Home ಜಿಲ್ಲೆ ಮಣಿಕಂಠ ಫೌಂಡೇಶನ್: ಅಂಬೇಡ್ಕರ್ ಜಯಂತಿ ಆಚರಣೆ

ಮಣಿಕಂಠ ಫೌಂಡೇಶನ್: ಅಂಬೇಡ್ಕರ್ ಜಯಂತಿ ಆಚರಣೆ

ವಿಜಯಪುರ,ಏ.16: ಮಹಾ ಮಾನವತಾವಾದಿ ಡಾ. ಭೀಮರಾವ ಅಂಬೇಡ್ಕರ್ ಅವರ ಜಯಂತಿಯನ್ನು ಮಣಿಕಂಠ ಫೌಂಡೇಶನ್ ವತಿಯಿಂದ ಅರ್ಥಪೂರ್ಣವಾಗಿ ಆಚರಿಸಲಾಯಿತು.
ನಗರದ ಶಿವಗಿರಿ ಹತ್ತಿರದ ಗಾಂಧಿನಗರ ಬಡಾವಣೆಯಲ್ಲಿ (ಕುಷ್ಠರೋಗ)ದಿಂದ ಬಳಲುತ್ತಿರುವ ವ್ಯಕ್ತಿಗಳಿಗೆ ಆಹಾರ ಕಿಟ್ ವಿತರಣೆ ಮಾಡಲಾಯಿತು. ಈ ಮಹತ್ವದ ಸೇವಾ ಕಾರ್ಯಕ್ರಮಕ್ಕೆ ಶ್ರೀ ಮಡಿವಾಳಯ್ಯ (ಮಡುಸ್ವಾಮಿ) ಹಿರೇಮಠ ಅವರು ನೇತೃತ್ವ ವಹಿಸಿಕೊಂಡಿದ್ದು, ಸಮಾಜದ ಹಿಂದುಳಿದ ಮತ್ತು ನಿರ್ಲಕ್ಷಿತ ವರ್ಗಗಳ ಜೀವನ ಮಟ್ಟವನ್ನು ಸುಧಾರಿಸುವುದು ಪ್ರತಿಯೊಬ್ಬರ ಹೊಣೆಗಾರಿಕೆಯಾಗಿದೆ ಎಂದು ತಮ್ಮ ಮಣಿಕಂಠ ಫೌಂಡೇಶನ್ ವತಿಯಿಂದ ಅಭಿಪ್ರಾಯ ವ್ಯಕ್ತಪಡಿಸಿದರು.
ಮಣಿಕಂಠ ಫೌಂಡೇಶನ್ ತನ್ನ ಸಾಮಾಜಿಕ ಬದ್ಧತೆಯನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದು, ಇದು ಕೇವಲ ಒಂದು ಅಳಿಲು ಸೇವೆಯಾದರೂ, ಸಂಘದ ಶಕ್ತಿ ಹೆಚ್ಚಾದಂತೆ ಇನ್ನಷ್ಟು ವಿಶಾಲ ಸೇವಾ ಕಾರ್ಯಗಳನ್ನು ಕೈಗೊಳ್ಳುವ ಸಂಕಲ್ಪವನ್ನು ವ್ಯಕ್ತಪಡಿಸಿದೆ. ಈ ಸೇವಾ ಕಾರ್ಯಕ್ಕೆ ತನು, ಮನ, ಧನದಿಂದ ಸಹಕಾರ ನೀಡಿದ ಎಲ್ಲ ದಾನಿಗಳು ಹಾಗೂ ಸಹಭಾಗಿಗಳಿಗೂ ಮಣಿಕಂಠ ಫೌಂಡೇಶನ್ ವತಿಯಿಂದ ಹೃತ್ಪೂರ್ವಕ ಕೃತಜ್ಞತೆ ಸಲ್ಲಿಸಲಾಗಿದೆ.
ಈ ಸಂದರ್ಭದಲ್ಲಿ ಸಂಘದ ಅಧ್ಯಕ್ಷ ಪ್ರಭುಸ್ವಾಮಿ ಹಿರೇಮಠ ಹಾಗೂ ಸದಸ್ಯರಾದ ಸಂದೀಪ್ ಪವಾರ, ಸೋಮಶೇಖರ, ಅಮೋಘಸಿದ್ದ ಕರಾಂಡೆ, ಪ್ರಶಾಂತ, ಕೃಷ್ಣ ಕವಲಗಿ, ನವೀನ ಯರಗಲ್, ರಾಜು ಗುನ್ನಾಪುರ ಹಾಗೂ ಅನೇಕ ಸದಸ್ಯರು ಹಿತೈಷಿಗಳು ಭಾಗಿಯಾಗಿದ್ದರು.