
ಸಂಜೆವಾಣಿ ವಾರ್ತೆ
ಪಿರಿಯಾಪಟ್ಟಣ:ಆ.11:- ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಪತ್ತಿನ ಸಹಕಾರ ಸಂಘದ ನೂತನ ಅಧ್ಯಕ್ಷರಾಗಿ ಎಂ.ಬಿ.ಚಂದ್ರ ಅವಿರೋಧ ಆಯ್ಕೆಯಾದರು.
ಇದೇ ವೇಳೆ ಉಪಾಧ್ಯಕ್ಷರಾಗಿ ಎಸ್.ಹರೀಶ್ ಖಜಾಂಚಿಯಾಗಿ ದಿವ್ಯ ಆರ್ ಸುರೇಶ್ ಆಯ್ಕೆಯಾದರು, ಈ ಹಿಂದೆ ಅಧ್ಯಕ್ಷರಾಗಿದ್ದ ಬಿ.ಆರ್ ರವಿಕುಮಾರ್, ಉಪಾಧ್ಯಕ್ಷರಾಗಿದ್ದ ಬಿ.ವಿ ಜಯಂತಿ, ಖಜಾಂಚಿಯಾಗಿದ್ದ ರುದ್ರಪ್ಪ ಅವರ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಅಧ್ಯಕ್ಷ ಸ್ಥಾನಕ್ಕೆ ಎಂ.ಬಿ ಚಂದ್ರ ಹೊರತುಪಡಿಸಿ ಮತ್ಯಾರು ನಾಮಪತ್ರ ಸಲ್ಲಿಸದ ಹಿನ್ನೆಲೆ ಚುನಾವಣಾಧಿಕಾರಿ ಹಿತೇಂದ್ರ ಅವಿರೋಧ ಆಯ್ಕೆ ಘೋಷಿಸಿದರು.
ನೂತನ ಅಧ್ಯಕ್ಷರಾದ ಎಂ.ಬಿ ಚಂದ್ರ ಅವರು ಮಾತನಾಡಿ ಸಂಘಕ್ಕೆ ಹಲವು ವರ್ಷಗಳ ಇತಿಹಾಸವಿದ್ದು ಸಮಾನ ಮನಸ್ಕರ ತಂಡ ನಮ್ಮನ್ನು ಬೆಂಬಲಿಸಿ ಎಲ್ಲಾ ವರ್ಗಗಳಿಗೂ ಅಧಿಕಾರ ನೀಡಬೇಕೆಂಬ ನಿಟ್ಟಿನಲ್ಲಿ ಅವಿರೋಧ ಆಯ್ಕೆ ಮಾಡಿದ್ದಾರೆ ಅವರ ನಂಬಿಕೆಗೆ ತಕ್ಕಂತೆ ಪ್ರಾಮಾಣಿಕ ಕರ್ತವ್ಯ ನಿರ್ವಹಿಸಿ ಪ್ರತಿಯೊಬ್ಬ ಶಿಕ್ಷಕರ ಹಿತ ಕಾಯುವ ಕೆಲಸ ಮಾಡಿ ಅಭಿವೃದ್ಧಿಗೆ ಶ್ರಮಿಸುತ್ತೇನೆ ಎಂದರು.
ಫಲಿತಾಂಶ ಬಳಿಕ ನೂತನ ಪದಾಧಿಕಾರಿಗಳನ್ನು ಶಿಕ್ಷಕರು ಸನ್ಮಾನಿಸಿ ಶುಭ ಕೋರಿದರು, ಈ ಸಂದರ್ಭ ಸಂಘದ ಮಾಜಿ ಅಧ್ಯಕ್ಷರಾದ ಹೆಚ್.ಕೆ ಶಿವಮೂರ್ತಿ, ಶ್ರೀಧರ್, ನಟರಾಜ ನಾಯಕ್, ಎಸ್.ಆರ್ ಅನಂತ್, ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಮಾಜಿ ಅಧ್ಯಕ್ಷ ಕೆ.ಎಸ್ ಮಹದೇವಪ್ಪ, ಗಣೇಶ್ ಕುಮಾರ್, ಸಂಘದ ನಿರ್ದೇಶಕರಾದ ಬಿ.ಎಸ್ ಮಹದೇವ್, ಬಿ.ಎಸ್ ಅಶೋಕ್, ಗಾಯತ್ರಿ, ಜಿ.ವೀಣಾ, ಎಂ.ಟಿ ಮಹದೇವ್, ಶಿಕ್ಷಕರರಾದ ನಾಗೇಂದ್ರ ಆರಾಧ್ಯ, ಮಲ್ಲಿಕಾರ್ಜುನ್, ಸುರೇಶ, ವಿನುತಾ, ಬಸವೇಗೌಡ, ಸಾಕಮ್ಮ, ಜಗದೀಶ್, ಪ್ರಕಾಶ್, ದೇವರಾಜು, ಪ್ರಭಾಕರ್, ರವೀಂದ್ರ, ಪುಟ್ಟರಾಜು, ಕಾರ್ಯದರ್ಶಿ ರವಿಕುಮಾರ್, ಸಿಬ್ಬಂದಿ ಆನಂದ್ ಮತ್ತಿತರಿದ್ದರು.































