Home Uncategorized ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪ್ರವೇಶಾತಿ ಕರಪತ್ರ ವಿತರಣೆ

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿಂದ ಪ್ರವೇಶಾತಿ ಕರಪತ್ರ ವಿತರಣೆ

ಸಂಜೆವಾಣಿ ವಾರ್ತೆ

ಸಿರುಗುಪ್ಪ, ಮಾ.04: ನಗರದ ಟಿ.ಎಸ್.ಹೆಚ್.ಎಂ.ಎಸ್ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವತಿಯಿದ ಕಾಲೇಜಿನ ಪ್ರವೇಶಾತಿಯನ್ನು ಹೆಚ್ಚಿಸಲು ಸಿರುಗುಪ್ಪ ನಗರದಲ್ಲಿರುವ ದ್ವಿತೀಯ ಪಿ.ಯು.ಸಿ ಪರೀಕ್ಷಾ ಕೇಂದ್ರಗಳಾದ ಸರ್ಕಾರಿ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರ, ಎಸ್.ಇ.ಎಸ್ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರ ಮತ್ತು ವಿ.ಕೆ.ಜೆ ಪದವಿ ಪೂರ್ವ ಕಾಲೇಜು ಪರೀಕ್ಷಾ ಕೇಂದ್ರಗಳಿಗೆ ಕಾಲೇಜಿನ ಎಲ್ಲಾ ಪ್ರಾಧ್ಯಾಪಕರು ವಿದ್ಯಾರ್ಥಿಗಳಿಗೆ ಪ್ರವೇಶಾತಿ ಕರಪತ್ರಗಳನ್ನು ವಿತರಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ದೊರೆಯುವ ಉತ್ತಮ ಗುಣಮಟ್ಟದ ಶಿಕ್ಷಣ, ಸಹಪಠ್ಯ ಹಾಗೂ ಸೌಲಭ್ಯಗಳ ಕುರಿತು ಮನವರಿಕೆ ಮಾಡಲಾಯಿತು. ಕಾಲೇಜಿನಲ್ಲಿ ಪ್ರವೇಶಾತಿ ಪಡೆದು ಉತ್ತಮ ಭವಿಷ್ಯವನ್ನು ನಿರ್ಮಿಸಿಕೊಳ್ಳುವಂತೆ ವಿದ್ಯಾರ್ಥಿಗಳಿಗೆ ಪ್ರಾಂಶುಪಾಲ ಜಿನ್ನಿನ ಕೊಟ್ರಪ್ಪ ಕರೆ ನೀಡಿದರು.

ಪ್ರಾಧ್ಯಾಪಕ ಡಾ.ಕೆ.ಎಂ ಚಂದ್ರಕಾಂತ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ನಮ್ಮ ಸರ್ಕಾರಿ ಕಾಲೇಜಿನಲ್ಲಿ ಗುಣಮಟ್ಟದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಉನ್ನತ ವ್ಯಾಸಂಗಕ್ಕೆ ಅನುಕೂಲಕರವಾದ ವಾತಾವರಣ ವಿರುವ ನಗರದ ಕೇಂದ್ರ ಸರ್ಕಾರದ ನ್ಯಾಕ್ ಬಿ ಮಾನ್ಯತೆ ಪಡೆದ ಏಕೈಕ ಸರ್ಕಾರಿ ಕಾಲೇಜು ಆಗಿದ್ದು. ಇಲ್ಲಿ ಉತ್ತಮ ಅನುಭವ ಹೊಂದಿದ ನುರಿತ ಉಪನ್ಯಾಸಕರಿಂದ ಬೋಧನೆಯನ್ನು ಮಾಡುತ್ತಿದ್ದು. ಬಿ.ಎ, ಬಿ.ಕಾಂ, ಬಿ.ಎಸ್.ಇ, ಕೋರ್ಸ್ ಗಳು ಇದ್ದು ಇವುಗಳ ಸದುಪಯೋಗವನ್ನು ಪಡೆದುಕೊಳ್ಳಬೇಕೇಂದು ಪಿ.ಯು ದ್ವೀತಿಯ ವರ್ಷದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ತಿಳಿಸಿದರು.

ಪ್ರಾಧ್ಯಾಪಕರಾದ ಡಾ.ಅಪರ್ಣಾ ಎಸ್.ಆರ್, ಕೃಷ್ಣಪ್ಪ, ಯಮನೂರಪ್ಪ, ಡಾ.ಶಾಲಿನಿ, ಬಕಡೆ ಪಂಪಾಪತಿ, ಉಪನ್ಯಾಸಕರಾದ ರುದ್ರಪ್ಪ, ಚಂದ್ರಮ್ಮ, ಅಮರೇಶ, ಮಮತಾ, ಸುರೇಶ, ರೇಣುಕಾ, ರಾಮಣಪೂಜಾರಿ, ಪವನ್ ಕುಮಾರ್, ಕೆ.ವಸಂತ, ದೇವರಾಜ, ರಾಜೇಂದ್ರ ಇದ್ದರು.