Home ಜಿಲ್ಲೆ ಡಾ||ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಣೆ

ಡಾ||ಬಿ.ಆರ್.ಅಂಬೇಡ್ಕರ್ ರವರ ಜಯಂತಿ ಆಚರಣೆ

ಸಂಜೆವಾಣಿ ವಾರ್ತೆ

ಬಳ್ಳಾರಿ, ಏ.14: ಇಂದು ಸಂಘದ ಕಛೇರಿಯಲ್ಲಿ ಅಖಿಲ ಕರ್ನಾಟಕ ಕುಳುವ ಮಹಾಸಂಘ (ರಿ ) ಬೆಂಗಳೂರು, ಬಳ್ಳಾರಿ ಜಿಲ್ಲಾ ಘಟಕ  ವತಿಯಿಂದ  ಡಾ ಬಿ ಆರ್ ಅಂಬೇಡ್ಕರ ರವರ 135ನೇ ಜಯಂತಿಯನ್ನು  ಆಚರಿಸಲಾಯಿತು. ಈ ಜಯಂತೋತ್ಸವದಲ್ಲಿ  ರಾಜ್ಯ ಖಜಾಂಚಿಗಳಾದ ರಮಣಪ್ಪ ಭಜಂತ್ರಿ ಜಿಲ್ಲಾ ಸಲಹೆ ಸಮಿತಿ ಸದಸ್ಯರಾದ ಹೆಚ್ ಕೆ ಹೆಚ್ ಹನುಮಂತ, ಸಂತೋಷ ಶಾಂತವೀರಪ್ಪ, ಶಿವಪ್ಪ, ಜಿಲ್ಲಾ ಘಟಕದ ಅಧ್ಯಕ್ಷರಾದ ಕೆ ಮಲ್ಲೇಶ ಕಾರ್ಯದರ್ಶಿ ಕೆ ರಂಗಸ್ವಾಮಿ ಪದಾಧಿಕಾರಿಗಳು, ನಗರ ಘಟಕದ ಪದಾಧಿಕಾರಿಗಳು, ಬಳ್ಳಾರಿ ಗ್ರಾಮಾಂತರ ಘಟಕದ ಪದಾಧಿಕಾರಿಗಳು  ಬಳ್ಳಾರಿ ಜಿಲ್ಲೆಯ ಸಮಸ್ತ ಮುಖಂಡರು ಎಲ್ಲರೂ ಭಾಗವಹಿಸಿ ಕಾರ್ಯಕ್ರಮ ಯಶ್ವಸಿಗಳಿಸದರು.