ಡಾ.ಬಿ.ಆರ್ ಅಂಬೇಡ್ಕರ್ ಅವರು ಡಾಕ್ಟರ್ ನಾವುಗಳು ಸಹ ಡಾಕ್ಟರ್ ನಾವು ರೋಗಿಯವನ್ನು ಗುಣಪಡಿಸುವ ಡಾಕ್ಟರ್ ಡಾ.ಬಿ.ಆರ್.ಅಂಬೇಡ್ಕರ್ ಅವರು ನಮ್ಮ ದೇಶವನ್ನು ಅಸ್ಪøಶತೆ ಎಂಬ ಕಾಯಿಲೆಯಿಂದ ಹೋಗಲಾಡಿಸಿದ ಡಾಕ್ಟರ್ ಎಂದು ಬಣ್ಣಿಸಿದರು. ಡಾ.ಬಿ.ಆರ್.ಅಂಬೇಡ್ಕರ್ ತಂದೆ, ತಾಯಿ, ಗುರುಗಳಿಗೆ ಗೌರವವನ್ನು ಕೊಡುತ್ತಿದ್ದರು. ನಮ್ಮ ದೇಶಕ್ಕೆ ಉತ್ತಮ ಸಂವಿಧಾನವನ್ನು ನೀಡಿ ಸಾಮಾನ್ಯ ಜನರು ಬದುಕಲು ದಾರಿ ಮಾಡಿಕೊಟ್ಟಿದ್ದಾರೆ. ಡಾ.ಬಿ.ಆರ್.ಅಂಬೇಡ್ಕರ್ ಅವರ ತಂದೆಯು ಅಂಬೇಡ್ಕರ್ ಅವರಿಗೆ ಚಿಕ್ಕವಯಸ್ಸಿನಲ್ಲಿ ರಾಮಾಯಣ, ಮಹಾಭಾರತ ಪುಣ್ಯ ಕಥೆಗಳನ್ನು ಹೇಳುತ್ತಿದ್ದರು. ಡಾ.ಬಿ.ಆರ್.ಅಂಬೇಡ್ಕರ್ ಜ್ಞಾನದ ಮೇರು ಪರ್ವತವಾದರು. ಅವರು ಶಿಕ್ಷಣದಲ್ಲಿ ಸಾಧನೆಯನ್ನು ಮಾಡಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನವಾಗಿದ್ದಾರೆ. ಶಿಕ್ಷಣ ಪಡೆದ ವ್ಯಕ್ತಿಯನ್ನು ಜನರು ಎತ್ತರಕ್ಕೆ ಕರೆದೊಯುತ್ತಾರೆ ಎಂದರು.


ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಶಸ್ತ್ರಚಿಕಿತ್ಸಕ ತಾಯಿ ಮತ್ತು ಮಕ್ಕಳ ಆಸ್ಪತ್ರೆ ಡಾ.ಚಿನ್ನಬೋವಿ.ಎಂ, ಚಾ.ವೈ.ವಿ.ಸಂಸ್ಥೆ ಪ್ರಾಂಶುಪಾಲರಾದ ಡಾ.ಕೆ.ಟಿ.ಅಜಯ್, ಸ್ಥಾನಿಯ ವೈದ್ಯಧಿಕಾರಿ ಡಾ.ಏಜಾಜ್‍ಉಲ್ಲಾ ಖಾನ್ ಇವರು ಡಾ.ಬಿ.ಆರ್.ಅಂಬೇಡ್ಕರ್ ಕುರಿತು ಮಾತನಾಡಿದರು.


ವೇದಿಕೆಯಲ್ಲಿ ಶಶ್ರೂಷಕರ ಅಧಿಕ್ಷಕರು ದರ್ಜೆ 2 (ಪ್ರಭಾರ) ಚಂದ್ರಕಲಾ ವಿ.ಶೇಷಾಧ್ರಿ, ಜಮುನ ಕೆ.ಎಂ, ಸಿಮ್ಸ್ ನರ್ಸಿಂಗ್ ಕಾಲೇಜಿನ ಉಪ ಪ್ರಾಂಶುಪಾಲರಾದ ಕೃಷ್ಣಮೂರ್ತಿ ಇದ್ದರು.
ಕಾರ್ಯಕ್ರಮ ಆಯೋಜಕರಾದ ಡಾ. ಶಿವಸ್ವಾಮಿ ರವರ ನೇತೃತ್ವದಲ್ಲಿ ಡ್ರೈವರ್ ಮಹೇಶ್, ಕೃಷ್ಣ ಮೂರ್ತಿ, ಕುಮಾರ್, ಶ್ರೀನಿವಾಸ್, ಪರಶಿವಮೂರ್ತಿ, ಮಧುಸೂದನ್, ಮಹೇಶ್ (ಡೈಕ್ಲೊ ), ಶೃಂಗಾರ್, ಪ್ರತಾಪ್, ಯಮುನಾ, ಮಂಜುಳ, ಕಿಟ್ಟಿ, ಮಹದೇಶ್ ಮತ್ತು ಭೀಮ ಬಳಗ ಉಪಸ್ಥಿತರಿದ್ದರು.