Home ಜಿಲ್ಲೆ ಮೈಸೂರು ಸಾರಿಗೆ ಬಸ್ ಕಾರು ಮುಖಾಮುಖಿ ಡಿಕ್ಕಿ ಕಾರು ಚಾಲಕನಿಗೆ ತೀವ್ರ ಪೆಟ್ಟು

ಸಾರಿಗೆ ಬಸ್ ಕಾರು ಮುಖಾಮುಖಿ ಡಿಕ್ಕಿ ಕಾರು ಚಾಲಕನಿಗೆ ತೀವ್ರ ಪೆಟ್ಟು

ಸಂಜೆವಾಣಿ ವಾರ್ತೆ
ಹನೂರು.ಮಾ.4:
– ಸಾರಿಗೆ ಬಸ್ ಮತ್ತು ಕಾರು ಮುಖಾಮುಖಿ ಡಿಕ್ಕಿಯಾಗಿ ಕಾರು ಚಾಲಕನಿಗೆ ಗಂಭೀರ ಗಾಯವಾಗಿರುವ ಘಟನೆ ಇಂದು ಮಧ್ಯಾಹ್ನ ಹನೂರು ಪಟ್ಟಣ ಸಮೀಪದ ಅಗ್ನಿಶಾಮಕ ಶಾಖೆಯ ಹತ್ತಿರ ಮುಖ್ಯ ರಸ್ತೆಯಲ್ಲಿ ಜರುಗಿದೆ.


ತಾಲೂಕಿನ ಮಲೆ ಮಹದೇಶ್ವರ ಬೆಟ್ಟದಿಂದ ಕೊಳ್ಳೇಗಾಲದ ಕಡೆಗೆ ಹೋಗುತ್ತಿದ್ದ ಸಾರಿಗೆ ಬಸ್ (ಏಂ10 ಈ 0572) ಮತ್ತು ಮಂಗಲ ಗ್ರಾಮದಿಂದ ಹನೂರಿನ ಕಡೆಗೆ ಹೋಗುತ್ತಿದ್ದ ಸ್ವಿಫ್ಟ್ ಡಿಜರ್ ಕಾರು (ಏಂ 41 ಓ 7520) ಎರಡು ಮುಖಾಮುಖಿ ಡಿಕ್ಕಿಯಾಗಿದೆ.


ಸಾರಿಗೆ ಬಸ್ ಹಾಗೂ ಕಾರಿನ ನಡುವೆ ಡಿಕ್ಕಿ ಹೊಡೆದ ಪರಿಣಾಮವಾಗಿ ಕಾರು ಬಸ್ ಮುಂಭಾಗ ತೀವ್ರ ಜಖಂ ಗೊಂಡಿದೆ. ಈ ಘಟನೆಯಲ್ಲಿ ಕಾರು ಚಾಲಕ ಮಂಗಲ ಗ್ರಾಮದ z
Éೂರೆ ಬಿನ್ ದೊರೆಸ್ವಾಮಿ ಇವರಿಗೆ ತೀವ್ರ ಗಾಯವಾಗಿ ಕಾಮಗೆರೆ ಹೋಲಿ ಕ್ರಾಸ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಸಾರಿಗೆ ಬಸ್ ಚಾಲಕ ಹಾಗೂ ಕಂಡಕ್ಟರ್ ಗೆ ಸಣ್ಣಪುಟ್ಟ ಗಾಯಗಳಾಗಿದೆ ಎಂದು ತಿಳಿದು ಬಂದಿದೆ.


ವಿಷಯ ತಿಳಿದ ಹನೂರು ಪೆÇಲೀಸ್ ಠಾಣೆ ಸರ್ಕಲ್ ಇನ್ಸ್ಪೆಕ್ಟರ್ ಆನಂದಮೂರ್ತಿ ಅವರು ಸಿಬ್ಬಂದಿಗಳ ಜೊತೆಗೂಡಿ ಘಟನೆ ಬಗ್ಗೆ ಮಾಹಿತಿ ಪಡೆದರು. ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.