Home Uncategorized ಸಂವಿಧಾನ ದೇಶದ ಬೆನ್ನೆಲುಬು; ಟಿ ಹೆಚ್ ಎಂ ಬಸವರಾಜ್

ಸಂವಿಧಾನ ದೇಶದ ಬೆನ್ನೆಲುಬು; ಟಿ ಹೆಚ್ ಎಂ ಬಸವರಾಜ್

(ಸಂಜೆವಾಣಿ ವಾರ್ತೆ)

ಬಳ್ಳಾರಿ.ಮಾ.9: ನಗರದ ಅಲ್ಲಂ ಸುಮಂಗಳಮ್ಮ ಸ್ಮಾರಕ ಮಹಿಳಾ ಮಹಾವಿದ್ಯಾಲಯದಲ್ಲಿ ಆಯೋಜಿಸಿದ್ದ ನಮ್ಮ ಸಂವಿಧಾನ ಸಂಗೀತಯಾನ ಕಾರ್ಯಕ್ರಮವನ್ನು ಕರ್ನಾಟಕ ಇತಿಹಾಸ ಅಕಾಡೆಮಿಯ ಜಿಲ್ಲಾಧ್ಯಕ್ಷ ಟಿ.ಹೆಚ್.ಎಂ. ಬಸವರಾಜ್ ಮಾ.7 ರಂದು ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸಂವಿಧಾನ ಯಾವಾಗ ಮಾಡಿದರು, ಯಾರು ಮಾಡಿದರು, ಏಕೆ ಮಾಡಿದರು, ಅದರ ಉದ್ದೇಶವೇನು ಎಂಬುದರ ಬಗ್ಗೆ ತಿಳಿಸುತ್ತ. ರಾಷ್ಟ್ರಪತಿ, ಉಪರಾಷ್ಟ್ರಪತಿ, ಪ್ರಧಾನಿ ಮುಖ್ಯಮಂತ್ರಿಗಳ ಆಯ್ಕೆ. ವಾಯು ಸೇನೆ ಭೂ ಸೇನೆ ಜಲ ಸೇನೆ ಕಮಾಂಡರ, ರಾಜ್ಯಪಾಲರನ್ನು ಯಾವ ರೀತ೮ ಆಯ್ಕೆ ಮಾಡಬೇಕು ಮತ್ತು ಅವರ ಕರ್ತವ್ಯಗಳೇನು .ದಲಿತರಿಗೆ, ಅಲ್ಪಸಂಖ್ಯಾತರಿಗೆ, ಪ್ರತಿಭಾವಂತರಿಗೆ ಸಹಾಯ ಹೇಗೆ ಮಾಡಬೇಕು ಎಂಬ ರೂಪರೇಷಗಳನ್ನು ಸಂವಿಧಾನದಲ್ಲಿ ಬರೆದಿದ್ದಾರೆಂದರು. ಬಸವಣ್ಣನವರು 12ನೇ ಶತಮಾನದಲ್ಲಿ ಅನುಭವ ಮಂಟಪದಲ್ಲಿ ಸಮ ಸಮಾಜದ ಸಂವಿಧಾನದ ಕಲ್ಪನಯನ್ನು ಮೂಡಿಸಿದ್ದರೆಂದರು.

ಸರ್ಕಾರದ ಆದೇಶದ ಪ್ರಕಾರ ಕಲಾ ಪ್ರತಿಷ್ಠಾನದ ಅಧ್ಯಕ್ಷ ಎಲ್ಲಪ್ಪ ಭಂಡಾರದವರು ಸಂವಿಧಾನ ಗೀತೆಗಳು ವಚನಗಳನ್ನು ಹಾಡಿದರು. ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಂಶುಪಾ ಭೂಪಂ ಸತೀಶ್ ರವರು ಸರ್ಕಾರ ಇಂತಹ ಕಾರ್ಯಕ್ರಮಗಳ ಆಯೋಜನೆಗೆ ಸುತ್ತೋಲೆ ಹೊರಡಿಸಿರುವುದು ಸ್ವಾಗತ ಅರ್ಹ ಎಂದರು.

ವೇದಿಕೆ ಮೇಲೆ ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾಧ್ಯಕ್ಷ ಡಾ. ನಿಶ್ಟಿ ರುದ್ರಪ್ಪ, ಡಾ. ಸೈದಾ ತನ್ವೀರ್ ,ಮಂಜುನಾಥ್ ಗೌಡ, ಸುಂದರ್ಮೂರ್ತಿ ಇದ್ದರು. ನಂದಿನಿ ವಿ ಹೆಚ್ ಎಂ ನಿರೂಪಿಸಿದರು, ಮೌನಿಕ ಮತ್ತು ಮುತ್ತಮ್ಮ ಪ್ರಾರ್ಥಿಸಿದರು ಡಾಕ್ಟರ್ ಮಂಗಳ ಬಿಎನ್ ಸ್ವಾಗತಿಸಿದರು ಸತೀಶ ಜಖನ್ನವರ್ ವಂದಿಸಿದರು ಚೋರ್ನೂರ್ ಕೊಟ್ಟಪ್ಪನವರು ಹಾಜರಿದ್ದರು