Home ಜಿಲ್ಲೆ ಮಂಗಳೂರು ಅ.೩೦; ಕರಾವಳಿ ಕಲಾವಿದರ ಹಾರರ್‌ಚಿತ್ರ ’ಗಾಮಿನಿ’ ತೆರೆಗೆ

ಅ.೩೦; ಕರಾವಳಿ ಕಲಾವಿದರ ಹಾರರ್‌ಚಿತ್ರ ’ಗಾಮಿನಿ’ ತೆರೆಗೆ

ಪುತ್ತೂರು: ತಾಯಿಯ ಮಮತೆ, ಹಾಸ್ಯ, ಪ್ರೇಮ ಕಥೆಯೊಂದಿಗೆ ಕರಾವಳಿಯ ಕಲಾವಿದರು ನಟಿಸಿರುವ ಕನ್ನಡದ ಹಾರರ್ ಚಲನಚಿತ್ರ ’ಗಾಮಿನಿ’ ಅ.೩೦ರಂದು ರಾಜ್ಯಾದ್ಯಂತ ಬಿಡುಗಡೆಯಾಗಲಿದೆ.
ಪತ್ರಿಕಾಗೋಷ್ಟಿಯಲ್ಲಿ ಚಿತ್ರದ ನಾಯಕ ನಟಿ ಸುಳ್ಯದ ದೊಡ್ಡತೋಟದ ಶ್ರೇಯ ಸುಳ್ಯ ಅವರು ಮಾತನಾಡಿ, ಬೆಳ್ತಂಗಡಿ ಮೂಲದ ಗುರುಪ್ರಕಾಶ್ ಅವರ ನಿರ್ದೇಶನ ಮತ್ತು ನಿರ್ಮಾಪಕತ್ವದಲ್ಲಿ ಮೂಡಿ ಬಂದಿರುವ ಒಳ್ಳೆಯ ಕಥೆಯನ್ನು ಹೊಂದಿರುವ ಚಲನಚಿತ್ರವಾಗಿದೆ. ಇದರಲ್ಲಿ ತಾಯಿಯ ಮಮತೆ, ಸುಂದರವಾದ ಪ್ರೇಮದ ಕಥೆ, ಒಳ್ಳೆಯ ಹಾಸ್ಯ ಪ್ರಜ್ಞೆ ಮತ್ತು ಆಕ್ಷನ್ ಸೀನ್ ಇರುವ ಎಮೋಷನಲ್ ಹಾರರ್ ಚಲನ ಚಿತ್ರ ’ಗಾಮಿನಿ’ ಆಗಿದೆ. ಪುತ್ತೂರು, ಬೆಳ್ತಂಗಡಿ, ಸುಳ್ಯ, ಮಂಗಳೂರು, ಮಡಿಕೇರಿ ಕಲಾವಿದರೇ ಬಹುತೇಕ ನಟಿಸಿರುವ ಈ ಚಿತ್ರ ಕಷ್ಟ ಪಟ್ಟು ಪ್ರೀತಿಯಿಂದ ಮಾಡಿರುವ ಚಿತ್ರವಾಗಿದೆ ಎಂದರು.
ಚಿತ್ರದ ನಿರ್ದೇಶಕ ಮತ್ತು ನಿರ್ಮಾಪಕರಾಗಿರುವ ಬೆಳ್ತಂಗಡಿ ಮೂಲದ ಗುರುಪ್ರಕಾಶ್ ಅವರು ಮಾತನಾಡಿ, ತೀರಾ ಸಸ್ಪೆನ್ಸ್ ಮತ್ತು ಲವ್ ಸ್ಟೋರಿಯಾಗಿ ಮೂಡಿ ಬಂದಿರುವ ಈ ಚಿತ್ರವನ್ನು ಸುಮಾರು ೨೫ ದಿನದಲ್ಲಿ ಚಿತ್ರೀಕರಿಸಲಾಗಿದೆ. ಬೆಳ್ತಂಗಡಿ ಮತ್ತು ಬೆಂಗಳೂರಿನಲ್ಲಿ ಚಿತ್ರೀಕರಣ ಮಾಡಲಾಗಿದೆ. ೨೫ ಮಂದಿ ಕರಾವಳಿಯ ಕಲಾವಿದವರು ನಟಿಸಿದ್ದಾರೆ. ಇದರಲ್ಲಿ ಮೂರು ಹಾಡು ಮತ್ತು ಮೂರು ಪೈಟ್ ಇದೆ ಎಂದವರು. ಚಿತ್ರದ ನಾಯಕ ನಟ ಮಡಿಕೇರಿಯ ಅಂಜನ್ ತಮ್ಮಯ್ಯ ಅವರು ಮಾತನಾಡಿ ಚಿತ್ರವನ್ನು ಎಲ್ಲರು ಬಂದು ವೀಕ್ಷಿಸುವಂತೆ ಮನವಿ ಮಾಡಿದರು. ಪತ್ರಿಕಾಗೋಷ್ಟಿಯಲ್ಲಿ ಚಿತ್ರ ನಟರಾದ ರಾಜೀವ್ ಬಿ.ಎಚ್, ಉಷಾ ಲಕ್ಷ್ಮಣ ಪೂಜಾರಿ ಬೆಳ್ಳಿಪ್ಪಾಡಿ, ಗಣೇಶ್ ಪೂಜಾರಿ ಅಲಂಗ, ಚಿತ್ರದ ವಿತರಕ ಬಾಲಕೃಷ್ಣ ಶೆಟ್ಟಿ ಕುಕ್ಕಾಡಿ ಉಪಸ್ಥಿತರಿದ್ದರು.,