Home ವಿಶ್ವ ದಿನಾಚರಣೆ ಇಂದು ಅಂತರರಾಷ್ಟ್ರೀಯ ಹುಲಿ ದಿನ

ಇಂದು ಅಂತರರಾಷ್ಟ್ರೀಯ ಹುಲಿ ದಿನ

ಪ್ರತಿ ವರ್ಷ ಜುಲೈ 29 ರಂದು ಪ್ರಪಂಚದಾದ್ಯಂತ ಅಂತರರಾಷ್ಟ್ರೀಯ ಹುಲಿ ದಿನವನ್ನು ಅತ್ಯಂತ ಶ್ರದ್ಧೆ ಮತ್ತು ಜಾಗೃತಿಯಿಂದ ಆಚರಿಸಲಾಗುತ್ತದೆ. ಪ್ರಕೃತಿಯ ಅಪ್ರತಿಮ ಸೌಂದರ್ಯ ಮತ್ತು ಶಕ್ತಿಯ ಸಂಕೇತವಾಗಿರುವ ಹುಲಿಗಳನ್ನು ರಕ್ಷಿಸುವುದು ಹಾಗೂ ಅವುಗಳ ನೈಸರ್ಗಿಕ ಆವಾಸಸ್ಥಾನವನ್ನು ಉಳಿಸಿಕೊಳ್ಳುವ ಜವಾಬ್ದಾರಿಯನ್ನು ಪ್ರತಿಯೊಬ್ಬರಿಗೂ ನೆನಪಿಸಲು ಈ ದಿನವನ್ನು ಮೀಸಲಿಡಲಾಗಿದೆ.


ಅಂತರರಾಷ್ಟ್ರೀಯ ಹುಲಿ ದಿನದ ಐತಿಹಾಸಿಕ ಹಿನ್ನೆಲೆ
ಈ ಅಂತರರಾಷ್ಟ್ರೀಯ ಜಾಗೃತಿ ದಿನಾಚರಣೆಯು 2010 ರಲ್ಲಿ ಪ್ರಾರಂಭವಾಯಿತು. ರಷ್ಯಾದ ಸೇಂಟ್ ಪೀಟರ್ಸ್‍ಬರ್ಗ್‍ನಲ್ಲಿ ನಡೆದ ಹುಲಿ ಶೃಂಗಸಭೆಯಲ್ಲಿ 13 ಹುಲಿ ಆವಾಸಸ್ಥಾನ ಹೊಂದಿರುವ ದೇಶಗಳು ಒಂದೆಡೆ ಸೇರಿ, ಶೀಘ್ರವಾಗಿ ಕುಸಿಯುತ್ತಿದ್ದ ಹುಲಿಗಳ ಜನಸಂಖ್ಯೆಯನ್ನು ತಡೆಯಲು ಮತ್ತು ಅವುಗಳ ಸಂಖ್ಯೆಯನ್ನು ದ್ವಿಗುಣಗೊಳಿಸಲು ಜಾಗತಿಕ ಪ್ರತಿಜ್ಞೆ ತೆಗೆದುಕೊಂಡವು. ಅಂದಿನಿಂದ, ಈ ವಾರ್ಷಿಕ ಆಚರಣೆಯು ಹುಲಿ ಸಂರಕ್ಷಣೆಯ ಪ್ರಾಮುಖ್ಯತೆಯನ್ನು ಜಗತ್ತಿಗೆ ಸಾರುತ್ತಾ ಬಂದಿದೆ.
ಪರಿಸರ ವ್ಯವಸ್ಥೆ ಮತ್ತು ಸಾಂಸ್ಕೃತಿಕ ಪರಂಪರೆಯಲ್ಲಿ ಹುಲಿಯ ಮಹತ್ವ
ಹುಲಿಗಳು ಕೇವಲ ಧೈರ್ಯ, ಶಕ್ತಿ ಮತ್ತು ಗಾಂಭೀರ್ಯದ ಸಂಕೇತಗಳಷ್ಟೇ ಅಲ್ಲ; ಅವು ಅರಣ್ಯ ಪರಿಸರ ವ್ಯವಸ್ಥೆಯ ಬೆನ್ನೆಲುಬಾಗಿವೆ.


ಪರಿಸರ ಸಮತೋಲನ: ಆಹಾರ ಸರಪಳಿಯ ತುದಿಯಲ್ಲಿರುವ ಹುಲಿಗಳು, ಕಾಡಿನಲ್ಲಿರುವ ಸಸ್ಯಾಹಾರಿ ಪ್ರಾಣಿ (ಬೇಟೆ) ಗಳ ಸಂಖ್ಯೆಯನ್ನು ನಿಯಂತ್ರಣದಲ್ಲಿಡುತ್ತವೆ. ಇದರಿಂದಾಗಿ ಅರಣ್ಯದ ಜೀವವೈವಿಧ್ಯತೆ ಮತ್ತು ಸಸ್ಯರಾಶಿ ಸುರಕ್ಷಿತವಾಗಿರುತ್ತದೆ. ಸರಳವಾಗಿ ಹೇಳಬೇಕೆಂದರೆ, ಹುಲಿಗಳಿರುವ ಕಾಡುಗಳು ಆರೋಗ್ಯಕರವಾಗಿರುತ್ತವೆ.
ಭಾರತದ ಸಾಂಸ್ಕೃತಿಕ ಪರಂಪರೆ: ಭಾರತದಲ್ಲಿ ಹುಲಿಗೆ ಅತ್ಯಂತ ಉನ್ನತ ಸ್ಥಾನವಿದೆ. ಇದು ಕೇವಲ ಒಂದು ಪ್ರಾಣಿಯಲ್ಲ, ಬದಲಾಗಿ ನಮ್ಮ ರಾಷ್ಟ್ರೀಯ ಪ್ರಾಣಿ, ಸಾಂಸ್ಕೃತಿಕ ಹಾಗೂ ಆಧ್ಯಾತ್ಮಿಕ ನೈಸರ್ಗಿಕ ಪರಂಪರೆಯ ಭಾಗವಾಗಿದೆ.


ಹುಲಿ ಸಂರಕ್ಷಣೆಯಲ್ಲಿ ಭಾರತದ ಸಾಧನೆ ಮತ್ತು ‘ಪ್ರಾಜೆಕ್ಟ್ ಟೈಗರ್’
ಪ್ರಸ್ತುತ ವಿಶ್ವದ ಒಟ್ಟು ಹುಲಿ ಜನಸಂಖ್ಯೆಯ ಸರಿಸುಮಾರು 75% ನಷ್ಟು ಹುಲಿಗಳಿಗೆ ಭಾರತವೇ ನೆಲೆಯಾಗಿದೆ. ಭಾರತದಲ್ಲಿ 3,000ಕ್ಕೂ ಹೆಚ್ಚು ಹುಲಿಗಳಿದ್ದು, ಜಗತ್ತಿನಲ್ಲಿಯೇ ಅತಿ ಹೆಚ್ಚು ಹುಲಿಗಳನ್ನು ಹೊಂದಿರುವ ಹೆಗ್ಗಳಿಕೆ ಭಾರತಕ್ಕಿದೆ.
ಭಾರತ ಸರಕಾರವು 1973 ರಲ್ಲಿ ಪ್ರಾರಂಭಿಸಿದ ‘ಪ್ರಾಜೆಕ್ಟ್ ಟೈಗರ್’ ಜಾಗತಿಕ ಮಟ್ಟದಲ್ಲಿ ಅತ್ಯಂತ ಯಶಸ್ವಿ ವನ್ಯಜೀವಿ ಸಂರಕ್ಷಣಾ ಕಾರ್ಯಕ್ರಮಗಳಲ್ಲಿ ಒಂದಾಗಿದೆ. ಇತ್ತೀಚಿನ ಆಧುನಿಕ ಮೇಲ್ವಿಚಾರಣಾ ತಂತ್ರಜ್ಞಾನಗಳು (ಮೋನಿಟರಿಂಗ್ ಟೆಕ್ನಿಕ್ಸ್) ಮತ್ತು ಸ್ಥಳೀಯ ಜನರ ಭಾಗವಹಿಸುವಿಕೆಯಿಂದಾಗಿ ಭಾರತದಲ್ಲಿ ಹುಲಿಗಳ ಸಂಖ್ಯೆ ಗಣನೀಯವಾಗಿ ಹೆಚ್ಚಾಗಿದೆ.


ಭಾರತದಲ್ಲಿ ಹುಲಿಗಳ ಸಂಖ್ಯೆಯ ಪ್ರಗತಿ:
1973: ಪ್ರಾಜೆಕ್ಟ್ ಟೈಗರ್ ಆರಂಭವಾದಾಗ 1,411 ಹುಲಿಗಳು ,2010: 1,706 ಹುಲಿಗಳು ,2014: 2,226 ಹುಲಿಗಳು ,2018: 2,967 ಹುಲಿಗಳು ,2022 (ಅಖಿಲ ಭಾರತ ಹುಲಿ ಗಣತಿ): 3,682 ಹುಲಿಗಳು
2010 ರಲ್ಲಿ ರಷ್ಯಾದಲ್ಲಿ ನಿಗದಿಪಡಿಸಿದ ಹುಲಿಗಳ ಸಂಖ್ಯೆಯನ್ನು ದ್ವಿಗುಣಗೊಳಿಸುವ ಜಾಗತಿಕ ಗುರಿಯನ್ನು ಭಾರತವು ನಿಗದಿತ ಸಮಯಕ್ಕಿಂತ ಮುಂಚಿತವಾಗಿಯೇ ಸಾಧಿಸಿ ಹೊಸ ದಾಖಲೆ ಬರೆದಿದೆ ಎಂದು ವನ್ಯಜೀವಿ ಉತ್ಸಾಹಿ ಸಂಜಯ್ ಚಿಮ್ವಾಲ್ ನೆನಪಿಸಿಕೊಂಡಿದ್ದಾರೆ.


ಕಾರ್ಬೆಟ್ ಹುಲಿ ಮೀಸಲು ಪ್ರದೇಶದ ಕೊಡುಗೆ
ಉತ್ತರಾಖಂಡದಲ್ಲಿರುವ ಆಲ್ಬರ್ಟ್ ಕಾರ್ಬೆಟ್ ಹುಲಿ ಅಭಯಾರಣ್ಯವು ಹುಲಿಗಳ ಸಂರಕ್ಷಣೆಯಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದೆ.
ವಿಸ್ತೀರ್ಣ ಮತ್ತು ಆವಾಸಸ್ಥಾನ: ಸರಿಸುಮಾರು 1,288 ಚದರ ಕಿಲೋಮೀಟರ್‍ಗಳಷ್ಟು ವಿಸ್ತೀರ್ಣವನ್ನು ಹೊಂದಿರುವ ಈ ಅಭಯಾರಣ್ಯವು ಹೇರಳವಾದ ನೀರಿನ ಮೂಲಗಳು (ರಾಮಗಂಗಾ ನದಿ), ದಟ್ಟವಾದ ಕಾಡುಗಳು ಮತ್ತು ಸುಂದರ ಕಣಿವೆಗಳನ್ನು ಹೊಂದಿದೆ.
ಹುಲಿ ಸಾಂದ್ರತೆ: ಜಾಗತಿಕವಾಗಿ ಅತ್ಯಂತ ಹೆಚ್ಚಿನ ಹುಲಿ ಸಾಂದ್ರತೆಯನ್ನು ಹೊಂದಿರುವ ಕಾಡುಗಳಲ್ಲಿ ಕಾರ್ಬೆಟ್ ಪ್ರಮುಖವಾದದ್ದು.


ಕಾರ್ಬೆಟ್‍ನಲ್ಲಿ ಹುಲಿಗಳ ಸಂಖ್ಯೆಯ ಬೆಳವಣಿಗೆ:
2006: ~150 ಹುಲಿಗಳು,2010: 184 ಹುಲಿಗಳು
2014: 215 ಹುಲಿಗಳು,2022: 260 ಕ್ಕೂ ಹೆಚ್ಚು ಹುಲಿಗಳು (ಸುತ್ತಮುತ್ತಲಿನ ಪ್ರದೇಶಗಳನ್ನು ಒಳಗೊಂಡಂತೆ ಈ ಸಂಖ್ಯೆ 300 ದಾಟಿದೆ ಎಂದು ಅಂದಾಜಿಸಲಾಗಿದೆ).
ಸ್ಥಳೀಯ ಆರ್ಥಿಕತೆಗೆ ಪ್ರವಾಸೋದ್ಯಮದ ಬೆಂಬಲ
ಕಾರ್ಬೆಟ್‍ನ ವೈಭವವನ್ನು ವೀಕ್ಷಿಸಲು ಭಾರತ ಹಾಗೂ ವಿದೇಶಗಳಿಂದ ಸಾವಿರಾರು ಪ್ರವಾಸಿಗರು ಆಗಮಿಸುತ್ತಾರೆ. ಬೆಳಿಗ್ಗೆ ಮತ್ತು ಸಂಜೆಯ ಜೀಪ್ ಸಫಾರಿಗಳು, ರಾಮಗಂಗಾ ನದಿಯ ದಡದಲ್ಲಿ ಸಮಯ ಕಳೆಯುವುದು ಮತ್ತು ಕಾರ್ಬೆಟ್ ವಸ್ತುಸಂಗ್ರಹಾಲಯ ವೀಕ್ಷಣೆ ಪ್ರವಾಸಿಗರ ಮುಖ್ಯ ಆಕರ್ಷಣೆಯಾಗಿದೆ.


ಈ ಪ್ರವಾಸೋದ್ಯಮದಿಂದಾಗಿ ಜಿಪ್ಸಿ ಚಾಲಕರು, ವಾಹನ ಮಾಲೀಕರು, ಪ್ರಕೃತಿ ಮಾರ್ಗದರ್ಶಕರು (ಓಚಿಣuಡಿe ಉuiಜes), ಹೋಟೆಲ್, ರೆಸಾರ್ಟ್ ಮತ್ತು ಹೋಂಸ್ಟೇ ಮಾಲೀಕರು ಸೇರಿದಂತೆ ಸಾವಿರಾರು ಸ್ಥಳೀಯರಿಗೆ ಉದ್ಯೋಗಾವಕಾಶಗಳು ದೊರೆತು ಸ್ಥಳೀಯ ಆರ್ಥಿಕತೆಗೆ ದೊಡ್ಡ ಉತ್ತೇಜನ ಸಿಕ್ಕಿದೆ.
ಹುಲಿಗಳು ಎದುರಿಸುತ್ತಿರುವ ಜಾಗತಿಕ ಸವಾಲುಗಳು ಮತ್ತು ಬೆದರಿಕೆಗಳು
ಕಳೆದ ನೂರು ವರ್ಷಗಳ ಅಂಕಿ-ಅಂಶಗಳನ್ನು ಗಮನಿಸಿದರೆ ಹುಲಿಗಳ ಪರಿಸ್ಥಿತಿ ಕಳವಳಕಾರಿಯಾಗಿದೆ: