
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮಾ.09: ದಿ.ನ್ಯೂ ಇಂಡಿಯಾ ಅಸೂರೆನ್ಸ್ ಕಂಪನಿಯ ಹೆಸರಿನಲ್ಲಿ ಕಾರು, ಮೋಟಾರ್ ಸೈಕಲ್ ಹಾಗೂ ಜಾನುವಾರುಗಳ ನಕಲಿ ವಿಮಾ ಪಾಲಿಸಿಗಳನ್ನು ವಿತರಿಸಿ ಗ್ರಾಹಕರಿಂದ ಹಣ ಪಡೆದು. ಗ್ರಾಹಕರಿಗೆ ಹಾಗೂ ಕಂಪನಿಗೆ ಮೋಸ ಮಾಡಿತ್ತಿದ್ದ ಷಣ್ಮುಖ ಅಣ್ಣಿ ನನ್ನು ಇಲ್ಲಿನ ಗಾಂಧಿನಗರ ಪೊಲೀಸ್ ರು ಬಂಧಿಸಿದ್ದಾರೆ.
ಗಾಂಧಿನಗರ ಪೊಲೀಸ್ ಠಾಣೆಯ ಪಿಐ ರವಿಚಂದ್ರ ಡಿ.2. ವಿರುಪಾಕ್ಷಪ್ಪ ಪಿಎಸ್ಐ, ಸಿಬ್ಬಂದಿಯವರಾದ ಜಯರಾಜ್, ಮಹಾಲಿಂಗ, ಪಿ.ತಿಮ್ಮಪ್ಪ, ಮಂಜುನಾಥ, ವಿಜಯ್ ಭಾಸ್ಕರ್ ಒಳಗೊಂಡ ತಂಡ, ಪ್ರಕರಣದ ಆರೋಪಿ ವಿಜಯನಗರ ಜಿಲಗಲೆ ಹಡಗಲಿ ತಾಲೂಕಿನ ಮೋರಗೇರಿ ಗ್ರಾಮದ ಷಣ್ಮುಖ ಅಣ್ಣಿ (34) ಬಂಧಸಲಾಗಿದೆ. ಈತ ನಗರದ ಅಮೃತ ಲ್ಯಾಬ್ ಹಿಂದೆ ವಾಸ ಮಾಡುತ್ತಿದ್ದ.
ಕಳೆದ 10 ವರ್ಷಗಳಿಂದ ಆರೋಪಿ ಷಣ್ಮುಖ ದಿ.ನ್ಯೂ ಇಂಡಿಯಾ ಅಸೂರೆನ್ಸ್ ಕಂಪನಿಯ ಪಾಲಿಸಿ ಏಜೆಂಟ್ ಯಾಗಿ ಕೆಲಸ ಮಾಡುತ್ತಿದ್ದು, ಹಳೇ ಪಾಲಿಸಿಗಳನ್ನು ನವೀಕರಿಸುವ ಸಮಯದಲ್ಲಿ ಜನರಿಗೆ ನಕಲಿ ಪಾಲಿಸಿಗಳನ್ನು ವಿತರಣೆ ಮಾಡುತ್ತಿದ್ದ.

























