Home ಜಿಲ್ಲೆ ಕಲಬುರಗಿ ಡಾ. ಅಂಬೇಡ್ಕರ್ ಕೊಡುಗೆ ಅಪಾರ: ಸಿಒ ಪನಶೆಟ್ಟಿ

ಡಾ. ಅಂಬೇಡ್ಕರ್ ಕೊಡುಗೆ ಅಪಾರ: ಸಿಒ ಪನಶೆಟ್ಟಿ

ಆಳಂದ:ಏ.೧೬: ದೇಶಕ್ಕೆ ಡಾ. ಬಾಬಾಸಾಹೇಬ ಅಂಬೇಡ್ಕರ್ ಕೊಡುಗೆ ಅಪಾರವಾಗಿದೆ ಎಂದು ಪುರಸಭೆ ಮುಖ್ಯಾಧಿಕಾರಿ ಸಂಗಮೇಶ ಪನಶೆಟ್ಟಿ ಅವರು ಹೇಳಿದರು.
ಪಟ್ಟಣದ ಪುರಸಭೆ ಆವರಣದಲ್ಲಿ ಪುರಸಭೆಯಿಂದ ಹಾಗೂ ಮುಂಭಾಗದಲ್ಲಿ ನೀಲಿ ಧ್ವಜ ವೃತ್ತದಲ್ಲಿ ಪೌರ ಕಾರ್ಮಿಕರು ಹಮ್ಮಿಕೊಂಡ ಡಾ. ಬಿ.ಆರ್. ಅಂಬೇಡ್ಕರ್ ಅವರ ೧೩೫ನೇ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಅವರು ಇನ್ನಷ್ಟು ಉದ್ದೇಶಿಸಿ ಮಾತನಾಡಿದ್ದಾರೆ ಉತ್ತಮ ಹೊಸ ಅಂಶಗಳನ್ನು ಬರೆದುಕೊಡಿ
ಪುರಸಭೆ ನಿಕಟಪೂರ್ವ ಸದಸ್ಯ ಶಿವುಪುತ್ರ ನಡಗೇರಿ, ಎಇಇ ಜಗದೀಶ,ಪೌರನೌಕರರ ಸಂಘದ ಅಧ್ಯಕ್ಷ ಸಿದ್ರಾಮ ಬಟಗೇರಿ, ಗೌರವ ಅಧ್ಯಕ್ಷ ಶಿವರಾಯ ಸರಸಂಬಿ, ಮುಖಂಡ ಜೀವರಾಜ ದೇವನೂರ, ಆರ್‌ಐ ಹರಿಷ ಗೋವಿನ, ಎಸ್‌ಐ ಲಕ್ಷö್ಮಣ ತಳವಾರ,ಆನಂದ, ಶಿವರಾಯ ಮಂಗಲಗಿ, ಶಫಿ ರೋತೆ, ಚೋಟು, ಚಿದಾನಂದ, ಮಲ್ಲು ಲಂಗೋಟೆ, ಮೌಲಾ ಖಂಡುವಾಲೆ, ಗುತ್ತಿಗೆದಾರ ಸಿದ್ಧರಾಮ ದೇಸಾಯಿ ಸೇರಿದಂತೆ ಪೌರ ಕಾರ್ಮಿಕರು ಮತ್ತು ನೌಕರರು ಮಹಿಳಾ ಸಿಬ್ಬಂದಿಗಳು ಉಪಸ್ಥಿತರಿದ್ದರು.
ಆರಂಭದಲ್ಲಿ ವೃತ್ತದಲ್ಲಿ ಧ್ವಜಾರೋಹಣ ನೆರವೇರಿಸಿ ಡಾ.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ನೆರವೇರಿಸಿ ಪಟಾಕಿ ಸಿಡಿಸಿ ಸಿಹಿ ಹಂಚಲಾಯಿತು. ಪುರಸಭೆ ಆವರಣದಲ್ಲೂ ಡಾ. ಬಾಬಾಸಾಹೇಬರ ಭಾವಚಿತ್ರಕ್ಕೆ ಪೂಜೆ ನೆರವೇರಿಸಲಾಯಿತು.