
ಮಂಗಳೂರು- ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ಸಂದರ್ಭದಲ್ಲಿ ನವೆಂಬರ್ ೭ ರಿಂದ ೧೦ ಮತ್ತು ನವೆಂಬರ್ ೨೦ ಹಾಗೂ ೨೧ ರವರೆಗೆ ಒಟ್ಟು ೬ ದಿನಗಳು ಮಾತ್ರ) ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯಲ್ಲಿ ಸುಡುಮದ್ದು ಮಾರಾಟ ಮಾಡಲು ಅಪೇಕ್ಷಿಸುವವರು ಅರ್ಜಿ ನಮೂನೆ ಐಇ-೫ ರಲ್ಲಿ ತಾತ್ಕಾಲಿಕ ಸುಡುಮದ್ದು ಪರವಾನಿಗೆಯನ್ನು ಪಡೆಯಲು ಸಾಕಷ್ಟು ಮುಂಚಿತವಾಗಿ ಂಇ-೫ ನಮೂನೆಯಲ್ಲಿ ಅರ್ಜಿ ಸಲ್ಲಿಸಿ ಪರವಾನಿಗೆಯನ್ನು ಪಡೆಯಬೇಕಿದೆ. ಆದುದರಿಂದ ಅರ್ಜಿ ಸಲ್ಲಿಸಲು ಸಂಬಂಧಿಸಿದಂತೆ ಈ ಕೆಳಕಂಡ ಅಂಶಗಳನ್ನು ಗಮನಿಸುವಂತೆ ಸೂಚಿಸಲಾಗಿದೆ.
ಅನುಸರಿಸಬೇಕಾದ ಮಾರ್ಗಸೂಚಿಗಳು
ಸ್ಫೋಟಕ ಕಾಯಿದೆ ಮತ್ತು ನಿಯಮ ೨೦೦೮ ರ ಶೆಡ್ಯೂಲ್-Iಗಿ ರಡಿಯಲ್ಲಿ ಮಂಗಳೂರು ಪೊಲೀಸ್ ಕಮೀಷನರೇಟ್ ವ್ಯಾಪ್ತಿಯ ತೆರೆದ ಪ್ರದೇಶಗಳಲ್ಲಿ (ಮಹಾನಗರ ಪಾಲಿಕೆ/ಪಂಚಾಯತ್ ರವರು ನಿಗದಿಪಡಿಸಿರುವ ಸರ್ಕಾರಿ ಸ್ಥಳಗಳಲ್ಲಿ ಮಾತ್ರ) ದೀಪಾವಳಿ ಮತ್ತು ತುಳಸಿ ಪೂಜೆ ಹಬ್ಬಗಳ ನಿಮಿತ್ತ ಸುಡುಮದ್ದು ಮಾರಾಟದ ತಾತ್ಕಾಲಿಕ ಪರವಾನಿಗೆ ನೀಡುವ ಬಗ್ಗೆ ಅರ್ಜಿಗಳನ್ನು (ಈಔಖಒ ಂಇ-೫) ಇಲಾಖಾ ಅಧಿಕೃತ ವೆಬ್ಸೈಟ್ hಣಣಠಿs//mಚಿಟಿgಚಿಟoಡಿeಛಿiಣಥಿಠಿoಟiಛಿe.ಞಚಿಡಿಟಿಚಿಣಚಿಞಚಿ.gov.iಟಿ ನಿಂದ ಪಡೆದು ಅಕ್ಟೋಬರ್ ೩೦ ರೊಳಗಾಗಿ ಕಛೇರಿಗೆ ಸಲ್ಲಿಸಬೇಕು. ನಂತರದಲ್ಲಿ ಸ್ವೀಕೃತಗೊಳ್ಳುವ ಅರ್ಜಿಗಳನ್ನು ಮಾನ್ಯ ಮಾಡಲಾಗುವುದಿಲ್ಲ.
ಅರ್ಜಿಯನ್ನು ಸಲ್ಲಿಸುವಾಗ ಸರ್ಕಾರವು ನಿಗದಿಪಡಿಸಿರುವ ಶುಲ್ಕ ರೂ. ೩೦೦ ನ್ನು ನೇರವಾಗಿ ಞhಚಿರಿಚಿಟಿe-೨ Poಡಿಣಚಿಟ ಮುಖಾಂತರ ಚಲನ್ ಮೂಲಕ ಲೆಕ್ಕ ಶೀರ್ಷಿಕೆ ೦೦೫೫-೦೦-೮೦೦-೦-೦೧-೦೦೦ ಐeಚಿve Sಚಿಟಚಿಡಿಥಿ & ಅoಟಿಣಡಿibuಣioಟಿ ಸರ್ಕಾರಕ್ಕೆ ಪಾವತಿಸಬೇಕು. ಹಾಗೂ ಪರವಾನಿಗೆ ಪಡೆಯುವ ಸಂದರ್ಭದಲ್ಲಿ ರೂ.೬೦೦ ಪರವಾನಿಗೆ ಶುಲ್ಕವಾಗಿ ಪಾವತಿಸಬೇಕು.
ಅರ್ಜಿದಾರರು ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ (ಮಹಾನಗರ ಪಾಲಿಕೆ/ಪಂಚಾಯತ್) ಹಾಗೂ ವ್ಯಾಪ್ತಿಯ ಪೊಲೀಸ್ ಠಾಣೆರವರಿಂದ ನೇರವಾಗಿ ನಿರಾಕ್ಷೇಪಣಾ ಪತ್ರ (ಎನ್.ಒ.ಸಿ) ವನ್ನು ಪಡೆದು ಅರ್ಜಿಯೊಂದಿಗೆ ಲಗತ್ತಿಸಬೇಕು. ಈ ರೀತಿ ಪಡೆದ ನಿರಾಕ್ಷೇಪಣಾ ಪತ್ರಗಳನ್ನು ಪಡೆದು ಕಛೇರಿಗೆ ಅರ್ಜಿ ಸಲ್ಲಿಸುವಾಗ ಂಇ-೫ ಅರ್ಜಿ ನಮೂನೆ, ಸರ್ಕಾರಕ್ಕೆ ಪಾವತಿಸಿದ ಅರ್ಜಿ ಶುಲ್ಕ ರೂ.೩೦೦ ಚಲನ, ರೂ.೧೦೦ ಛಾಪ ಕಾಗದದಲ್ಲಿ ಅಫಿದಾವಿತ್, ಜಮೀನಿನ ನಕ್ಷೆ (ಃಐUಇ PಖIಓಖಿ), ಅರ್ಜಿದಾರರ ೨ ಭಾವಚಿತ್ರ, ಆಧಾರ್ ಕಾರ್ಡ್ ಪ್ರತಿ, ಎನ್.ಒ.ಸಿ (ನಿರಾಕ್ಷೇಪಣಾ ಪತ್ರ) ಅಗ್ನಿಶಾಮಕ ಇಲಾಖೆ, ಸ್ಥಳೀಯ ಸಂಸ್ಥೆ (ಮಹಾನಗರ ಪಾಲಿಕೆ/ಪಂಚಾಯತ್) ಮತ್ತು ವ್ಯಾಪ್ತಿಯ ಪೊಲೀಸ್ ಠಾಣೆ ದಾಖಲಾತಿಗಳೊಂದಿಗೆ ಸಲ್ಲಿಸಬೇಕು ಹಾಗೂ ಕಛೇರಿಯಿಂದ ಸೂಕ್ತ ಸ್ವೀಕೃತಿಯನ್ನು ಪಡೆಯಬೇಕು.
ತಾತ್ಕಾಲಿಕ ಮಳಿಗೆಗಳನ್ನು ತೆರೆಯುವ ಸಂದರ್ಭದಲ್ಲಿ ಮೂಲ ಪರವಾನಿಗೆಯನ್ನು ಕಡ್ಡಾಯವಾಗಿ ಮಳಿಗೆಯ ಮುಂಭಾಗದಲ್ಲಿ ಸಾರ್ವಜನಿಕರಿಗೆ ಕಾಣಿಸುವ ರೀತಿಯಲ್ಲಿ ಇರಿಸಬೇಕು. ಪರವಾನಿಗೆದಾರರು ಕಡ್ಡಾಯವಾಗಿ ಮಳಿಗೆಗಳಲ್ಲಿ ಹಾಜರಿರಬೇಕು. ಕಚೇರಿಯಿಂದ ಪರವಾನಿಗೆಯನ್ನು ಪಡೆದ ಮಾರಾಟಗಾರರು ಹಸಿರು ಪಟಾಕಿಯನ್ನು (ಂPPಖಔಗಿಇಆ & ಅಇಖಖಿIಈIಇಆ ಃಙ ಅSIಖ & ಓಇಇಖI) ಮಾತ್ರ ಮಾರಾಟ ಮಾಡಬೇಕು. ಪಟಾಕಿ ಮಾರಾಟದ ಮಳಿಗೆಗಳನ್ನು ನವೆಂಬರ್ ೭ ರಿಂದ ೧೦ ಮತ್ತು ನವೆಂಬರ್ ೨೦ ಹಾಗೂ ೨೧ ರವರೆಗೆ ಒಟ್ಟು ೦೬ ದಿನಗಳು ಮಾತ್ರ ತೆರೆದಿರಬೇಕು. ಪರವಾನಿಗೆಯಲ್ಲಿ ನಿಗದಿಪಡಿಸಿರುವ ದಿನಾಂಕ ಮತ್ತು ಸ್ಥಳದಲ್ಲಿ ಮಾತ್ರ ತಾತ್ಕಾಲಿಕ ಪಟಾಕಿ ಅಂಗಡಿಗಳನ್ನು ಇಡಬೇಕು, ಬೇರೆ ಸ್ಥಳದಲ್ಲಿ ಮತ್ತು ದಿನಾಂಕಗಳಲ್ಲಿ ಅಂಗಡಿಯನ್ನು ತೆರೆಯಬಾರದು. ಸಾರ್ವಜನಿಕ ವಸತಿ ಸ್ಥಳಗಳಿಂದ ದೂರವಿರುವ ತೆರೆದ ಪ್ರದೇಶಗಳಲ್ಲಿ ಪಟಾಕಿ ಮಳಿಗೆಗಳನ್ನು ಸ್ಥಾಪಿಸಲು ಸಂಬಂಧಿಸಿದ ಇಲಾಖೆ/ ಪ್ರಾಧಿಕಾರಗಳು ಅನುಮತಿಸಬೇಕು. ಮಳಿಗೆಗಳಲ್ಲಿ ಎರಡು ಕಡೆಯಿಂದ ಸರಾಗವಾಗಿ ಗಾಳಿಯಾಡುವಂತಿರಬೇಕು. ಒಂದು ಮಾರಾಟ ಮಳಿಗೆಯಿಂದ ಮತ್ತೊಂದು ಮಾರಾಟ ಮಳಿಗೆಗೆ ಕನಿಷ್ಠ ೩ ಮೀಟರ್ ಅಂತರವಿರಬೇಕು.
ಪಟಾಕಿ ಖರೀದಿಯ ಸಂದರ್ಭದಲ್ಲಿ ಯಾವುದೇ ರೀತಿಯ ಜನದಟ್ಟಣೆಯಾಗದಂತೆ ಕಟ್ಟುನಿಟ್ಟಾಗಿ ನೋಡಿಕೊಳ್ಳಬೇಕು. ಕೇಂದ್ರ ಸರ್ಕಾರ ಮತ್ತು ರಾಜ್ಯ ಸರ್ಕಾರದ ಆದೇಶ/ ಮಾರ್ಗಸೂಚಿಗಳನ್ನು ಉಲ್ಲಂಘಿಸುವವರ ವಿರುದ್ಧ ವಿಪತ್ತು ನಿರ್ವಹಣಾ ಕಾಯ್ದೆ, ೨೦೦೫ ಹಾಗೂ ಭಾರತೀಯ ನ್ಯಾಯ ಸಂಹಿತೆ ಸೆಕ್ಷನ್ ೨೨೩ ರ ಅಡಿಯಲ್ಲಿ ಶಿಸ್ತು/ ಕಾನೂನು ಕ್ರಮ ಮತ್ತು ಅನ್ವಯವಾಗಬಹುದಾದ ಇತರೆ ಕಾನೂನು ಉಪಬಂಧಗಳ ಮೇರೆಗೆ ಕ್ರಮ ಜರುಗಿಸಲಾಗುತ್ತದೆ.
ಮಳಿಗೆಯಲ್ಲಿ ಸ್ಪೋಟಕ ನಿಯಮ ೨೦೦೮ ರ ನಿಯಮ ೧೩೩ ರ ಕ್ರಮ ಸಂ:೧೫ ಪ್ರಕಾರ ೧೦೦ ಕೆ.ಜಿ ಯಷ್ಟು ಪಟಾಕಿಗಳು ಮತ್ತು ೫೦೦ ಕೆ.ಜಿ ಯಷ್ಟು ಚೋರ್ಸಾ ಕ್ರಾಕರ್ಸ್ ಮತ್ತು ಸ್ಪಾಕ್ಲರ್ಸ್ಗಳನ್ನು ಮಾತ್ರ (ಓoಣ exಛಿeeಜiಟಿg ೧೦೦ ಞiಟogಡಿಚಿmmes oಜಿ mಚಿಟಿuಜಿಚಿಛಿಣuಡಿeಜ ಜಿiಡಿe ತಿoಡಿಞs oಜಿ ಛಿಟಚಿss ೭, ಜivisioಟಿ ೨, sub-ಜivisioಟಿ ೨ ಚಿಟಿಜ ೫೦೦ ಞiಟogಡಿಚಿmmes oಜಿ [ಅhoಡಿsಚಿ] ಛಿಡಿಚಿಛಿಞeಡಿs oಜಿ sಠಿಚಿಡಿಞಟeಡಿs) ಇಡಲು ಅವಕಾಶವಿದ್ದು ಹಾಗೂ ಭಾರತೀಯ ಶಬ್ದಮಟ್ಟದ ಮಾನದಂಡಗಳಂತೆ ೧೨೫ ಡಿಬಿ(ಎ೧) ಅಥವಾ ೧೪೫ ಪಿಕೆಗಿಂತ ಅಧಿಕ ಶಬ್ದವನ್ನುಂಟು ಮಾಡುವ ಸುಡುಮದ್ದು ಮಾರಾಟ/ಬಳಕೆಯನ್ನು ನಿಷೇಧಿಸಲಾಗಿದೆ.
ಮಳಿಗೆಯಲ್ಲಿ ಅಗ್ನಿ ಅವಘಡ ಸಂಭವಿಸದಂತೆ ೨ ಸಂಖ್ಯೆ ೯ ಲೀಟರ್ ಸಾಮಥ್ರ್ಯ ವಾಟರ್ ಪ್ರೇಶರ್ ಮಾದರಿ ಅಗ್ನಿನಂದಕ ಹಾಗೂ ೨ ಸಂಖ್ಯೆ ೯ ಕೆ.ಜಿ. ಸಾಮಾಥ್ರ್ಯದ ಎ.ಸಿ.ಬಿ ಟೈಪ್ ಅಗ್ನಿ ನಂದಕ ಮಳಿಗೆಯಲ್ಲಿ ಸುಲಭವಾಗಿ ಬಳಕೆ ಮಾಡಲು ಸಿಗುವಂತೆ ಇಡಬೇಕು ಹಾಗೂ ೯ ಲೀಟರ್ ಸಾಮಾಥ್ರ್ಯದ ೨ ಬಕೆಟ್ಗಳಲ್ಲಿ ನೀರು ಮತ್ತು ೯ ಲೀಟರ್ ಸಾಮಥ್ರ್ಯದ ೨ ಬಕೆಟ್ಗಳಲ್ಲಿ ಮರಳನ್ನು ತುಂಬಿಸಿ ಇಡಬೇಕು. ಮಳಿಗೆಗಳನ್ನು ರಾತ್ರಿ ೧೦ ಗಂಟೆಯ ನಂತರ ತೆರೆದಲ್ಲಿ ಪರವಾನಿಗೆಯನ್ನು ರದ್ದುಗೊಳಿಸಲಾಗುತ್ತದೆ.
ದೀಪಾವಳಿಯ ಮತ್ತು ತುಳಸಿ ಪೂಜೆಯ ಸಂದರ್ಭದಲ್ಲಿ ಪಟಾಕಿ ಮಾರಾಟ ಮಾಡುವ ಪರವಾನಗೆಯು ಸಾರ್ವಜನಿಕರ ಆರೋಗ್ಯದ ಹಿತದೃಷ್ಟಿಯಿಂದ ಮತ್ತು ಸಾರ್ವಜನಿಕರ ಸುರಕ್ಷತೆಯ ಹಿತದೃಷ್ಠಿಯಿಂದ ಯಾವುದೇ ಸಮಯದಲ್ಲೂ ರದ್ದುಗೊಳಿಸುವ ಷರತ್ತಿಗೆ ಒಳಪಟ್ಟಿರುತ್ತದೆ ಎಂದು ಮಂಗಳೂರು ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.























