Home ಜಿಲ್ಲೆ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಅಂಬೇಡ್ಕರ್ ಜಯಂತಿ

ವಿಜಯಪುರ,ಏ.16:ವಿಜಯಪುರ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರ 135 ನೇ ಜಯಂತಿಯನ್ನು ಆಚರಿಸಲಾಯಿತು.
ಅಂಬೇಡ್ಕರ್ ಭಾವಚಿತ್ರಕ್ಕೆ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಲೋಣಿ ಅವರು ಪುಷ್ಪ ನಮನ ಸಲ್ಲಿಸುವದರೊಂದಿಗೆ ಅಂಬೇಡ್ಕರ್ ಜಯಂತಿಯನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ ಅಧಕ್ಷ್ಯ ಲೋಣಿ ಅವರು ಮಾತನಾಡಿ, ಅಂಬೇಡ್ಕರ್ ಅವರು ಆಖಂಡ ಭಾರತ ದೇಶದ ಸಂವಿಧಾನ ರಚಿಸಿ ಎಲ್ಲ ಸಮುದಾಯಕ್ಕೆ ಮಾದರಿಯಾಗಿದ್ದಾರೆ. ಅವರು ತಮ್ಮ ಬಾಲ್ಯ ಜೀವನದಿಂದ ಅನೇಕ ರೀತಿಯ ಕಷ್ಟಗಳನ್ನು ದುಃಖಗಳನ್ನು ಸಹಿಸುತ್ತಾ ನಡೆದುಬಂದ ಜೀವನ ಬಹಳ ಕಷ್ಟಕರವಾಗಿತ್ತು. ಸತತವಾಗಿ ಹೋರಾಟ ಮಾಡುತ್ತಾ ಮಹಾತ್ಮಾ ಗಾಂಧಿಯವರ ಮನಗೆದ್ದು, ಜಗತ್ತಿನ ಎಲ್ಲ ರಾಷ್ಟ್ರಗಳ ಕಾನೂನನ್ನು ಓದಿ ನಮ್ಮ ರಾಷ್ಟ್ರದ ದೀನದಲಿತರ, ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತರ ಸಮಾಜಗಳನ್ನು ಏಳ್ಗೆಗಾಗಿ ಕೊಟ್ಟ ಕೊಡುಗೆ ಅಪಾರವಾಗಿದೆ. ಅವರು ಸಮಾಜದಲ್ಲಿ ಶಿಕ್ಷಣದ ಕುರಿತು ಬಹಳ ಮಹತ್ವ ನೀಡಿದ್ದರು. ಇಂದು ನಾವು ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಮಾರ್ಗದರ್ಶನಗಳನ್ನು ಹಳ್ಳಿ ಹಳ್ಳಿಗಳಲ್ಲಿ ಪ್ರತಿಯೊಬ್ಬ ನಾಗರಿಕರಿಗೆ ತಿಳಿಯುವ ಹಾಗೆ ಮಾಡುವ ಪ್ರಕ್ರಿಯೆಯ ಅವಶ್ಯಕತೆ ಇದೆ ಎಂದು ಬಹಳ ಮಾರ್ಮಕವಾಗಿ ಹೇಳಿದರು.
ಹಿರಿಯ ನಾಯಕÀ ಕೆ. ಎಫ್. ಅಂಕಲಗಿ ವಕೀಲರು ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ ಅವರು ಭಾರತಕ್ಕೆ ಅಷ್ಟೇ ಅಲ್ಲ. ಇಡೀ ಜಗತ್ತಿಗೆ ಮಾದರಿಯಾಗಿದ್ದರು. ಜಗತ್ತಿನ ಎಲ್ಲ ಸಂವಿಧಾನಗಳನ್ನು ಅಭ್ಯಸಿಸಿ ಭಾರತದ ಸಂವಿಧಾನ ರಚಿಸಿದ ಮಹಾನ್ ನಾಯಕರಾಗಿರುವರು. ಇಂದು ಸಂವಿಧಾನದಲ್ಲಿ ಬದಲಾವಣೆ ಮಾಡಲು ಕೆಲವರು ಪ್ರಯತ್ನ ಮಾಡುತ್ತಿರುವರು. ಆದರೆ ಅದು ಮಾಡಲು ಸಾಧ್ಯವಿಲ್ಲ. ಬದಲಾವಣೆಗೆ ಪ್ರಯತ್ನಿಸಿದರೆ ಮತ್ತೆ ಅದಕ್ಕಾಗಿ ಹೋರಾಟ ಮಾಡುತ್ತೇವೆ ಎಂದು ಹೇಳಿದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ವೈಜನಾಥ ಕರ್ಪೂರಮಠ ಮಾತನಾಡಿ, ಡಾ. ಬಾಬಾಸಾಹೇಬ ಅಂಬೇಡ್ಕರ್ ಅವರು ದೀನ ದಲಿತರ, ಹಿಂದುಳಿದ ವರ್ಗಗಳ ಕುರಿತು ಬಹಳಷ್ಟು ಚಿಂತನೆ ಮಾಡಿರುವರು. ಇಂದು ಯುವಕರು ಅಂಬೇಡ್ಕರ್ ಅವರ ಕುರಿತು ಚರ್ಚೆ ಮಾಡಿ ಅವರ ಚಿಂತನೆಗಳನ್ನು ಅಳವಡಿಸಿಕೊಳ್ಳುವುದು ಬಹಳ ಮಹತ್ವವಾಗಿದೆ. ಒಮ್ಮೆ ಅಮೆರಿಕದ ನ್ಯಾಯಾಧೀಶರನ್ನು ಭಾರತದ ಸಂವಿಧಾನ ಪ್ರತಿ ಕೊಟ್ಟಾಗ ಅವರು ಅದನ್ನು ಓದಿ ನಮ್ಮ ಸಂವಿಧಾನಕ್ಕಿಂತಲೂ ಅತೀ ಉತ್ತಮವಾದ ರಚನೆಯಾಗಿದೆ ಎಂದು ಹೇಳಿದ ಸಂದರ್ಭ ಕೇಳಿದರೆ ಇದು ಬಾಬಾಸಾಹೇಬ ಅಂಬೇಡ್ಕರ ಅವರು ರಚಿಸಿದ ಸಂವಿಧಾನದ ಕುರಿತು ಹೆಮ್ಮೆ ಎನಿಸುತ್ತದೆ.
ಈ ಕಾರ್ಯಕ್ರಮದಲ್ಲಿ ಕಾಂಗ್ರೆಸ್ ಮುಖಂಡೆ ವಿದ್ಯಾವತಿ ಅಂಕಲಗಿ, ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷರಾದ ಚಾಂದಸಾಬ ಗಡಗಲಾವ, ಗಂಗಾಧರ ಸಂಬಣ್ಣಿ, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿಗಳಾದ ಎಂ. ಎಂ. ಮುಲ್ಲಾ, ವಸಂತ ಹೊನಮೋಡೆ, ದೇಸು ಚವ್ಹಾಣ, ಶಬ್ಬೀರ ಜಾಗಿರದಾರ, ಜಮೀರ ಬಕ್ಷಿ, ಆರತಿ ಶಾಹಪೂರ, ಆನಂದ ಜಾಧವ, ಶಾಜಾನ ಮುಲ್ಲಾ, ಸಲೀಮ ಪೀರಜಾದೆ, ಚಂದ್ರಶೇಖರ ಪಾಸೋಡಿ, ಹರೀಶ ಕೌಲಗಿ, ಸತೀಶ ಅಡವಿ, ಎ. ಎ. ಹೊರ್ತಿ, ರಾಘವೇಂದ್ರ ವಡವಡಗಿ, ರಮೀಜಾ ನದಾಫ, ಆಸ್ಮಾ ಕಾಲೇಬಾಗ, ಶಮೀಮ ಅಕ್ಕಲಕೋಟ, ಮಹಾದೇವ ರಾಠೋಡ, ನಿಂಗಪ್ಪ ಸಂಗಾಪೂರ, ಕೃಷ್ಣಾ ಲಮಾಣಿ, ಅಶ್ಫಾಕ ಮನಗೂಳಿ, ಎಂ.ಎ. ಬಕ್ಷಿ, ಅನ್ನಪೂರ್ಣ ಬೀಳಗಿಕರ, ಮಾರುತಿರಾವ ಬಂಡಿ, ಉಸ್ಮಾನ ಪಟೇಲ, ತಾಜುದ್ದಿನ ಖಲೀಫಾ, ಹಾಜಿಲಾಲ ದಳವಾಯಿ, ಅಬೂಬಕರ ಕಂಬಾಗಿ, ಭಾರತಿ ನಾವಿ, ಬಾಳಾಸಾಹೇಬ ಪಾಟೀಲ, ಗುಲಾಬ ಚವ್ಹಾಣ, ಸಾಹೇಬಗಾಡ ಬಿರಾದಾರ, ಅಂಬಣ್ಣಾ ಕಳಮನಿ, ಪ್ರದೀಪ ಸೂರ್ಯವಂಶಿ, ಮಲ್ಲಿಕಾರ್ಜುನ ಯಂಕಂಚಿ, ಸಣ್ಣಪ್ಪ ತಳವಾರs, ಸಂತೋಷ ಬಾಲಗಾವಿ, ಶಬೀನಾ ಮಂಟೂರ ಹಾಗೂ ಇತರ ಕಾರ್ಯಕರ್ತರು ಉಪಸ್ಥಿತರಿದ್ದರು.