Home ಜಿಲ್ಲೆ ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

ತೋಟಗಾರಿಕೆ ಮಹಾವಿದ್ಯಾಲಯದಲ್ಲಿ ಅಂತರರಾಷ್ಟ್ರೀಯ ಕಾರ್ಮಿಕರ ದಿನಾಚರಣೆ

ಬೀದರ, ಮೇ.೦೨: ಬೀದರ ತೋಟಗಾರಿಕೆ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆ ಘಟಕದಿಂದ ಶುಕ್ರವಾರ ಅಂತರಾಷ್ಟ್ರೀಯ ಕಾರ್ಮಿಕರ ದಿನಾಚರಣೆಯನ್ನು ಕಾಲೇಜಿನಲ್ಲಿ ಆಚರಿಸಲಾಯಿತು.
ಕಾಲೇಜಿನ ಡೀನ್ ಡಾ. ಎಸ್.ವಿ., ಪಾಟೀಲ್ ಅಧ್ಯಕ್ಷತೆ ವಹಿಸಿ ಮಾತನಾಡಿ,ಸಮಾಜದ ಅಭಿವೃದ್ಧಿಗೆ ಕಾರ್ಮಿಕರ ಕೊಡುಗೆ ಅತೀ ಮಹತ್ತರ. ಪ್ರತಿಯೊಬ್ಬ ಕಾರ್ಮಿಕರ ಶ್ರಮದ ಮೌಲ್ಯವನ್ನು ಅರಿತು ಗೌರವಿಸಬೇಕು. ಕಾರ್ಮಿಕರ ಶ್ರಮ ಗೌರವಿಸುವ ಹಾಗೂ ವಿದ್ಯಾರ್ಥಿಗಳಲ್ಲಿ ಶ್ರಮದ ಮಹತ್ವದ ಬಗ್ಗೆ ಜಾಗೃತಿ, ಸಾಮಾಜಿಕ ಜವಾಬ್ದಾರಿಯ ಅರಿವು ಮೂಡಿಸುವ ಉದ್ದೇಶದಿಂದ ಇಂತಹ ಕಾರ್ಯಕ್ರಮವನ್ನು ಆಚರಿಸಲಾಗುತ್ತಿದೆ ಎಂದು ಹೇಳಿದರು.
ಅವರು ಕಾರ್ಮಿಕರ ಹಕ್ಕು ಮತ್ತು ಕರ್ತವ್ಯಗಳು ಹಾಗೂ ಅವರ ಕಲ್ಯಾಣಕ್ಕಾಗಿ ಸರ್ಕಾರ ಕೈಗೊಂಡಿರುವ ವಿವಿಧ ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದರು. ಎಲ್ಲ ಕಾರ್ಮಿಕರು ತಮ್ಮ ತಮ್ಮ ಕ್ಷೇತ್ರದಲ್ಲಿ ಅಚ್ಚುಕಟ್ಟಾಗಿ ಕಾರ್ಯನಿರ್ವಹಿಸುವ ಮೂಲಕ “ಶ್ರಮವೇ ದೇವರು” ಎಂಬ ಸಂದೇಶವನ್ನು ಸಾರುತ್ತಿದ್ದಾರೆಂದು ಅಭಿಪ್ರಾಯಪಟ್ಟರು.
ವಿದ್ಯಾರ್ಥಿನಿಯಾದ ಕು. ಮಧುಮತಿ ಮಾತನಾಡಿ,ಯಾವುದೇ ಕೆಲಸ ಮೇಲು, ಕೀಳಲ್ಲ. ಎಲ್ಲಾ ಕೆಲಸಗಳು ಸಮಾನವಾಗಿವೆ. ಪ್ರತಿಯೊಂದು ಕೆಲಸಕ್ಕೆ ತನ್ನದೇಯಾದ ಘನತೆ ಮತ್ತು ಮಹತ್ವವಿರುವ ಪ್ರಯುಕ್ತ ಪ್ರತಿ ಕೆಲಸವನ್ನು ಗೌರವಿಸಬೇಕೆಂದರು.
ಕಾಲೇಜಿನ ಡೀನ್ ಡಾ.ಎಸ್.ವಿ.ಪಾಟೀಲ್, ಸಿಬ್ಬಂದಿಗಳಾದ ಡಾ. ವಿಜಯ ಮಹಾಂತೇಶ, ಡಾ. ಎಸ್. ಎಮ್. ಪ್ರಸನ್ನ ಮತ್ತು ಶ್ರೀ. ಆಂಜನೇಯ ಎನ್. ಮತ್ತಿತರರು ಶ್ರಮಜೀವಿ ಕಾರ್ಮಿಕರನ್ನು ಸನ್ಮಾನಿಸಿದರು.ಡಾ. ಶ್ರೀನಿವಾಸ ಎನ್., ಡಾ. ಅರವಿಂದ ರಾಠೋಡ, ಮತ್ತಿತರರು ಹಾಜರಿದ್ದರು. ಎನ್.ಎಸ್.ಎಸ್.ಅಧಿಕಾರಿ ಡಾ. ವಿಜಯಮಹಾಂತೇಶ, ಕಾರ್ಯಕ್ರಮದ ನೇತೃತ್ವ ವಹಿಸಿದರು.ವಿದ್ಯಾರ್ಥಿನಿ ಕು. ಸಾನಿಯಾ ಸ್ವಾಗತಿಸಿದರು.