
ಯಾದಗಿರಿ:ಏ.೨:ಸುರಪುರ ತಾಲ್ಲೂಕಿನ ವಿವಿಧ ಗ್ರಾಮ ಪಂಚಾಯತಗಳಲ್ಲಿ ೨೦೨೪-೨೫ನೇ ಸಾಲಿನ ೧೫ನೇ ಹಣಕಾಸು ಯೋಜನೆಯಡಿ ಪರಿಶಿಷ್ಟ ಜಾತಿಗೆ ಮೀಸಲಾದ ಅನುದಾನ ದುರ್ಬಳಕೆಗೊಂಡಿರುವ ಬಗ್ಗೆ ಗಂಭೀರ ಆರೋಪಗಳು ಕೇಳಿಬಂದಿವೆ.
ಈ ಕುರಿತು ಕರ್ನಾಟಕ ದಲಿತ ಸಂಘರ್ಷ ಸಮಿತಿ (ಭೀಮವಾದ) ಸುರಪುರ ಘಟಕದ ಪದಾಧಿಕಾರಿಗಳು ಸಂಬAಧಿಸಿದ ಅಧಿಕಾರಿಗಳಿಗೆ ದೂರು ಸಲ್ಲಿಸಿದ್ದು, ಪಂಚಾಯತ ಅಭಿವೃದ್ಧಿ ಅಧಿಕಾರಿಗಳು (Pಆಔ) ವಿವಿಧ ಕಾಮಗಾರಿಗಳ ಹೆಸರಿನಲ್ಲಿ ಮೀಸಲಾದ ಅನುದಾನವನ್ನು ನಿಯಮಬಾಹಿರವಾಗಿ ಬಳಸಿಕೊಂಡಿದ್ದಾರೆ ಎಂದು ಆರೋಪಿಸಿದ್ದಾರೆ.
ಸಂಘದ ಪ್ರತಿನಿಧಿಗಳ ಪ್ರಕಾರ, ಸುರಪುರ ತಾಲ್ಲೂಕಿನ ಹಲವಾರು ಗ್ರಾಮ ಪಂಚಾಯತಗಳಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿದ್ದ ಅನುದಾನವನ್ನು ಸರಿಯಾದ ಉದ್ದೇಶಗಳಿಗೆ ಬಳಸದೇ, ಕಾಗದದಲ್ಲೇ ಕಾಮಗಾರಿಗಳನ್ನು ತೋರಿಸಿ ದುರ್ಬಳಕೆ ಮಾಡಲಾಗಿದೆ. ಹೆಗ್ಗನದೊಡ್ಡಿ, ಬಾದ್ಯಾಪುರ, ಏವೂರು, ಯಾಳಗಿ, ಯಕ್ತಾಪುರ, ವಾಗಣಗೇರಾ, ತಿಂಥಣಿ, ಸೂಗೂರು, ಪೇಠ ಅಮ್ಮಾಪುರ, ಕಿರದಳ್ಳಿ, ನಗನೂರ, ಮಲ್ಲಾಬಿ, ಮಾಲಗತ್ತಿ, ಖಾನಾಪುರ (ಎಸ್.ಹೆಚ್.), ಕರಡಕಲ್ಲ, ಕಚಕನೂರ, ದೇವಿಕೇರಾ, ದೇವತ್ಕಲ್, ದೇವರಗೋನಾಲ, ದೇವಾಪುರ, ಅರಕೇರಾ (ಕೆ), ಆಲ್ದಾಳ ಸೇರಿದಂತೆ ಹಲವು ಪಂಚಾಯತಗಳಲ್ಲಿ ಈ ಅಕ್ರಮ ನಡೆದಿದೆ ಎಂಬ ಶಂಕೆ ವ್ಯಕ್ತವಾಗಿದೆ.
ವಿಶೇಷವಾಗಿ ಸೂಗೂರು (?೧೦,೭೦,೧೯೦), ಪೇಠ ಅಮ್ಮಾಪುರ (?೨,೯೩,೦೦೦), ಕಿರದಳ್ಳಿ (?೪,೪೫,೦೦೦), ನಗನೂರ (?೧,೬೦,೦೦೦), ಮಲ್ಲಾಬಿ, ಮಾಲಗತ್ತಿ (?೩,೫೦,೦೦೦), ಖಾನಾಪುರ (ಎಸ್.ಹೆಚ್.) (?೪,೧೦,೦೦೦), ಕರಡಕಲ್ಲ (?೨,೦೦,೦೦೦), ಕಚಕನೂರ (?೧,೨೩,೫೦೦), ದೇವಿಕೇರಾ (?೫,೬೦,೦೦೦), ದೇವತ್ಕಲ್ (?೬,೬೨,೫೦೦), ದೇವರಗೋನಾಲ (?೨,೫೦,೦೦೦), ದೇವಾಪುರ (?೧,೪೫,೪೯೩), ಅರಕೇರಾ (ಕೆ) (?೬,೬೧,೮೫೭) ಹಾಗೂ ಆಲ್ದಾಳ (?೫,೮೦,೦೦೦) ಗ್ರಾಮ ಪಂಚಾಯತಗಳಲ್ಲಿ ಲಕ್ಷಾಂತರ ರೂಪಾಯಿ ಅನುದಾನ ದುರ್ಬಳಕೆಯಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಒಟ್ಟು ?೮೬,೨೬,೩೪೫ (ಎಂಭತ್ತಾರು ಲಕ್ಷದ ಇಪ್ಪತ್ತಾರು ಸಾವಿರದ ಮೂರು ನೂರ ನಲವತ್ತೈದು) ಅನುದಾನವನ್ನು ಯಾವುದೇ ಕಾಮಗಾರಿಗಳಿಗೆ ಬಳಸದೇ ನಕಲಿ ದಾಖಲೆಗಳನ್ನು ಸೃಷ್ಟಿಸಿ ಬೋಗಸ್ ಬಿಲ್ಗಳ ಮೂಲಕ ಲೂಟಿ ಮಾಡಲಾಗಿದೆ ಎಂದು ಸಂಘ ಗಂಭೀರವಾಗಿ ಆರೋಪಿಸಿದೆ.
ಈ ಹಿನ್ನೆಲೆಯಲ್ಲಿ ತಕ್ಷಣ ಸ್ಥಳ ಪರಿಶೀಲನೆ ನಡೆಸಿ, ಪ್ರತ್ಯೇಕ ತನಿಖಾ ತಂಡವನ್ನು ರಚಿಸಿ, ತಪ್ಪಿತಸ್ಥ ಪಂಚಾಯತ ಅಭಿವೃದ್ಧಿ ಅಧಿಕಾರಿಗಳನ್ನು ಅಮಾನತ್ತುಗೊಳಿಸಿ ಕಾನೂನು ಕ್ರಮ ಕೈಗೊಳ್ಳಬೇಕೆಂದು ಸಂಘ ಒತ್ತಾಯಿಸಿದೆ. ಜೊತೆಗೆ ದುರ್ಬಳಕೆಯಾದ ಹಣವನ್ನು ಸರ್ಕಾರಕ್ಕೆ ಮರಳಿ ವಸೂಲಿ ಮಾಡಬೇಕು ಹಾಗೂ ಭವಿಷ್ಯದಲ್ಲಿ ಇಂತಹ ಘಟನೆಗಳು ಮರುಕಳಿಸದಂತೆ ದಕ್ಷ ಮತ್ತು ಪ್ರಾಮಾಣಿಕ ಅಧಿಕಾರಿಗಳನ್ನು ನೇಮಿಸಬೇಕೆಂದು ಆಗ್ರಹಿಸಲಾಗಿದೆ.
ಈ ಮನವಿಗೆ ತಕ್ಷಣ ಸ್ಪಂದನೆ ಸಿಗದಿದ್ದರೆ ಭ್ರಷ್ಟ ಅಧಿಕಾರಿಗಳ ವಿರುದ್ಧ ಹಂತ ಹಂತವಾಗಿ ಉಗ್ರ ಹೋರಾಟ ಕೈಗೊಳ್ಳುವುದಾಗಿ ಜೈಭೀಮ ಮಲ್ಲಪ್ಪ (ಹೇಮನೂರು ತಾಲೂಕು ಸಂಚಾಲಕರು) ಹಾಗೂ ದೇವರಾಜ ಎಚ್ಚರಿಕೆ ನೀಡಿದ್ದಾರೆ.






















