
ಜಪಾನ್‍ನಲ್ಲಿ ಅದು ಎಂದಿನಂತೆಯೇ ಒಂದು ಸಾಮಾನ್ಯ ಬೆಳಗಾಗಿತ್ತು. ಜನರು ತಮ್ಮ ದಿನನಿತ್ಯದ ಕೆಲಸಗಳಲ್ಲಿ ನಿರತರಾಗಿದ್ದರು; ಕಚೇರಿಗಳಿಗೆ ತೆರಳುವ ಉದ್ಯೋಗಿಗಳು, ಶಾಲೆಗಳಿಗೆ ಹೋಗುವ ಮಕ್ಕಳು ತಮ್ಮ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಆದರೆ ಆಗಸ್ಟ್ 6, 1945 ರ ಬೆಳಿಗ್ಗೆ ಜಪಾನಿನ ಸಮಯ ಸರಿಯಾಗಿ 8:15 ಕ್ಕೆ ಇಡೀ ಹಿರೋಷಿಮಾ ನಗರವನ್ನು ಮಹಾ ಸ್ಫೋಟವೊಂದು ನಡುಗಿಸಿತು.
ಯುಎಸ್ ಇಂಧನ ಇಲಾಖೆಯ ಮ್ಯಾನ್‍ಹ್ಯಾಟನ್ ಯೋಜನೆಯ ವರದಿಯ ಪ್ರಕಾರ, ಅಂದು ಬೆಳಿಗ್ಗೆ ‘ಎನೋಲಾ ಗೇ’ ಎಂಬ ಹೆಸರಿನ ಬಿ-29 ಬಾಂಬರ್ ವಿಮಾನವು ಟಿನಿಯನ್ ದ್ವೀಪದಿಂದ ಹೊರಟು ಜಪಾನ್‍ನ ವಾಯುವ್ಯ ದಿಕ್ಕಿನತ್ತ ಸಾಗಿತ್ತು. 509 ನೇ ಕಾಂಪೆÇೀಸಿಟ್ ಗ್ರೂಪ್‍ನ ಕಮಾಂಡರ್ ಕರ್ನಲ್ ಪಾಲ್ ಟಿಬೆಟ್ಸ್ ಈ ವಿಮಾನವನ್ನು ಚಲಾಯಿಸುತ್ತಿದ್ದರು. ಸುಮಾರು 300,000 ನಾಗರಿಕರು ಹಾಗೂ 43,000 ಮಿಲಿಟರಿ ಸೈನಿಕರನ್ನು ಹೊಂದಿದ್ದ ಪ್ರಮುಖ ಮಿಲಿಟರಿ ಕೇಂದ್ರವಾದ ಹಿರೋಷಿಮಾವನ್ನು ಮುಖ್ಯ ಗುರಿಯಾಗಿಸಿಕೊಂಡು, 9,700-ಪೌಂಡ್ ತೂಕದ ಯುರೇನಿಯಂ ಆಧಾರಿತ “ಲಿಟಲ್ ಬಾಯ್” ಎಂಬ ಪರಮಾಣು ಬಾಂಬನ್ನು ಎಸೆಯಲಾಯಿತು.
ಆ ಕ್ಷಣದಲ್ಲೇ ಕುರುಡುಗೊಳಿಸುವಂತಹ ಪ್ರಚಂಡ ಬಿಳಿ ಬೆಳಕು ಮಿನುಗಿತು. ದೊಡ್ಡ ಹೊಗೆಯ ಗೊಂಚಲು ಆಕಾಶಕ್ಕೆ ಚಿಮ್ಮಿ ಇಡೀ ನಗರವೇ ನಾಶವಾಯಿತು. ಈ ಸ್ಫೋಟದ ತೀವ್ರತೆಗೆ ಗಾಳಿಯಲ್ಲಿ ಹಾರುತ್ತಿದ್ದ ಪಕ್ಷಿಗಳು ಜ್ವಾಲೆಯಲ್ಲಿ ಕರಗಿ ಬೂದಿಯಾದವು. ಜನರ ಬಟ್ಟೆ ಹಾಗೂ ಗೋಡೆಗಳ ಮೇಲೆ ಅವರ ಶರೀರದ ಕಪ್ಪು ನೆರಳುಗಳು ಶಾಶ್ವತವಾಗಿ ಮುದ್ರಿತಗೊಂಡವು. 6,400 ಅಡಿ ದೂರದಲ್ಲಿದ್ದ ಜನರಿಗೂ ಈ ಶಾಖದ ಅನುಭವವಾಗಿ, ನೆಲದ ಮೇಲೆ ನಿಲ್ಲಲಾಗದೆ ಕುಸಿದುಬಿದ್ದರು. ಮನೆಯ ಗಾಜುಗಳು ಒಡೆದು ಚೂರಾದವು. ನೆಲ ಶೂನ್ಯದಿಂದ (ಗ್ರೌಂಡ್ ಝೀರೋ) ಒಂದು ಮೈಲಿ ವ್ಯಾಪ್ತಿಯಲ್ಲಿದ್ದ ಪ್ರತಿಯೊಂದು ರಚನೆ ಸಂಪೂರ್ಣವಾಗಿ ಧ್ವಂಸಗೊಂಡು, ನಗರದಲ್ಲಿದ್ದ ಕಟ್ಟಡಗಳಲ್ಲಿ ಕೇವಲ ಶೇ. 10 ರಷ್ಟು ಮಾತ್ರ ಉಳಿದುಕೊಂಡವು. ನಗರದ ಅರ್ಧದಷ್ಟು ಜನಸಂಖ್ಯೆ ಕ್ಷಣಾರ್ಧದಲ್ಲಿ ಬಲಿಯಾಯಿತು. ದಾಳಿ ನಡೆದು 16 ಗಂಟೆಗಳ ನಂತರ ಅಮೆರಿಕ ಅಧಿಕೃತವಾಗಿ ಬಾಂಬ್ ದಾಳಿಯನ್ನು ಘೋಷಿಸಿದ ಮೇಲೆಯೇ ಜಪಾನ್ ಸರ್ಕಾರಕ್ಕೆ ಘಟನೆಯ ಸಂಪೂರ್ಣ ವ್ಯಾಪ್ತಿ ಅರಿವಿಗೆ ಬಂದಿದ್ದು.
ನಾಗಸಾಕಿಯ ಮೇಲಿನ ಎರಡನೇ ಭೀಕರ ದಾಳಿ:
ಹಿರೋಷಿಮಾದ ಭೀಕರತೆಯಿಂದ ಜಪಾನ್ ಚೇತರಿಸಿಕೊಳ್ಳುವ ಮೊದಲೇ, ನಿಖರವಾಗಿ ಮೂರು ದಿನಗಳ ನಂತರ ಅಂದರೆ ಆಗಸ್ಟ್ 9, 1945 ರಂದು ಅಮೆರಿಕ ಮತ್ತೊಂದು ಪ್ರಮುಖ ಕೈಗಾರಿಕಾ ಹಾಗೂ ಬಂದರು ನಗರವಾದ ನಾಗಸಾಕಿಯ ಮೇಲೆ ಎರಡನೇ ಪರಮಾಣು ದಾಳಿ ನಡೆಸಿತು. ಯುಎಸ್ ಏರ್ ಫೆÇೀರ್ಸ್‍ನ ಮೇಜರ್ ಚಾಲ್ರ್ಸ್ ಸ್ವೀನಿ ಪೈಲಟ್ ಮಾಡಿದ “ಬಾಕ್ಸ್‍ಕಾರ್” ಎಂಬ ??-29 ವಿಮಾನದ ಮೂಲಕ 10,000 ಪೌಂಡ್ ತೂಕದ “ಫ್ಯಾಟ್ ಮ್ಯಾನ್” ಬಾಂಬನ್ನು ಬೀಳಿಸಲಾಯಿತು. ಇದರ ಸ್ಫೋಟಕ ಶಕ್ತಿ 21 ಕಿಲೋಟನ್ ಆಗಿದ್ದು, ಹಿರೋಷಿಮಾ ಬಾಂಬ್‍ಗಿಂತ ಶೇಕಡಾ 40 ರಷ್ಟು ಹೆಚ್ಚು ಶಕ್ತಿಶಾಲಿಯಾಗಿತ್ತು.
ಆಗಸ್ಟ್ 1 ರಂದು ನಡೆದ ಸಣ್ಣ ದಾಳಿಯ ಕಾರಣದಿಂದಾಗಿಯೇ ನಾಗಸಾಕಿಯ ಶಾಲಾ ಮಕ್ಕಳನ್ನು ಸ್ಥಳಾಂತರಿಸಲಾಗಿತ್ತು. ಬಾಂಬ್ ಬಿದ್ದಾಗ ನಗರದಲ್ಲಿ ಸುಮಾರು 200,000 ಜನರಿದ್ದರು. ಆತುರದಿಂದ ಎಸೆಯಲ್ಪಟ್ಟ ಈ ಬಾಂಬ್ ದಕ್ಷಿಣದ ‘ಮಿತ್ಸುಬಿಷಿ ಸ್ಟೀಲ್ ಅಂಡ್ ಆಮ್ರ್ಸ್ ವಕ್ರ್ಸ್’ ಮತ್ತು ಉತ್ತರದ ‘ಮಿತ್ಸುಬಿಷಿ-ಉರಾಕಾಮಿ ಟಾರ್ಪಿಡೊ ವಕ್ರ್ಸ್’ ನಡುವೆ ಸ್ಫೋಟಿಸಿತು. ಇದು ವಸತಿ ಪ್ರದೇಶಕ್ಕಿಂತ ಕೊಂಚ ದೂರದಲ್ಲಿ ಸ್ಫೋಟಿಸಿದ್ದರಿಂದ ವಿನಾಶದ ಪ್ರಮಾಣ ಕೊಂಚ ಕಡಿಮೆಯಾಯಿತು.
ನಾಗಸಾಕಿಯ ಸುತ್ತಲೂ ಇದ್ದ ಬೆಟ್ಟಗಳು ಬಾಂಬ್‍ನ ಶಾಖ, ಸ್ಫೋಟ ಮತ್ತು ವಿಕಿರಣದ ತೀವ್ರತೆಯನ್ನು ತಡೆದು ತಗ್ಗಿಸಲು ನೆರವಾದವು. ಆದಾಗ್ಯೂ, ಸ್ಫೋಟದ ಕೇಂದ್ರದಿಂದ 1 ಕಿಲೋಮೀಟರ್ ???ಧಿಯಲ್ಲಿದ್ದ ಪ್ರಾಣಿ ಹಾಗೂ ??????ರು ತಕ್ಷಣವೇ ಪ್ರಾಣ ತೆತ್ತರು. 43 ಚದರ ಮೈಲಿ ಪ್ರದೇಶದ ಮೇಲೆ ಪರಿಣಾಮ ಬೀರಿದ ಈ ದಾಳಿಯಲ್ಲಿ, ಒಂದೂವರೆ ಮೈಲಿ ವ್ಯಾಪ್ತಿಯಲ್ಲಿದ್ದ ಬಹುತೇಕ ಮನೆಗಳು ನೆಲಸಮವಾದವು. ನಗರದಲ್ಲಿದ್ದ 52,000 ಮನೆಗಳಲ್ಲಿ 14,000 ಮನೆಗಳು ಸಂಪೂರ್ಣ ನಾಶವಾಗಿ, 5,400 ಮನೆಗಳು ತೀವ್ರವಾಗಿ ಹಾನಿಗೊಳಗಾದವು. ಕೇವಲ ಶೇ. 12 ರಷ್ಟು ಮನೆಗಳು ಮಾತ್ರ ಸುರಕ್ಷಿತವಾಗಿ ಉಳಿದವು. ನೀರಿನ ಪೈಪ್‍ಲೈನ್‍ಗಳು ಒಡೆದುಹೋದದ್ದರಿಂದ ಬೆಂಕಿ ನಂದಿಸಲು ಸಾಧ್ಯವಾಗದೆ, ಘಟನೆ ನಡೆದು ಆರು ವಾರಗಳ ನಂತರವೂ ನಗರದಲ್ಲಿ ಕುಡಿಯುವ ನೀರಿನ ತೀವ್ರ ಅಭಾವವಿತ್ತು.
ಸಾವು ನೋವು ಮತ್ತು ಭೀಕರ ಪರಿಣಾಮ:
ಎರಡೂ ನಗರಗಳ ಮೇಲಿನ ದಾಳಿಯಿಂದಾಗಿ ಲಕ್ಷಾಂತರ ಮುಗ್ಧ ನಾಗರಿಕರು ಪ್ರಾಣ ಕಳೆದುಕೊಂಡರು. ಸ್ಫೋಟದ ಶಬ್ದದಿಂದ ಜನರು ಕಿವುಡರಾದರೆ, ತೀವ್ರವಾದ ಬೆಳಕು ಕಣ್ಣಿನ ದೃಷ್ಟಿಯನ್ನೇ ಕಸಿದುಕೊಂಡಿತು. ಅತಿಯಾದ ಶಾಖಕ್ಕೆ ಜನರ ಚರ್ಮವೇ ಕರಗಿಹೋಯಿತು. ತಕ್ಷಣಕ್ಕೆ ಸಾವನ್ನಪ್ಪಿದವರಲ್ಲದೆ, ವಿಕಿರಣದ ಪ್ರಭಾವದಿಂದಾಗಿ ಮುಂದಿನ 2-3 ತಿಂಗಳುಗಳಲ್ಲಿ ಸಾವಿರಾರು ಜನರು ಪ್ರಾಣ ಬಿಟ್ಟರು. 1945 ರ ವರ್ಷಾಂತ್ಯದ ವೇಳೆಗೆ ಎರಡೂ ನಗರಗಳಲ್ಲಿ ಸೇರಿ ಸಾವನ್ನಪ್ಪಿದವರ ಸಂಖ್ಯೆ 200,000 ತಲುಪಿತ್ತು. ಜಪಾನ್ ಇತಿಹಾಸದಲ್ಲಿ ಎಂದೂ ಮಾಸದ ಕಪ್ಪು ಚುಕ್ಕೆಯಾಗಿ ಉಳಿದ ಈ ಪರಮಾಣು ದಾಳಿಗಳು, ಮಾನವ ಕುಲದ ಮೇಲಿನ ಅತ್ಯಂತ ವಿನಾಶಕಾರಿ ಮಿಲಿಟರಿ ಕಾರ್ಯಾಚರಣೆಯಾಗಿ ದಾಖಲಾಗಿವೆ.

































