Home ಜಿಲ್ಲೆ ಕಲಬುರಗಿ 5.42 ಲಕ್ಷ ರೂ.ಮೌಲ್ಯದ 5.ಕೆ.ಜಿ.,425 ಗ್ರಾಂ.ಹಸಿ ಗಾಂಜಾ ಜಪ್ತಿ

5.42 ಲಕ್ಷ ರೂ.ಮೌಲ್ಯದ 5.ಕೆ.ಜಿ.,425 ಗ್ರಾಂ.ಹಸಿ ಗಾಂಜಾ ಜಪ್ತಿ

ಕಲಬುರಗಿ,ಜೂ.24-ನಗರದ ಇಸ್ಲಾಮಾಬಾದ ಕಾಲೋನಿಯ ಮನೆಯೊಂದರ ಕಂಪೌಂಡ್ ಒಳಗಡೆ ವ್ಯಕ್ತಿಯೊಬ್ಬ ಅಕ್ರಮವಾಗಿ ಗಾಂಜಾ ಗಿಡಗಳನ್ನು ಬೆಳೆದು ಸಂಗ್ರಹಿಸಿ ಮಾರಾಟ ಮಾಡುತ್ತಿದ್ದಾನೆ ಎಂಬ ಮಾಹಿತಿ ಮೇಲೆ ಸಿಸಿಬಿ ಘಟಕದ ಎಸಿಪಿ ಜೇಮ್ಸ್ ಮಿನೇಜಸ್, ಸಿಬ್ಬಂದಿಗಳಾದ ರಾಜಕುಮಾರ, ಅಶೋಕ, ಪ್ರದೀಪ್, ಶಿವಲಿಂಗ, ಪ್ರೀತಮ್, ನಾಗರಾಜ, ಸುನೀಲಕುಮಾರ ಅವರು ದಾಳಿ ನಡೆಸಿ ರಾಜನಖಾನ್ ತಂದೆ ಮನಸೂರಖಾನ್ (58) ಎಂಬಾತನನ್ನು ಬಂಧಿಸಿ 5,42,500 ರೂ.ಮೌಲ್ಯದ 5 ಕೆ.ಜಿ.,425 ಗ್ರಾಮ ಹಸಿ ಗಾಂಜಾ, 1300 ರೂ.ನಗದು, 2 ಸಾವಿರ ರೂ.ಮೌಲ್ಯದ ಮೊಬೈಲ್ ಜಪ್ತಿ ಮಾಡಿದ್ದಾರೆ.
ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.