
(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಏ.14: ಇಂದು ನಗರದ ಮುನಿಷಿಪಲ್ ಹೈಸ್ಕೂಲ್ ಮೈದಾನದಲ್ಲಿ ಹಮ್ಮಿಕೊಂಡಿದ್ದ ಅಂಬೇಡ್ಕರ್ ಜಯಂತಿ ಕಾರ್ಯಕ್ರಮದ ಉದ್ಘಾಟನೆ ನಗರ ಶಾಸಕ ಭರತ್ ರೆಡ್ಡಿಯಿಂದ ನಡೆಯಿತು.
ಸಮಾರಂಭದಲ್ಲಿ ಲಿಡ್ಕರ್ ಅಧ್ಯಕ್ಷ ಮುಂಡ್ರಿಗಿ ನಾಗರಾಜ್ ಮಾತನಾಡಿ, ದೇಶದಲ್ಲಿ ನಾಲ್ಕು ವರ್ಗದವರಿಗೆ ಮಾತ್ರ ಓಟು ಮಾಡುವ ಹಕ್ಕು ಇತ್ತು. ಅದನ್ನು ಸರ್ವ ಸಮುದಾಯದ ಜನತೆಗೆ ಓಟಿನ ಹಕ್ಕು ದೊರೆಯುವಂತೆ ಮಾಡಿದವರು ಅಂಬೇಡ್ಕರ್ ಎಂದರು. ನಾವೆಲ್ಲ ಇಂದು ಆರ್ಥಿಕವಾಗಿ ಸ್ವತಂತ್ರರಾಗಿ ಬದಕಲು ಅಂಬೇಡ್ಕರ್ ಅವರೇ ಕಾರಣ ಎಂದರು.
ಮೇಯರ್ ಗಾದೆಪ್ಪ ಮಾತನಾಡಿ, ನಮ್ಮೆಲ್ಲರಿಗೂ ಇಂದು ಪ್ರಜಾಪಭುತ್ವದ ಸ್ವಾತಂತ್ರ್ಯ ದೊರೆಯಲು ಕಾರಣ ಅಂಬೇಡ್ಕರ್ ಎಂದರು.
ಸಂವಿಧಾನದ ಪೂರ್ವ ಪೀಠಿಕೆಯನ್ನು ಡಿ.ಸಿ.ನಾಗೇಂದ್ರ ಪ್ರಸಾದ್ ಭೋಧಿಸಿದರು. ಪ್ರೊ.ಚಿನ್ನಸ್ವಾಮಿ ಸೋಸಲೆ ಇವರಿಂದ ಅಂಬೇಡ್ಕರ್ ಕುರಿತು ವಿಶೇಷ ಉಪನ್ಯಾಸ ನೀಡಿ. ನಾವುಗಳು ಇಂದಿಗೂ ಸಂವಿಧಾನ ಹೇಳಿದೆ ಎಂಬುದರ ಅರಿವು ಇಲ್ಲ. ಅದಕ್ಕಾಗಿ ಇನ್ನು ಸಮ ಸಮಾಜ ಕಾಣಲು ಸಾಧ್ಯವಾಗಿಲ್ಲ. ಮೊದಲು ನಾವು ಸಂವಿಧಾನದ ಬಗ್ಗೆ ನಾವೆಲ್ಲ ಅರಿತುಕೊಳ್ಳಬೇಕು. ಆ ಕೆಲಸ ದಲಿತ ಸಮೂಹದಿಂದ ಆಗಬೇಕು ಎಂದರು.
ಸಮಾರಂಭದಲ್ಲಿ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯಎ.ಮಾನಯ್ಯ, ಪಾಲಿಕೆ ಸದಸ್ಯೆ ಎಂ.ರಾಜೇಶ್ ಸುಬ್ಬರಾಯ್ಡು, ದಲಿತ ಮುಖಂಡರುಗಳಾದ ಎನ್.ಡಿ.ವೆಂಕಮ್ಮ, ನರಸಪ್ಪ ಛಲವಾದಿ, ಹೆಚ್.ಸಿದ್ದೇಶ್, ಸಿ.ಸೋಮಶೇಖರ್, ಗಂಗಾಧರ, ಮಾರೆಣ್ಣ, ತಿಪ್ಪೆಸ್ವಾಮಿ, ಡಾ.ಪಿ.ಎಸ್.ಗಾದಿಲಿಂಗನಗೌಡ, ರಾಮುನಾಯ್ಕ, ಎರಕುಲಸ್ವಾಮಿ, ಅರುಣ್ ಕುಮಾರ್, ಡಾ.ಸುಮನ್ ಡಿ.ಪನ್ನೇಕರ್, ಜಿಪಂ ಸಿಈಓ ಮಹಮ್ಮದ್ ಹ್ಯಾರೀಸ್ ಸುಮೇರ್, ಎಡಿಸಿ ಮಹಮ್ಮದ್ ಝುಬೇರ, ಪಾಲಿಕೆ ಆಯುಕ್ತ ಪಿ.ಎಸ್.ಮಂಜುನಾಥ ಮೊದಲಾದವರು ಇದ್ದರು.
ಈ ವೇಳೆ ಫಲಾನುಭವಿಗಳಿಗೆ ಸರ್ಕಾರದ ಯೋಜನೆಗಳ ಚೆಕ್ , ಸಾಮಾಗ್ರಿಗಳನ್ನು ವಿತರಿಸಲಾಯ್ತು. ಡಿ.ಕಗ್ಗಲ್ಲು ದೊಡ್ಡ ಬಸವ ಗವಾಯಿ ತಂಡದಿಂದ ಪ್ರಾರ್ಥನೆ, ಸಮಾಜ ಕಲ್ಯಾಣ ಅಧಿಕಾರಿಯಿಂದ ಸ್ವಾಗತ ನಡೆಯಿತು.























