
ಆನೇಕಲ್.ಮಾ.೧:ಗೋಪಸಂದ್ರ ಗೇಟ್ ಬಳಿಯಲ್ಲಿರುವ ಇತಿಹಾಸ ಪ್ರಸಿದ್ದ ದೇವಾಲಯವಾದ ಶ್ರೀ ವೀರ ಆಂಜನೇಯ ಸ್ವಾಮಿಯ ದೇವಾಲಯದ ಆವರಣದಲ್ಲಿ ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಪಾರ ಭಕ್ತರ ಸಮ್ಮುಖದಲ್ಲಿ ಶ್ರದ್ದಾಭಕ್ತಿಯಿಂದ ನೆರವೇರಿತು.
ಇನ್ನು ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಹಾಗೂ ೭ ನೇ ವರ್ಷದ ವಾರ್ಷಿಕೋತ್ಸವ ಸಮಾರಂಭ ಅಂಗವಾಗಿ ಶ್ರೀ ಸೀತಾ ರಾಮ ಕಲ್ಯಾಣೋತ್ಸವ, ಕೋಲಾಟ. ಮತ್ತು ಪೂರ್ಣ ಕುಂಭ ಕಳಸದೊಡನೆ, ಹಳ್ಳಿಕಾರ್ ಎತ್ತುಗಳ ಮೆರವಣಿಗೆಯೊಂದಿಗೆ ಶ್ರೀ ವೀರ ಆಂಜನೇಯ ಸ್ವಾಮಿಯ ಬ್ರಹ್ಮ ರಥೋತ್ಸವ ಶ್ರದ್ದಾಭಕ್ತಿಯಿಂದ ನೆರವೇರಿತು. ಜೊತೆಗೆ ಈ ಬಾರಿ ವಿಶೇಷವಾಗಿ ೭೦ಕೆಜಿ ವಿಬಾಗದ ರಾಜ್ಯ ಮಟ್ಟದ ಶ್ರೀ ವೀರಾಂಜನೇಯ ಸ್ವಾಮಿ ಕಬ್ಬಡ್ಡಿ ಉತ್ಸವವನ್ನು ಆಯೋಜಿಸಲಾಗಿತ್ತು.
ಆನೇಕಲ್ ಕ್ಷೇತ್ರದ ಶಾಸಕರಾದ ಬಿ.ಶಿವಣ್ಣರವರು, ಕೇಂದ್ರ ಮಾಜಿ ಸಚಿವರಾದ ಎ.ನಾರಾಯಣಸ್ವಾಮಿ. ಸಮಾಜ ಸೇವಕರಾದ ಹುಲ್ಲಳ್ಳಿ ಶ್ರೀನಿವಾಸ್. ರೂಪೇನ ಅಗ್ರಹಾರ ನರೇಂದ್ರ ಬಾಬು. ನ್ಯೂಟನ್ ರೆಡ್ಡಿ. ಸೇರಿದಂತೆ ಸ್ಥಳೀಯ ಮುಖಂಡರುಗಳು ಹಾಗೂ ಶ್ರೀ ವೀರ ಆಂಜನೇಯ ಸ್ವಾಮಿಯ ದೇವಾಲಯದ ಭಕ್ತ ಮಂಡಳಿಯವರು ಹಾಗೂ ಭಕ್ತರು ಮತ್ತು ಗ್ರಾಮಸ್ಥರು ಹಾಜರಿದ್ದರು.
























