Home ಜಿಲ್ಲೆ  ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ

 ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿ ಜಿಲ್ಲಾ ಘಟಕ ಅಸ್ತಿತ್ವಕ್ಕೆ

ಸಂಜೆವಾಣಿ ವಾರ್ತೆ

ಹೊಸಪೇಟೆ.ಜು.23 ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಹೋರಾಟ ಸಮಿತಿಯ ವಿಜಯನಗರ ಜಿಲ್ಲಾ ಘಟಕ ನೂತನವಾಗಿ ಅಸ್ತಿತ್ವಕ್ಕೆ ಬಂದಿದೆ.

ಸ್ಥಳೀಯ ಅಮರಾವತಿ ಪ್ರವಾಸಿ ಮಂದಿರದಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ಕೇಂದ್ರಾಧ್ಯಕ್ಷ ಚಾಮರಸ ಮಾಲೀ ಪಾಟೀಲ್ ಅಧ್ಯಕ್ಷತೆಯಲ್ಲಿ ಜರುಗಿದ ಸಭೆಯಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶಾಭೀವೃದ್ದಿ ಹೋರಾಟ ಸಮಿತಿಯ ಜಿಲ್ಲಾ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.

ಜಿಲ್ಲಾ ಸಮಿತಿ ಪದಾಧಿಕಾರಿಗಳು: ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ದಿ ಹೋರಾಟ ಸಮಿತಿಯ ಜಿಲ್ಲಾ ಗೌರವಾಧ್ಯಕ್ಷರಾಗಿ ಜೆ.ಎಂ.ವೀರಸಂಗಯ್ಯ, ಅಧ್ಯಕ್ಷರಾಗಿ ಎ.ಕರುಣಾನಿಧಿ, ಕಾರ್ಯಾಧ್ಯಕ್ಷರಾಗಿ ಕೆ.ನಾಗರತ್ನಮ್ಮ, ವೈ.ಗೋವಿಂದರಾಜು, ಉಪಾಧ್ಯಕ್ಷರುಗಳಾಗಿ ಜಿ.ಯರಿಸ್ವಾಮಿ, ಪ.ಯ.ಗಣೇಶ್, ಕೆ.ಚಾಂದ್ಬಾಷ, ಆರ್.ಭಾಸ್ಕರರೆಡ್ಡಿ, ಪ್ರಧಾನ ಕಾರ್ಯದರ್ಶಿಯಾಗಿ ಜೆ.ಎಂ.ಚನ್ನಬಸಯ್ಯ, ಸಂಘಟನಾ ಕಾರ್ಯದರ್ಶಿಯಾಗಿ ಅಕ್ಕಿ ಮಲ್ಲಿಕಾರ್ಜುನ, ಕಾರ್ಯದರ್ಶಿಗಳಾಗಿ ಜೆ.ಎನ್. ಕಾಳಿದಾಸ್, ಮಾವಿನಹಳ್ಳಿ ಬಸವರಾಜ, ಕೆ.ಸಿದ್ಧಲಿಂಗಪ್ಪ, ಯಲ್ಲಾಲಿಂಗ, ವಿ.ಸ್ವಾಮಿ, ಸಹ-ಕಾರ್ಯದರ್ಶಿಯಾಗಿ ಪವನ್ ಕುಮಾರ್, ಶಿವಾರೆಡ್ಡಿ ಮತ್ತು ಸಮಿತಿಯ ಸಕ್ರಿಯ ಸದಸ್ಯರಾಗಿ ಮೋಹನ್, ಶಶಿಧರ್, ರವಿಕುಮಾರ್ ತಂಬ್ರಹಳ್ಳಿ, ಜಂಬಮ್ಮ, ಜೆ.ಎಂ.ಪ್ರಜಾಸಿಂಹ, ಎಂ.ಉಮಾಮಹೇಶ್ವರ, ಚಂದ್ರಲೇಖ, ಜೆ.ರಾಮಾಂಜಿನಿ ಆಯ್ಕೆಯಾಗಿದ್ದಾರೆ.

ಸಭೆಯನ್ನುದ್ದೇಶಿಸಿ ಮಾತನಾಡಿದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಹೋರಾಟ ಸಮಿತಿಯ ಕೇಂದ್ರಾಧ್ಯಕ್ಷ ಚಾಮರಸ ಮಾಲೀ ಪಾಟೀಲ್, ಯೋಜನೆಗಳು ರೂಪುಗೊಂಡು ಅಸ್ಥಿತ್ವಕ್ಕೆ ಬರುವುದರೊಳಗೆ ಸಾಕಷ್ಟು ಹಣ ಪೋಲಾಗಿ ಅಭಿವೃದ್ಧಿ ಕುಂಠಿತಗೊಳ್ಳುತ್ತಿವೆ. ಇಡೀ ದೇಶದಲ್ಲಿ ಭ್ರಷ್ಟಾಚಾರ ತುಂಬಿ ತುಳುಕುತ್ತಿದೆ. ಯಾವುದೇ ಕಾರ್ಯ ಯೋಜನೆಗಳು, ಜನ ಸಾಮಾನ್ಯರನ್ನು ತಲುಪುವುದರೊಳಗೆ ಜನಪ್ರತಿನಿಧಿಗಳಿಂದ ಹಿಡಿದು ಅಧಿಕಾರಿಗಳೆಲ್ಲರ ಪಾಲು ಹಂಚಿಕೆಯಾಗಿ ಅಭಿವೃದ್ಧಿ ಕಾರ್ಯಗಳು ಸಾಕಷ್ಟು ಗೌಣವಾಗುತ್ತಿವೆ.  ಅದರಲ್ಲೂ ವಿಶೇಷವಾಗಿ ಕಲ್ಯಾಣ ಕರ್ನಾಟಕದಲ್ಲಿ ಸಾಕಷ್ಟು ಹಣ ಬಿಡುಗಡೆಯಾಗಿದ್ದರೂ ಸರಿಯಾದ ಸದ್ಭಳಕೆಯಾಗುತ್ತಿಲ್ಲ. 

ಈ ಭಾಗದಲ್ಲಿ ಸಾಕಷ್ಟು ಸರ್ಕಾರಿ ಉದ್ಯೋಗಳು ಖಾಲಿ ಇದ್ದರೂ ಅವುಗಳನ್ನು ತುಂಬುವತ್ತ ಸರ್ಕಾರಗಳು ನಿರ್ಲಕ್ಷ್ಮ ವಹಿಸುತ್ತಿವೆ.  ಆರೋಗ್ಯಕ್ಕೆ ಸಂಬಂಧಿಸಿದಂತೆಯೂ ಸಹ ಕಾಳಜಿ ವಹಿಸದೇ ಇರುವುದರಿಂದ ಸಾಕಷ್ಟು ಸಾವು-ನೋವುಗಳ ಪ್ರಮಾಣ ಈ ಭಾಗದಲ್ಲಿ ಹೆಚ್ಚಾಗುತ್ತಿವೆ.  ಕೃಷಿ ಅಭಿವೃದ್ಧಿಯ ಬದಲಾಗಿ ಸರ್ಕಾರಗಳು ಕಾರ್ಖಾನೆಗಳಿಗೆ ಅಧ್ಯತೆ ನೀಡುತ್ತಿರುವುದರಿಂದ ಈ ಭಾಗದ ಪರಿಸರ ನಾಶದ ಜೊತೆಗೆ ಜಲಮಾಲಿನ್ಯವು ಸಹ ಹೆಚ್ಚಾಗುತ್ತಿದೆ. ಕಾರ್ಪೋರೇಟ್ ಕಂಪನಿಗಳಿಗೆ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಮಣೆ ಹಾಕುತ್ತಿವೆ. 

ಅವರ ಅಣತಿಯಂತೆ ನಡೆಯುವ ಸರ್ಕಾರಗಳ ಅನೇಕ ಸಚಿವರು ಮತ್ತು ಸಂಸದರು ಜನ ಸಾಮಾನ್ಯರ ಬದುಕು ಮತ್ತು ಜೀವದ ಜೊತೆ ಆಡವಾಡುತ್ತಿದ್ದಾರೆ.  ಕಲ್ಯಾಣ ಕರ್ನಾಟಕಕ್ಕೆ ಆಗುತ್ತಿರುವ ಅನ್ಯಾಯ ಮತ್ತು ಭ್ರಷ್ಟಾಚಾರದ ಬಗ್ಗೆ ಧ್ವನಿ ಎತ್ತಬೇಕಾದ ಅನಿವಾರ್ಯತೆ ಈಗ ಹೆಚ್ಚಾಗಿದೆ. ಆದ್ದರಿಂದ  ರಾಘವೇಂದ್ರ ಕುಷ್ಟಗಿ, ಜಾನ್ವೆಸ್ಲಿ ಟಿ ಕಾತರಕಿ, ಬಿ.ಬಸವರಾಜ್, ಕೆ.ನೀಲ, ಜೆ.ಎಂ.ವೀರಸಂಗಯ್ಯ ಮುಂತಾದ ಹಿರಿಯ ಹೋರಾಟಗಾರರ ನೇತೃತ್ವದಲ್ಲಿ ಜಿಲ್ಲಾ ಮತ್ತು ತಾಲೂಕು ಕೇಂದ್ರಗಳಲ್ಲಿ ಸಮಿತಿ ರಚಿಸಿ ಈ ಭಾಗಕ್ಕೆ ಸಿಗುವ ಮತ್ತು ಸಿಗಲಿರುವ ಸೌಲಭ್ಯಗಳ ಬಗ್ಗೆ ಜಾಗೃತಿ ಮೂಡಿಸಿ ಹೋರಾಟ ಹಮ್ಮಿಕೊಳ್ಳಬೇಕಾಗಿದೆ ಎಂದರು.