
ಬಾದಾಮಿ,ಅ೩೧: ತಾಲೂಕಿನ ಕೆಂದೂರ ಗ್ರಾಮದಲ್ಲಿ ೪ ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾದ ಘಟನೆ ಶುಕ್ರವಾರ ಸಂಜೆ ಜರುಗಿದೆ.
ಕೆಂದೂರ ಗ್ರಾಮದ ರೈತ ಮಾಗುಂಡಪ್ಪ ಗೊಡೆಮ್ಮನವರ ಇವರ ಎರಡು ಎಕರೆ ಮತ್ತು ಮಂಜುನಾಥ ಗುಗಲದಿನ್ನಿ ಇವರಿಗೆ ಸೇರಿದ ಎರಡು ಎಕರೆ ಸೇರಿದಂತೆ ೪ ಎಕರೆ ಕಬ್ಬು ಬೆಳೆ ಬೆಂಕಿಗಾಹುತಿಯಾಗಿದೆ. ಸ್ಥಳಕ್ಕೆ ಅಗ್ನಿಶಾಮಕ ಇಲಾಖೆಯ ಭೇಟಿ ನೀಡಿ, ಅಗ್ನಿ ನಂದಿಸಿದರು.






















