
ಸಂಜೆವಾಣಿ ನ್ಯೂಸ್
ಮೈಸೂರು: ಏ.14:- ಮೈಸೂರಿನ ವಿದ್ಯಾ ವಿಕಾಸ್ ಇಂಜಿನಿಯರಿಂಗ್ ಮತ್ತು ತಾಂತ್ರಿಕ ಮಹಾವಿದ್ಯಾಲಯ (ಗಿಗಿIಇಖಿ)ದಲ್ಲಿ ಸಾಂಪ್ರದಾಯಿಕ ಸಿವಿಲ್ ಎಂಜಿನಿಯರಿಂಗ್ನಿಂದ ಉದಯೋನ್ಮುಖ ಕ್ಷೇತ್ರವಾದ `ಸಿವಿಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್’ಗೆ ಆಗುತ್ತಿರುವ ಪರಿವರ್ತನೆ ಕುರಿತಾಗಿ ಮಹತ್ವದ ತಜ್ಞರ ಸಂವಾದ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು
ಮುಂಬರುವ ಶೈಕ್ಷಣಿಕ ವರ್ಷದಿಂದ 60 ವಿದ್ಯಾರ್ಥಿಗಳ ಪ್ರವೇಶಾತಿಯೊಂದಿಗೆ ಈ ನೂತನ ವಿಭಾಗವನ್ನು ಪ್ರಾರಂಭಿಸಲು ಸಂಸ್ಥೆ ಮುಂದಾಗಿರುವ ಹಿನ್ನೆಲೆಯಲ್ಲಿ, ಈ ಸಂವಾದ ಕಾರ್ಯಕ್ರಮವು ಆಯೋಜಿಸಲಾಗಿತ್ತು,
ಜಾಗತಿಕ ಅಗತ್ಯಗಳಿಗೆ ಅನುಗುಣವಾಗಿ ಎಂಜಿನಿಯರಿಂಗ್ ಶಿಕ್ಷಣವನ್ನು ಮರು ರೂಪಿಸುವ ಅವಶ್ಯಕತೆ ಬಗ್ಗೆ ತಜ್ಞರು ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು,
ಕ್ಷಿಪ್ರ ನಗರೀಕರಣ ಮತ್ತು ಸ್ಮಾರ್ಟ್ ಸಿಟಿಗಳ ಬೆಳವಣಿಗೆಯ ಹಿನ್ನಲೆಯಲ್ಲಿ ಸುಧಾರಿತ ಮೂಲಸೌಕರ್ಯ ವ್ಯವಸ್ಥೆಗಳ ಅಗತ್ಯತೆ ಹೆಚ್ಚುತ್ತಿರುವುದು ಚರ್ಚೆಯ ಪ್ರ ಸಾರಿಗೆ, ಉಪಯುಕ್ತತೆಗಳು ಹಾಗೂ ಡಿಜಿಟಲ್, ಮೂಲಸೌಕರ್ಯಗಳ ಸಮನ್ವಯದ ಮೂಲಕ ಸುಸ್ಥಿರ ನಗರಾಭಿವೃದ್ಧಿಯನ್ನು ಸಾಧಿಸುವಲ್ಲಿ ಸಿವಿಲ್ ಮತ್ತು ಇನ್ಫ್ರಾಸ್ಟ್ರಕ್ಚರ್ ಎಂಜಿನಿಯರಿಂಗ್ ನ ಪಾತ್ರವನ್ನು ತಜ್ಞರು ವಿವರಿಸಿದರು
ಇದಲ್ಲದೆ, ಪರಿಸರ ಸ್ನೇಹಿ ನಿರ್ಮಾಣ ವಿಧಾನಗಳು, ಹಸಿರು ಕಟ್ಟಡಗಳು, ಸಂಪನ್ಮೂಲಗಳ ಸಮರ್ಥ ಬಳಕೆ ಮತ್ತು ಹವಾಮಾನ ಸ್ಥಿತಿಸ್ಥಾಪಕತೆಗೆ ಸಂಬಂಧಿಸಿದ ಕ್ರಮಗಳ ಬಗ್ಗೆ ಚರ್ಚೆ ನಡೆದವು,
ಪ್ರವಾಹ ನಿಯಂತ್ರಣ, ಜಲಸಂಪನ್ಮೂಲ ನಿರ್ವಹಣೆ, ಸಾರಿಗೆ ವ್ಯವಸ್ಥೆಗಳು ಹಾಗೂ ವಿಪತ್ತು ನಿರೋಧಕ ವಿನ್ಯಾಸದ ಮಹತ್ವವನ್ನು ತಜ್ಞರು ವಿಶ್ಲೇಷಿಸಲಿದ್ದಾರೆ. ಬಿಲ್ಡಿಂಗ್ ಇನ್ಫರ್ಮೇಷನ್ ಮಾಡೆಲಿಂಗ್ (ಃIಒ), ಕೃತಕ ಬುದ್ಧಿಮತ್ತೆ (ಂI) ಮತ್ತು ಇಂಟರ್ನೆಟ್ ಆಫ್ ಥಿಂಗ್ಸ್ (Ioಖಿ) ಸೇರಿದಂತೆ ಆಧುನಿಕ ತಂತ್ರಜ್ಞಾನಗಳು ಮೂಲಸೌಕರ್ಯ ಯೋಜನೆ ಮತ್ತು ಅನುಷ್ಠಾನದಲ್ಲಿ ಹೇಗೆ ಪರಿವರ್ತನೆ ತರಿಸುತ್ತಿವೆ ಎಂಬುದರ ಕುರಿತೂ ಚರ್ಚೆ ನಡೆದವು,
ಈ ಸಂವಾದದಲ್ಲಿ ಕರ್ನಾಟಕ ಸರ್ಕಾರದ ನಗರ ಮತ್ತು ಗ್ರಾಮಾಂತರ ಯೋಜನಾ ಇಲಾಖೆಯ ಸಹಾಯಕ ಎಂಜಿನಿಯರ್ ಶಶಾಂಕ್, ಪ್ರೇಮ್ ಕನ್ಸ್ಟ್ರಕ್ಷನ್ಸ್ನ ಸ್ಥಾಪಕ ಮತ್ತು ಸಿಇಒ ಪ್ರೇಮ್ ಸಾಗರ್, ಪ್ರೆಸ್ಟೀಜ್ ಗ್ರೂಪ್ ಆಫ್ ಕನ್ಸ್ಟ್ರಕ್ಷನ್ಸ್ನ ಕ್ಯೂಎ ಮತ್ತು ಕ್ಯೂಸಿ ಎಂಜಿನಿಯರ್ ಸ್ನೇಹಾ ಜೆ. ನಾಯಕ್ ಹಾಗೂ ಸಹಾಯಕ ಪ್ರಾಧ್ಯಾಪಕ ರಾಜೇಂದ್ರ ಪ್ರಸಾದ್ ಎಚ್.ಎನ್. ಪಾಲ್ಗೊಂಡಿದ್ದರು.

























