
ಗುರುಮಠಕಲ್:ಮಾ.೨: ಸೋಮವಾರ ಮುಂಜಾನೆ ಸುಮಾರು ೭-೦೨ ನಿಮಿಷದಲ್ಲಿ ಮಹಾಯೋಗಿ ಮಹಾ ತಪಸ್ವಿ ಯಾನಗುಂದಿಯ ಮಾತ ಮಾಣಿಕೇಶ್ವರಿ ಅಮ್ಮನವರ ೬ ನೇಯ ವರ್ಷದ ಪುಣ್ಯ ಸ್ಮರಣೋತ್ಸವ ನಿಮಿತ್ಯವಾಗಿ, ಗುರುಮಠಕಲ್ ಶ್ರೀ ಮಠದ ಮೂಲಕವಾಗಿ ಯಾನಗುಂದಿಯ ಅಮ್ಮನ ಸನ್ನಿಧಿ ಯವರೆಗೆ ಗ್ರಾಮಗಳ ಎಲ್ಲಾ ಭಕ್ತಾಧಿಗಳುಕೂಡಿಕೊಂಡು ಭಕ್ತರು ಮಹಾ ಪಾದಯಾತ್ರೆ ಕಾರ್ಯಕ್ರಮ ಹಮ್ಮಿಕೊಂಡಿರುವುದು ಈ ನಮ್ಮ ಭಾಗದಲ್ಲಿ ಯಾನಗುಂದಿಯ ಮಾತ ಮಾಣಿಕೇಶ್ವರಿ ಅಮ್ಮನವರ ಮೇಲೆ ಭಕ್ತರು ಅಪಾರವಾಗಿರುವಂತಹ ಭಕ್ತಸಂಕುಲನವನ್ನು ನಾವು ಕಾಣುತ್ತೆವೆ. ಹಾಗಾಗಿ ಈ ಭಾಗದ ಭಕ್ತಾಧಿಗಳು ಯಾನಗುಂದಿಯ ಮಾತ ಮಾಣಿಕೇಶ್ವರಿ ಅಮ್ಮನವರ ಮೇಲೆ ಅಪಾರ ಭಕ್ತಿ, ಶ್ರದ್ಧೆ ವಂದಿರುತ್ತಾರೆ. ಆ ಹಿನ್ನಲೆಯಲ್ಲಿ ಅಮ್ಮನವರ ೬ ನೇಯ ವರ್ಷದ ಪುಣ್ಯ ಸ್ಮರಣೆ ನಿಮಿತ್ಯವಾಗಿ ಈ ಪಾದಯಾತ್ರೆ ಕಾರ್ಯಕ್ರಮಕ್ಕೆ ಇಂದು ಶ್ರೀ ಮಠದ ಸನ್ನಿಧಿಯಿಂದ ಚಾಲನೆ ನೀಡಲು ಸಂತೋಷವೆನಿಸುತ್ತದೆ ಎಂದು ಗುರುಮಠಕಲ್ ಖಾಸಮಠದ ಪರಂಪರ ಪೀಠಾಧಿಪತಿಗಳು ಪೂಜ್ಯರು ಶ್ರೀ ಮನ್ ನಿರಂಜನ ಪ್ರಣವ ಸ್ವರೂಪಿ ಶಾಂತವೀರ ಗುರು ಮುರುಘ ರಾಜೇಂದ್ರ ಮಹಾಸ್ವಾಮಿಗಳು ಪಾದಯಾತ್ರೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಭಕ್ತರನ್ನು ಉದ್ದೇಶಿಸಿ ಆಶೀರ್ವಾದಿಸಿ ನುಡಿಗಳನ್ನಾಡಿದರು. ಈ ವೇಳೆ ಗುರುಮಠಕಲ್ ಪಟ್ಟಣದ ಸುತ್ತಮುತ್ತಲಿನ ಗ್ರಾಮಗಳ ಸದ್ಭಕ್ತರು ಕಾರ್ಯಕ್ರಮದಲ್ಲಿ ಭಾಗವಹಿಸಿ ಭಕ್ತರು ಭಜನೆ, ಡೊಳ್ಳು ಕುಣಿತ, ಬಾಜ ಭಜಂತ್ರಿ ಹಾಗೂ ಸಂಗೀತಾ ವಾಹಿದಗಳಿಂದ ಭಕ್ತರು ಪಾದಯಾತ್ರೆಯ ಮೂಲಕ ಯಾನಗುಂದಿಗೆ ತೆರಳಿದರು.






















