Home ಸುದ್ದಿ ರಾಷ್ಟ್ರೀಯ ಸಿನಿಮಾ ನಟರ ಪಕ್ಷ ಎಂದವರಿಗೆ ಚುನಾವಣೆಯಲ್ಲಿ ಉತ್ತರ: ವಿಜಯ್

ಸಿನಿಮಾ ನಟರ ಪಕ್ಷ ಎಂದವರಿಗೆ ಚುನಾವಣೆಯಲ್ಲಿ ಉತ್ತರ: ವಿಜಯ್

ಚೆನ್ನೈ,ಜೂ,23- ಸಿನಿಮಾ ನಟರ ಪಕ್ಷ ಎಂದು ನಮ್ಮನ್ನು ಕೆಲವರು ಅಪಹಾಸ್ಯ ಮಾಡಿದರು,ಅವರಿಗೆ ವಿಧಾನಸಭೆ ಚುನಾವಣೆಯಲ್ಲಿ ಉತ್ತರ ನೀಡಿದ್ದೇವೆ ಎಂದು ತಿರುಗೇಟು ನೀಡಿದ ತಮಿಳುನಾಡು ಮುಖ್ಯಮಂತ್ರಿ ಜೋಸೆಫ್ ವಿಜಯ್, ರಾಜ್ಯದಲ್ಲಿ ಹಿಂದಿ ಏರಿಕೆಯನ್ನು ಪ್ರಬಲವಾಗಿ ವಿರೋಧಿಸಲಾಗುವುದು ಎಂದು ಹೇಳಿದ್ದಾರೆ.
“ನಾವು ಟೀಕೆಗಳಿಗೆ ತಲೆಕೆಡಿಸಿಕೊಳ್ಳುವುದಿಲ್ಲ” ಮತ್ತು ಟೀಕೆ ಮಾಡುವರನ್ನು ಎಂದಿಗೂ ಧ್ವೇಷಿಸುವುದಿಲ್ಲ ನಮ್ಮ ರಾಜಕೀಯ ಪಾರದರ್ಶಕವಾಗಿದೆ. ನಮಗೆ ಶೇಕಡಾ 35 ರಷ್ಟು ಮತಗಳು ಬಂದಿವೆ. ಕೆಲವರು ಎರಡು ವರ್ಷಗಳಲ್ಲಿ ಸುಲಭವಾಗಿ ಅಧಿಕಾರಕ್ಕೆ ಬಂದಿದ್ದೇವೆ ಎಂದು ಹೇಳುತ್ತಿದ್ದಾರೆ. ಅನೇಕ ಪಿತೂರಿಗಳು ಮತ್ತು ನಿರ್ಬಂಧ ದಾಟಿ ಅಧಿಕಾರಕ್ಕೆ ಬಂದಿದ್ದೇವೆ, ನಾವು ಇನ್ನೂ ಬಹುದೂರ ಸಾಗುವ ದಾರಿ ನಮ್ಮ ಮುಂದೆ ಇದೆ ಎಂದಿದ್ದಾರೆ.


ಏಪ್ರಿಲ್-ಮೇ ಚುನಾವಣೆಯಲ್ಲಿ ಟಿವಿಕೆಯ ಅದ್ಭುತ ಯಶಸ್ಸಿನ ವಿಧಾನಸಭೆಯಲ್ಲಿ ತಮ್ಮ ಮೊದಲ ಔಪಚಾರಿಕ ಭಾಷಣದಲ್ಲಿ ಈ ವಿಷಯ ಪ್ರಸ್ತಾಪಿಸಿದ ಅವರು ತಮಿಳಗ ವೆಟ್ರಿ ಕಳಗಂ ಅನ್ನು ‘ನಟರ ಪಕ್ಷ’ ಎಂದು ಹಣೆಪಟ್ಟಿ ಕಟ್ಟಿರುವ ವಿಮರ್ಶಕರಿಗೆ ತಿರುಗೇಟು ನೀಡಿದ್ದಾರೆ.


ಹಿಂದಿ ‘ಹೇರಿಕೆ’ ಮತ್ತು ಕಳೆದ ವರ್ಷ ಸೆಪ್ಟೆಂಬರ್ ಕರೂರ್ ಕಾಲ್ತುಳಿತದಿಂದ ಹಿಡಿದು ನೀಟ್ ರದ್ದುಗೊಳಿಸುವ ಬೇಡಿಕೆಗಳವರೆಗೆ ಅನೇಕ ಎಳೆಯಾಗಿ ಬಿಡಿಸಿಟ್ಟ ಅವರುಟಿವಿಕೆಯ ರಾಜಕೀಯ ಅಧಿಕಾರ ಮತ್ತು ಅವರ ಆಡಳಿತಾತ್ಮಕ ಅಧಿಕಾರದ ಅನುಮಾನಿಸಿ ಟೀಕಿಸಿದವರಿಗೆ ಕೆಲಸದ ಮೂಲಕವೇ ಉತ್ತರ ನೀಡುತ್ತೇವೆ ಎಂದಿದ್ದಾರೆ.
ವಿಧಾನಸಭೆ ಚುನಾವಣೆಯ ಸಮಯದಲ್ಲಿ ತಮ್ಮ ಪಕ್ಷದ ವಿರುದ್ದ ಏನೆಲ್ಲಾ “ಪಿತೂರಿ ಮಾಡಿ ನಿರ್ಬಂಧ ವಿಧಿಸಿದರೂ ನಾವು ಜಯಗಳಿಸಿದ್ದೇವೆ, ಪೂರ್ಣ ಪ್ರಮಾಣದಲ್ಲಿ ನÀಮಗೆ ಅಧಿಕಾರ ಸುಲಭವಾಗಿ ಸಿಗಲಿಲ್ಲ. ತಮಿಳು ಜನರ ಹೃದಯದಲ್ಲಿ ಸ್ಥಾನ ಪಡೆಯಲು ಎದುರಿಸಿದ ಹೋರಾಟಗಳು ನಮಗೆ ಮಾತ್ರ ತಿಳಿದಿವೆ… ಕೆಲವರು ಅರ್ಥವಾಗದವರಂತೆ ವರ್ತಿಸುತ್ತಾರೆ ಮತ್ತು ‘ಅವರು ಕೇವಲ ನಟ ಮತ್ತು ಪಕ್ಷ ಕೇವಲ ನಟರ ಪಕ್ಷ’ ಎಂದು ನಮ್ಮನ್ನು ಟೀಕಿಸುತ್ತಾರೆ ಎಲ್ಲರಿಗೂ ಕೆಲಸದ ಮೂಲಕವೇ ಉತ್ತರ ನೀಡುತ್ತೇವೆ ಎಂದು ತಿಳಿಸಿದ್ದಾರೆ.


ಕರೂರ್ ಕಾಲ್ತುಳಿತದ ಬಗ್ಗೆ ಚುನಾವಣಾ ರ್ಯಾಲಿಯಲ್ಲಿ “41 ಜನರು ಪ್ರಾಣ ಕಳೆದುಕೊಂಡ ದುರಂತದ ಬಗ್ಗೆ ನನ್ನ ನೋವನ್ನು ವ್ಯಕ್ತಪಡಿಸಲು ಸಾಧ್ಯವಿಲ್ಲ. ಆ ನೋವು ಎಂದಿಗೂ ನನ್ನನ್ನು ಬಿಡುವುದಿಲ್ಲ. ಆದರೆ ಅವರು ನಮ್ಮ ಮೇಲೆ ಹೊರಿಸಿದ ಆ ಆರೋಪವೂ ಸಹ. ಕ್ರೂರ. ಇದು ರಾಜಕೀಯ ಇಷ್ಟೊಂದು ಕ್ರೂರವೇ ಎಂದು ಪ್ರಶ್ನಿಸಿದ್ದಾರೆ.
ಈ ಹಿಂದೆ ಅಧಿಕಾರದಲ್ಲಿದ್ದ ದ್ರಾವಿಡ ಮುನ್ನೇತ್ರ ಕಳಗಂ ಮತ್ತು ಮಾಜಿ ಮುಖ್ಯಮಂತ್ರಿ ಎಂ.ಕೆ. ಸ್ಟಾಲಿನ್ ಅವರನ್ನು ಉಲ್ಲೇಖಿಸಿ ಈ ಪುನರಾವರ್ತನೆ ಮಾಡಲಾಗಿದೆ ಎಂದು ವ್ಯಾಪಕವಾಗಿ ಪರಿಗಣಿಸಲಾಗಿದೆ. ವಿಜಯ್ ಮತ್ತು ಟಿವಿಕೆ ಈ ಕಾಲ್ತುಳಿತಕ್ಕೆ ನೇರವಾಗಿ ಕಾರಣ ಎಂದು ಅವರು ಆರೋಪಿಸಿದ್ದರು ಪೆÇಲೀಸರು ಸೂಚಿಸಿದ ಜನಸಂದಣಿ ನಿಯಂತ್ರಣ ಕ್ರಮಗಳನ್ನು ಇಬ್ಬರೂ ಅನುಸರಿಸಿದ್ದರೆ ಆ ಘಟನೆ ನಡೆಯುತ್ತಿರಲಿಲ್ಲ, ಘಟನೆ ನಡೆದು ಹೋಗಿದೆ, ಅವರಿಗಾಗಿ ಹೃದಯ ಮಿಡಿಯುತ್ತಿದೆ ಎಂದಿದ್ದಾರೆ.
ನಟ-ರಾಜಕಾರಣಿ ಸಿ.ಎನ್. ಅಣ್ಣಾದೊರೈ ನೇತೃತ್ವದ ಡಿಎಂಕೆ ಮತ್ತು ಅದರ ನಂತರದ ಪ್ರತಿಸ್ಪರ್ಧಿ, ತಮಿಳು ನಟ-ರಾಜಕಾರಣಿ-ಮುಖ್ಯಮಂತ್ರಿ ಎಂ.ಜಿ. ರಾಮಚಂದ್ರನ್ ನೇತೃತ್ವದ ಅಖಿಲ ಭಾರತ ಅಣ್ಣಾ ದ್ರಾವಿಡ ಮುನ್ನೇತ್ರ ಕಳಗಂ ಗೆದ್ದ 1967 ಮತ್ತು 1977 ರ ಚುನಾವಣೆಗಳನ್ನು ನೆನಪಿಸಿಕೊಂಡು ತಮಿಳು ನಟರ ರಾಜಕೀಯ ಪ್ರವೇಶದ ಬಗ್ಗೆ ಮಾಹಿತಿ ಹಂಚಿಕೊಂಡರು.


“1967 ರಲ್ಲಿ ಅಣ್ಣಾದೊರೈ ಸಾಮಾನ್ಯ ಜನರಿಗಾಗಿ ಸರ್ಕಾರ ರಚಿಸಿದ್ದರಯ 1977 ರಲ್ಲಿ ಎಂಜಿಆರ್ ಕೂಡ ಇದೇ ಹಾಡಿ ಹಿಡಿದಿದ್ದರು ಈಗ ವಿಜಯ್ ಜೋಸೆಫ್ ಆ ಹಾದಿಯಲ್ಲಿದ್ದಾರೆ ಎಂದಿದ್ದಾರೆ.