
ಮುನವಳ್ಳಿ,ಮೇ.೧೪: ಪಟ್ಟಣದ ಶ್ರೀ ಮುರುಘರಾಜೇಂದ್ರ ಯೋಗವಿದ್ಯಾಕೇಂದ್ರ ಸಂಚಾಲಿತ ಶ್ರೀ ಚನ್ನಬಸವ ಮಹಾಸ್ವಾಮಿಜಿ ಪ್ರಥಮ ದರ್ಜೆ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ವಾರ್ಷಿಕ ಕ್ರೀಡಾಕೂಟ ಉದ್ಘಾಟನೆ ಜರುಗಿತು.
ಪ್ರಮೋದ ಕಾಮಣ್ಣವರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕ್ರೀಡೆಗಳು ಸಹಕಾರಿಯಾಗುತ್ತವೆ ದೈಹಿಕ ಹಾಗೂ ಮಾನಸಿಕ ಸದೃಢತೆಗಾಗಿ ವಿದ್ಯಾರ್ಥಿಗಳು ಕ್ರೀಡಾಕೂಟಗಳಲ್ಲಿ ಪಾಲ್ಗೊಂಡು ದೇಶಕ್ಕೆ ತಮ್ಮದೇ ಆದ ಕೊಡುಗೆ ನೀಡಬೇಕು. ಉತ್ತಮವಾದ ಶರೀರ ಹಾಗೂ ಮನಸ್ಸನ್ನು ಹೊಂದಲು ಕ್ರಿಯಾಶೀಲರಾಗಿ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳು ಪಾಲ್ಗೊಳ್ಳಬೇಕು ಸರಕಾರಿ ನೇಮಕಾತಿಗಳಲ್ಲೂ ಕ್ರೀಡಾಪಟುಗಳಿಗೆ ಮೀಸಲಾತಿ ಇದ್ದು ಅದರ ಸದುಪಯೋಗ ಪಡೆಯಲು ಕ್ರೀಡೆಗಳ ಎಲ್ಲ ವಿಭಾಗ ಜಿಲ್ಲೆ, ರಾಜ್ಯ ಹಾಗೂ ರಾಷ್ಟçಮಟ್ಟದಲ್ಲಿ ವಿಜೇತರಾಗಬೇಕು ಎಂದರು.
ಅರುಣಗೌಡ ಪಾಟೀಲ, ಮಲ್ಲಿಕಾರ್ಜುನ ಜಮಖಂಡಿ, ಸಂಜು ಕಾಮಣ್ಣವರ, ಶಂಕರ ಗಯ್ಯಾಳಿ, ಐ,ಜಿ.ಸಂಕಣ್ಣವರ, ಗಂಗಾಧರ ಗೊರಾಬಾಳ, ಕೆ.ಬಿ.ನಲವಡೆ, ಎಂ.ಎಚ್.ಪಾಟೀಲ, ಬಿ.ಎಂ.ಅಪ್ಪೋಜಿ, ಪಿ.ಎಂ.ಕದಮ, ಡಿ.ಎಂ.ಗದಗಿನ, ಎಂ.ಗಿರೀಶ, ಮಂಜುಳಾ ಭಾಂಡೇಕರ, ಗಾಯತ್ರಿ ಹಿರೇಮಠ, ಐ,ಕೆ.ಮಠಪತಿ, ವಿದ್ಯಾರ್ಥಿಗಳು ಇತರರು ಉಪಸ್ಥಿತರಿದ್ದರು.























