
ಸಂಜೆವಾಣಿ ವಾರ್ತೆ
ಬಳ್ಳಾರಿ, ಏ.16: ಮಾದಕ ದ್ರವ್ಯ ಸೇವನೆ ಪ್ರಕರಣದಡಿ ಬಳ್ಳಾರಿಯಲ್ಲಿ ಇಬ್ಬರನ್ನು ಬಂಧಿಸಲಾಗಿದೆಂದು ಎಸ್ಪಿ ಸುಮನ್ ಡಿ.ಪೆನ್ನೇಕರ್ ತಿಳಿಸಿದ್ದಾರೆ.
ಕಳೆದ ಮಾರ್ಚ 27 ರಿಂದ ಎಪ್ರಿಲ್ 14 ರ ವರೆಗೆ ಈ ಕುರಿತು ಸಂಜೆ 8 ರಿಂದ ರಾತ್ರಿ 11 ವರೆಗೆ ಮಾದಕ ದ್ರವ್ಯ ಸೇವನೆ ಮಾಡುವವರನ್ನು ಪತ್ತೆ ಹಚ್ಚಲು ವಿಶೇಷ ಗಸ್ತನ್ನು ಹಮ್ಮಿಕೊಳ್ಳಲಾಗಿತ್ತು.
ಈ ಕಾರ್ಯಚರಣೆಯಲ್ಲಿ 766 ಜನರನ್ನು ಪರಿಶೀಲನೆ ಮಾಡಿ, 63 ಜನರನ್ನು ವೈದ್ಯಕೀಯ ಪರೀಕ್ಷೆ ಗೆ ಒಳಪಡಿಸಲಾತ್ತು. ಇವರಲ್ಲಿ ಇಬ್ಬರು ಮಾದಕ ದ್ರವ್ಯ ಸೇವನೆ ಮಾಡಿರುವುದು ಧೃಡಪಟ್ಟಿರುತ್ತದೆ. ಈ ಇಬ್ಬರ ವಿರುದ್ಧ ಎನ್.ಡಿ.ಪಿ.ಎಸ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಲಾಗಿರುತ್ತದೆ. ಉಳಿದ 762 ಜನರ ವಿರುದ್ಧ ಅನುಮಾನಸ್ಪದ ಓಡಾಟ ಆಧಾರದಲ್ಲಿ ಕರ್ನಾಟಕ ಪೊಲೀಸ್ ಕಾಯ್ದೆಯಡಿಯಲ್ಲಿ ಲಘು ಪ್ರಕರಣಗಳನ್ನು ದಾಖಲಿಸಲಾಗಿದೆಂದು ಅವರು ಹೇಳಿದ್ದಾರೆ.






















