
ಬೆಂಗಳೂರು, ಮೇ ೧೧- ರಾಜ್ಯ ಸರ್ಕಾರಿ ನೌಕರರಿಗೆ ರಾಜ್ಯ ಸರ್ಕಾರ ತುಟ್ಟಿಭತ್ಯೆಯನ್ನು ಶೇ. ೧.೦೫ ರಷ್ಟು ಹೆಚ್ಚಿಸಿ ಆದೇಶ ಹೊರಡಿಸಿದೆ.
ರಾಜ್ಯ ಸರ್ಕಾರದ ನೌಕರರಿಗೆ ಜನವರಿ ೨೦೨೬ ರಿಂದ ಅನ್ವಯಯವಾಗುವಂತೆ ತುಟ್ಟಿಭತ್ಯೆ ದರಗಳನ್ನು ಪರಿಷ್ಕರಿಸಲಾಗಿದ್ದು, ಮೂಲ ವೇತನದ ಶೇ. ೧೪.೨೫ ರಿಂದ ಶೇ. ೧೫.೭೫ಕ್ಕೆ ಪರಿಷ್ಕರಿಸಿ ಆದೇಶ ಹೊರಡಿಸಲಾಗಿದೆ.
ತುಟ್ಟಿಭತ್ಯೆ ಏರಿಕೆಯು ನಿವೃತ್ತಿ ಹೊಂದಿರುವ ನೌಕರರಿಗೂ, ಕುಟುಂಬ ವೇತನ ನಿವೃತ್ತಿ ಪಡೆಯುತ್ತಿರುವವರಿಗೂ ಅನ್ವಯಯವಾಗುತ್ತದೆ.


























