Home ಜಿಲ್ಲೆ ಮಂಗಳೂರು ಉಡುಪಿ ಜಿಲ್ಲೆಯಲ್ಲಿ ೪೯,೭೩೩ ಮತದಾರರ ಹೆಸರು ಡಿಲೀಟ್ ಎಸ್‌ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ

ಉಡುಪಿ ಜಿಲ್ಲೆಯಲ್ಲಿ ೪೯,೭೩೩ ಮತದಾರರ ಹೆಸರು ಡಿಲೀಟ್ ಎಸ್‌ಐಆರ್ ಬಳಿಕ ಅಂತಿಮ ಮತದಾರರ ಪಟ್ಟಿ ಪ್ರಕಟ

ಉಡುಪಿ-ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆ ಪೂರ್ಣಗೊಂಡಿದ್ದು, ಉಡುಪಿ ಜಿಲ್ಲೆಯಲ್ಲಿ ಒಟ್ಟು ೪೯,೭೩೩ ಮತದಾರರ ಹೆಸರುಗಳು ಪಟ್ಟಿಯಿಂದ ಕಡಿತಗೊಂಡಿವೆ. ಇದರೊಂದಿಗೆ ಜಿಲ್ಲೆಯಲ್ಲಿ ಮತದಾರರ ಸಂಖ್ಯೆ ೧೦,೬೩,೮೭೬ರಿಂದ ೧೦,೧೪,೧೪೩ಕ್ಕೆ ಇಳಿಕೆಯಾಗಿದೆ.
ಮಣಿಪಾಲದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಚುನಾವಣಾಧಿಕಾರಿ ಹಾಗೂ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ. ಅವರು ಅಂತಿಮ ಮತದಾರರ ಪಟ್ಟಿಯ ವಿವರಗಳನ್ನು ಪ್ರಕಟಿಸಿದರು.
ಜೂನ್ ೧೬ರಂದು ಆರಂಭಗೊAಡ ಎಸ್‌ಐಆರ್ ಪ್ರಕ್ರಿಯೆಯ ಗಣತಿ ಹಂತದಲ್ಲೇ ಜಿಲ್ಲೆಯಲ್ಲಿ ೬೩,೩೩೧ ಮತದಾರರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಲಾಗಿತ್ತು. ಆಗಸ್ಟ್ ೨೪ರಂದು ಪ್ರಕಟಗೊಂಡ ಕರಡು ಮತದಾರರ ಪಟ್ಟಿಯಲ್ಲಿ ೧೦,೦೦,೫೪೫ ಮತದಾರರಿದ್ದರು. ಕರಡು ಪಟ್ಟಿ ಪ್ರಕಟಗೊಂಡ ಬಳಿಕ ೧೭,೩೩೪ ಹೊಸ ಮತದಾರರ ಹೆಸರು ಸೇರ್ಪಡೆಯಾಗಿದ್ದು, ವಿವಿಧ ಕಾರಣಗಳಿಂದ ೩,೭೩೬ ಹೆಸರುಗಳನ್ನು ತೆಗೆದುಹಾಕಲಾಗಿದೆ. ಇದರಿಂದ ಕರಡು ಪಟ್ಟಿಯ ಬಳಿಕ ೧೩,೫೯೮ ಮತದಾರರ ನಿವ್ವಳ ಹೆಚ್ಚಳವಾಗಿದೆ. ಅಂತಿಮವಾಗಿ ಜಿಲ್ಲೆಯಲ್ಲಿ ೧೦,೧೪,೧೪೩ ಮತದಾರರಿದ್ದಾರೆ ಎಂದರು.