
ಸಂಜೆವಾಣಿ ನ್ಯೂಸ್
ಮೈಸೂರು. ಆ.03:- ಮನುಷ್ಯನ ಜೀವನಕ್ಕೂ ಗಾಳಿಪಟಕ್ಕೂ ಇರುವ ಹೋಲಿಕೆಯನ್ನು ತಿಳಿಸಿ ಉತ್ತಮ ಸಂದೇಶ ನೀಡಿದ ಹೈಕೋರ್ಟ್ ನ್ಯಾಯಮೂರ್ತಿ ಶ್ರೀಶಾನಂದ ಅವರು ಧರ್ಮಪತ್ನಿ ರಜಿನಿ ಅವರೊಂದಿಗೆ ಮಕ್ಕಳ ಜೊತೆ ಗಾಳಿಪಟ ಹಾರಿಸಿ ಸಂಭ್ರಮಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ನ್ಯಾಯಮೂರ್ತಿ ಶ್ರೀಶಾನಂದ, ಗಾಳಿಪಟ ಹಾರುವ ರೀತಿಯನ್ನು ಮನುಷ್ಯನ ಜೀವನಕ್ಕೆ ಹೋಲಿಸಿ, ಜೀವನದಲ್ಲಿ ಏಳು-ಬೀಳುಗಳ ನಡುವೆಯೂ ಸ್ಥಿರವಾಗಿ ಮುನ್ನಡೆಯಬೇಕು ಎಂಬ ಸಂದೇಶವನ್ನು ನೀಡಿದರು.
ಕಾರ್ಯಕ್ರಮದಲ್ಲಿ ಮೈಸೂರು ನ್ಯಾಯಾಲಯದ 1sಣ ಂಆಎ ನ್ಯಾಯಮೂರ್ತಿ ಸಂಧ್ಯಾ ಸಾಥ್ ಅವರು ಸಹ ಉಪಸ್ಥಿತರಿದ್ದರು.
ನ್ಯಾಯಮೂರ್ತಿ ದಂಪತಿ ಮಕ್ಕಳೊಂದಿಗೆ ಸೇರಿ ವಿವಿಧ ಬಣ್ಣದ ಗಾಳಿಪಟಗಳನ್ನು ಹಾರಿಸಿ ಮಕ್ಕಳೊಂದಿಗೆ ಖುಷಿಯಿಂದ ಸಮಯ ಕಳೆದರು. ಗಾಳಿಪಟ ಹಬ್ಬದಲ್ಲಿ ಭಾಗವಹಿಸಿದ್ದ ನೂರಾರು ಮಕ್ಕಳು ಮತ್ತು ಸಾರ್ವಜನಿಕರು ಸಹ ವಿವಿಧ ಆಕಾರದ ಗಾಳಿಪಟಗಳನ್ನು ಹಾರಿಸಿ ಸಂಭ್ರಮಿಸಿದರು.
ಆರ್ಯವೈಶ್ಯ ಅಭಿವೃದ್ಧಿ ಸಮಿತಿ ವತಿಯಿಂದ ಮೈಸೂರು ವಸ್ತುಪ್ರದರ್ಶನ ಪ್ರಾಧಿಕಾರದ ಆವರಣದಲ್ಲಿ ಆಯೋಜಿಸಲಾಗಿದ್ದ “ಗಾಳಿಪಟ ಹಬ್ಬ”ದಲ್ಲಿ ಅವರು ಭಾಗವಹಿಸಿದ್ದರು.































