
ಚೆನ್ನೈ,ನ. 6- ತಮಿಳುನಾಡಿನ ಮೈಲಾಡುತುರೈ ಜಿಲ್ಲೆಯ ಸಿರ್ಕಾಝಿ ಬಳಿಯ ಪೆರಂಬೂರ್ ಗ್ರಾಮದಲ್ಲಿ ಜನರು ಕಳೆದೆರಡು ಶತಮಾನಗಳಿಂದ ಅಂದರೆ ಸುಮಾರು 100ಕ್ಕೂ ಹೆಚ್ಚು ವರ್ಷಗಳಿಂದ ದೀಪಾವಳಿ ಹಬ್ಬದ ಸಂದರ್ಭದಲ್ಲಿ ಪಟಾಕಿಗಳನ್ನು ಸಿಡಿಸದೆ ವಿಶಿಷ್ಟ ರೀತಿಯಲ್ಲಿ ಹಬ್ಬ ಆಚರಿಸುತ್ತಿದ್ದಾರೆ.
ಗ್ರಾಮದಲ್ಲಿರುವ ನೂರಾರು ಬಾವಲಿಗಳಿಗೆ ಪಟಾಕಿಯ ಭೀಕರ ಶಬ್ದ ಮತ್ತು ಹೊಗೆಯಿಂದ ತೊಂದರೆಯಾಗಬಾರದು ಹಾಗೂ ಅವುಗಳ ಜೀವ ರಕ್ಷಣೆ ಮಾಡಬೇಕು ಎಂಬ ಉದ್ದೇಶದಿಂದ ಗ್ರಾಮಸ್ಥರು ಈ ನಿರ್ಧಾರ ಕೈಗೊಂಡಿದ್ದಾರೆ. ಬಾವಲಿಗಳು ಶಬ್ದ ತರಂಗಗಳ ಮೂಲಕವೇ ಸಂಚರಿಸುವುದರಿಂದ, ಪಟಾಕಿಯ ಸದ್ದು ಅವುಗಳ ಶ್ರವಣ ಶಕ್ತಿಗೆ ತೀವ್ರ ಹಾನಿ ಉಂಟುಮಾಡುತ್ತದೆ. ಹೀಗಾಗಿ ಗ್ರಾಮಸ್ಥರು ಪಟಾಕಿಗಳ ಬದಲಾಗಿ ದೀಪಗಳನ್ನು ಬೆಳಗಿಸಿ ಶಾಂತಿಯುತವಾಗಿ ದೀಪಾವಳಿಯನ್ನು ಆಚರಿಸಿಕೊಂಡು ಬಂದಿದ್ದಾರೆ. ಪ್ರಕೃತಿ ಮತ್ತು ಪ್ರಾಣಿ ಪ್ರೇಮಕ್ಕೆ ಈ ಗ್ರಾಮ ಮಾದರಿಯಾಗಿದೆ.





















