Home ಜಿಲ್ಲೆ ಬಾಬಾ ಸಾಹೇಬರ ಆದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಿ:ಡಿ.ಸಿ.ಪಾಟೀಲ

ಬಾಬಾ ಸಾಹೇಬರ ಆದರ್ಶಗಳನ್ನು ಇಂದಿನ ಯುವಕರು ಮೈಗೂಡಿಸಿಕೊಳ್ಳಿ:ಡಿ.ಸಿ.ಪಾಟೀಲ

ಸಂಜೆವಾಣಿ ವಾರ್ತೆ
ಕೆಂಭಾವಿ:ಏ.೧೬:ಡಾ. ಬಾಬಾ ಸಾಹೇಬ ಅಂಬೇಡ್ಕರ ಎಂದರೆ ಕೇವಲ ಆಡಂಬರದ ಆಚರಣೆಯಲ್ಲ ಅವರು ಜ್ಞಾನದ ಸಾಗರ ಎಂದು ಡಿಎಸ್‌ಎಸ್ ಜಿಲ್ಲಾ ಸಂಚಾಲಕ ಶ್ರೀನಿವಾಸ ನಾಯಕ ಪ್ಯಾಪ್ಲಿ ಬಣ್ಣಿಸಿದರು.
ಪಟ್ಟಣದ ಸಮೀಪ ಮಾಲಗತ್ತಿ ಗ್ರಾಮದಲ್ಲಿ ಡಾ.ಬಾಬಾ ಸಾಹೇಬ ಅಂಬೇಡ್ಕರ್ ರವರ ೧೩೫ ನೇ ಜಯಂತ್ಯುತ್ಸವದ ನಿಮಿತ್ತ ಹಮ್ಮಿಕೊಂಡಿದ್ದ ಮಹಾನಾಯಕ ಪ್ರೀಮಿಯರ್ ಲೀಗ್-೨ ಕ್ರಿಕೆಟ್ ಪಂದ್ಯಾವಳಿಯಲ್ಲಿ ವಿಜೇತರಾದ ತಂಡಕ್ಕೆ ಬಹುಮಾನ ವಿತರಿಸಿ ಮಾತನಾಡಿದರು. ತಮಗಾಗಿರುವ ಕಷ್ಟ ಕಾರ್ಪಣ್ಯಗಳು ನನ್ನ ಮುಂದಿನ ಪೀಳಿಗೆಗೆ ಬರಬಾರದು ಎಂದು ತಿಳಿದು ಸಂವಿಧನಾದಲ್ಲಿ ಹಲವು ಹಕ್ಕು ಮತ್ತು ಕರ್ತವ್ಯಗಳನ್ನು ಸೇರಿಸಿ ಇಡೀ ವಿಶ್ವಕ್ಕೆ ಮಾದರಿಯಾಗಿದ್ದಾರೆ. ಅವರ ಆದರ್ಶಗಳು ಇಂದಿಗೂ ಪ್ರಸ್ತುತ ಎಂದು ತಿಳಿಸಿದರು.
ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ನಂದಿ ಶಿಕ್ಷಣ ಸಂಸ್ಥೆಯ ಡಿ.ಸಿ.ಪಾಟೀಲ, ಇಂದಿನ ಯುವಕರು ದುಶ್ಚಟಗಳಿಗೆ ಬಲಿಯಾಗದೆ ಕ್ರೀಡಾ ಆಸಕ್ತಿ ಮೈಗೂಡಿಸಿಕೊಂಡು ಸೃಜನಶೀಲ ವ್ಯಕ್ಯಿತ್ವ ರೂಪಿಸಿಕೊಳ್ಳಬೇಕು. ತಾವು ಪಟ್ಟ ಕಷ್ಟವನ್ನು ಬೇರೆ ಯಾರು ಪಡಬಾರದು ಎಂದು ಸಂವಿಧಾನವನ್ನು ಬರೆದು ಸಮಾನತೆಗಾಗಿ ಹೋರಾಡಿದರು. ನಮ್ಮ ಮಕ್ಕಳು ಮುಂದುವರೆಯಬೇಕಾದರೆ ಶಿಕ್ಷಣ ಅತ್ಯಗತ್ಯ ಎಂದು ಪ್ರತಿಪಾದಿಸಿದರು. ಇವತ್ತಿನ ದೊಡ್ಡ ದೊಡ್ಡ ನಾಯಕರೆಲ್ಲ ಡಾ.ಅಂಬೇಡ್ಕರ್ ಬರೆದ ಸಂವಿಧಾನದ ಫಲಾನುಭವಿಗಳೆ. ಬಾಬಾ ಸಾಹೇಬರ ಮೂಲಮಂತ್ರಗಳಾದ ಶಿಕ್ಷಣ, ಸಂಘಟನೆ, ಹೋರಾಟದ ಮೂಲಕ ತಮ್ಮ ಬೇಡಿಕೆಗಳನ್ನು ಪೂರೈಸಿಕೊಳ್ಳಲು ಸಾಧ್ಯ. ಕೇವಲ ಕ್ರೀಡೆಗೆ ಜೋತು ಬೀಳದೆ ಶಿಕ್ಷಣಕ್ಕೆ ಹೆಚ್ಚಿನ ಒತ್ತು ನೀಡಬೇಕು ಎಂದು ಸಲಹೆ ನೀಡಿದರು.
ಮುಖ್ಯ ಶಿಕ್ಷಕ ಬಸವರಾಜ ಮಲ್ಲೆ ಮಾತನಾಡಿದರು. ಈ ಸಂದರ್ಭದಲ್ಲಿ ಸಣ್ಣಕ್ಕೆಪ್ಪ ಸಾಹುಕಾರ, ಭೀಮಣ್ಣ ದೊರೆ, ಮಹಾರಾಯ ಸಾಹುಕಾರ, ಮಡಿವಾಳಪ್ಪ ಕಟ್ಟಿಮನಿ, ಆರ್.ಎಸ್ ಮಾಲಗತ್ತಿ, ಹುಸೇನ್ ಪಟೇಲ್, ಪರಶುರಾಮ ಗಡ್ಡದ, ಮುತ್ತುರಾಜ ಬಡಿಗೆರ, ಗೊಲ್ಲಾಳಪ್ಪ ದೊರೆ, ರಾಜು ದೊಡ್ಮನಿ, ಹಳ್ಳೆಪ್ಪ ಕವಾಲ್ದಾರ, ಮಂಜು ತುಂಬಗಿ, ಕಾಶಿಪತಿ ಕಂಬಾರ, ಎಂ.ಎಸ್ ಮಳ್ಳಿ, ಶ್ರೀಶೈಲ್ ಮ್ಯಾಗೇರಿ, ಭೀಮರಾಯ ಬಡಿಗೇರ, ರಾಜು ಸಾಹುಕಾರ, ರುದ್ರಯ್ಯ ಸ್ವಾಮಿ, ಅಬ್ದುಲ್ ಪಟೇಲ, ಅಬ್ಬಾಸಲಿ ಮಕ್ಕಾಂದಾರ, ಬಾಬು ಕಂಬಾರ, ಮಲ್ಲಪ್ಪ ಬಡಿಗೇರ ಸೇರಿದಂತೆ ಹಲವರಿದ್ದರು.
ಶಿಕ್ಷಕ ಮಲ್ಲು ಸಜ್ಜನ ನಿರೂಪಿಸಿದರು. ಮುಖ್ಯ ಶಿಕ್ಷಕ ಬಸವರಾಜ ಮಲ್ಲೆ ಪ್ರಥಮ ಬಹುಮಾನ ಹಾಗೂ ಚಾಲಕರ ಸಂಘದ ಅಧ್ಯಕ್ಷ ಹುಸೇನ ಪಟೇಲ ದ್ವಿತೀಯ ಬಹುಮಾನ ನೀಡಿದರು.